ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳ
ಬೆಂಗಳೂರು, ಜೂ. ೧೯: ರಾಜ್ಯ ಸರ್ಕಾರ ಗುತ್ತಿಗೆ ಬೆನ್ನಲ್ಲೇ ಅಲ್ಪಸಂಖ್ಯಾತರಿಗೆ ಮತ್ತೊಂದು ಯೋಜನೆಯಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದು, ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಶೇ. ೧೦ ರಿಂದ ೧೫ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ. ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, "ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆಯು ಜಾರಿಗೆ ತರುತ್ತಿರುವ ವಿವಿಧ ವಸತಿ ಯೋಜನೆಯಲ್ಲಿ, ಅಲ್ಪಸಂಖ್ಯಾತರ ಮೀಸಲಾತಿಯನ್ನು ಶೇ. ೧೦ ರಿಂದ ೧೫ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ" ಎಂದು ತಿಳಿಸಿದರು. ರಾಜ್ಯದ ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಸಂಖ್ಯೆಯ ಜನ ವಸತಿ ರಹಿತರಾಗಿದ್ದು, ಇದನ್ನು ಗಮನಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಜೂನ್ ೪ ರಂದು ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ೧೧ ಜನರು ಸಾವನ್ನಪ್ಪಿದ ನಂತರ ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬAಧಿಸಿದ ಮಸೂದೆಯನ್ನು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಇಸ್ರೇಲ್ ತೊರೆಯಲು ಬಯಸುವ ಭಾರತೀಯ ನಾಗರಿಕರ ಸ್ಥಳಾಂತರಕ್ಕೆ ಮುಂದಾದ ಕೇಂದ್ರ ಸರ್ಕಾರ!
ನವದೆಹಲಿ, ಜೂ. ೧೯: ಇರಾನ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ತೊರೆಯಲು ಬಯಸುವ ಭಾರತೀಯರ ಸ್ಥಳಾಂತರಕ್ಕೆ ಭಾರತ ಸರ್ಕಾರ ನಿರ್ಧರಿಸಿದೆ. ಇಸ್ರೇಲ್‌ನ ಬೀರ್‌ಶೆಬಾ ಪ್ರದೇಶದಲ್ಲಿನ ಆಸ್ಪತ್ರೆಯೊಂದಕ್ಕೆ ಇರಾನ್‌ನ ಕ್ಷಿಪಣಿ ದಾಳಿ ನಡೆದ ಕೆಲ ತಾಸುಗಳ ನಂತರ ತನ್ನ ನಾಗರಿಕರನ್ನು ಸ್ಥಳಾಂತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. "ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್‌ನಿಂದ ಹೊರ ಹೋಗಲು ಬಯಸುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಭೂ ಗಡಿಗಳ ಮೂಲಕ ತದನಂತರ ವಿಮಾನದ ಮೂಲಕ ಇಸ್ರೇಲ್‌ನಿಂದ ಭಾರತಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದೆ. ಇಸ್ರೇಲ್‌ನೊಂದಿಗಿನ ಸಂಘರ್ಷವನ್ನು ಕೈಬಿಡುವ ಲಕ್ಷಣಗಳು ಕಾಣಿಸದ ಹಿನ್ನೆಲೆಯಲ್ಲಿ ಇರಾನ್‌ನಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು "ಆಪರೇಷನ್ ಸಿಂಧು" ಕಾರ್ಯಾಚರಣೆಯನ್ನು ಭಾರತ ಬುಧವಾರ ಪ್ರಾರಂಭಿಸಿತ್ತು. ಯುದ್ಧಪೀಡಿತ ಇರಾನ್‌ನಿಂದ ಅರ್ಮೇನಿಯಾಗೆ ಸ್ಥಳಾಂತರಿಸಲ್ಪಟ್ಟ ೧೧೦ ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಬುಧವಾರ ತಡರಾತ್ರಿ ನವದೆಹಲಿಗೆ ಬಂದಿಳಿಯಿತು. ಇಸ್ರೇಲ್ ರಾಯಭಾರ ಕಚೇರಿ ಸಾಧ್ಯವಾದಷ್ಟು ಎಲ್ಲಾ ನೆರವು ನೀಡುವ ನಿಟ್ಟಿನಲ್ಲಿ ಭಾರತೀಯ ಸಮುದಾಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈಗಾಗಲೇ ನೋಂದಾಯಿಸದ ಎಲ್ಲಾ ಭಾರತೀಯರು (hಣಣಠಿs://ತಿತಿತಿ.iಟಿಜembಚಿssಥಿisಡಿಚಿeಟ.gov.iಟಿ/iಟಿಜiಚಿಟಿ_ಟಿಚಿಣioಟಿಚಿಟ_ಡಿeg)ನಲ್ಲಿ ಟೆಲ್‌ಅವಿವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಆಸ್ಪತ್ರೆ ದಾಳಿ ಬೆನ್ನಲ್ಲೇ ಖಮೇನಿಗೆ ಇಸ್ರೇಲ್ ಎಚ್ಚರಿಕೆ!
ಟೆಲ್‌ಅವಿವ್, ಜೂ. ೧೯: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬೆದರಿಕೆ ಹಾಕಿದ್ದಾರೆ. ಖಮೇನಿ ಇನ್ನು ನಿಮ್ಮನ್ನು ಜೀವಂತವಾಗಿರಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಟೆಲ್ ಅವಿವ್ ಬಳಿಯ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆ ಮೇಲೆ ಇರಾನಿನ ಕ್ಷಿಪಣಿ ದಾಳಿಯ ನಂತರ ಕಾಟ್ಜ್ ಹೇಳಿಕೆ ಬಂದಿದೆ. ಈ ದಾಳಿಗೆ ಖಮೇನಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಖಮೇನಿ ತನ್ನ ಅಪರಾಧಗಳಿಗೆ ಬೆಲೆ ತೆರಬೇಕಾಗುತ್ತದೆ ಎಂದು ಕಾಟ್ಜ್ ಕೂಡ ಹೇಳಿದರು. ಹೇಡಿತನದ ಇರಾನಿನ ಸರ್ವಾಧಿಕಾರಿ ಬಲವಾದ ಬಂಕರ್‌ನಲ್ಲಿ ಅಡಗಿ ಕುಳಿತು ಇಸ್ರೇಲಿ ಆಸ್ಪತ್ರೆಗಳು ಮತ್ತು ವಸತಿ ಕಟ್ಟಡಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಾನೆ. ಇವು ಅತ್ಯಂತ ಗಂಭೀರ ರೀತಿಯ ಯುದ್ಧ ಅಪರಾಧಗಳು ಮತ್ತು ಖಮೇನಿಯನ್ನು ತನ್ನ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಕಾಟ್ಜ್ಘಿನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೇಲಿ ಸೇನೆ ಇರಾನಿನ ನಾಯಕನನ್ನು ನಿರ್ಮೂಲನೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್‌ಗೆ ಇರುವ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ಮತ್ತು ಅಯತೊಲ್ಲಾ ಆಡಳಿತವನ್ನು ದುರ್ಬಲಗೊಳಿಸಲು ಇರಾನ್‌ನಲ್ಲಿನ ಕಾರ್ಯತಂತ್ರದ ಗುರಿಗಳು ಮತ್ತು ಟೆಹ್ರಾನ್‌ನಲ್ಲಿರುವ ಸರ್ಕಾರಿ ಗುರಿಗಳ ವಿರುದ್ಧ ದಾಳಿಯ ತೀವ್ರತೆಯನ್ನು ಹೆಚ್ಚಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ನಾನು ಐಡಿಎಫ್‌ಗೆ ಸೂಚನೆ ನೀಡಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದರು. ದಾಳಿಯಲ್ಲಿ ಕನಿಷ್ಟ ೪೭ ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ರಕ್ಷಣಾ ಕಾರ್ಯಕರ್ತರು ವರದಿ ಮಾಡಿದ್ದಾರೆ. ದಾಳಿಯ ಪ್ರಮುಖ ಗುರಿ ಇಸ್ರೇಲಿ ಸೇನಾ ಕಮಾಂಡ್ ಮತ್ತು ಗುಪ್ತಚರ ನೆಲೆ ಮತ್ತು ಸೊರೊಕಾ ಆಸ್ಪತ್ರೆಯ ಸಮೀಪದಲ್ಲಿರುವ ಗವ್-ಯಾಮ್ ತಂತ್ರಜ್ಞಾನ ಉದ್ಯಾನವನದಲ್ಲಿರುವ ಸೇನಾ ಗುಪ್ತಚರ ಶಿಬಿರವಾಗಿತ್ತು ಎಂದು ಇರಾನ್‌ನ ರಾಜ್ಯ ಸುದ್ದಿ ಸಂಸ್ಥೆ ಹೇಳಿದೆ.