ವೀರಾಜಪೇಟೆ, ಜೂ. ೧೯: ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ‘ಶ್ರೀ ಕಾವೇರಿ ಯೋಗ ಕೇಂದ್ರದ ೨೬ನೇ ವರ್ಷದ ಯೋಗ ವಾರ್ಷಿಕೋತ್ಸವ ತಾ. ೨೧ ರಂದು ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ರುವ ಶ್ರೀ ಕಾವೇರಿ ಆಶ್ರಮದಲ್ಲಿ ನಡೆಯಲಿದೆ.

ತಾ. ೨೧ ರಂದು ಮುಂಜಾನೆ ೬ ರಿಂದ ೭ ಗಂಟೆವರೆಗೆ ದಿನನಿತ್ಯದಂತೆ ಯೋಗ ತರಬೇತಿ ನಡೆಯಲಿದೆ.

ನಂತರ ೮.೩೦ ರಿಂದ ಯೋಗ ದಿನಾಚರಣೆ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ ಎಂದು ಯೋಗ ತರಬೇತಿಯ ಗುರು ಸೀತಾರಾಮ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು ಕಳೆದ ೨೫ ವರ್ಷಗಳಿಂದಲೂ ಉಚಿತ ಯೋಗ ತರಬೇತಿ ನಡೆಸಿಕೊಂಡು ಬರುತ್ತಿದ್ದು ದಿನನಿತ್ಯ ೨೫ ರಿಂದ ೩೦ ಮಂದಿ ಯೋಗ ಕಲಿಯಲು ಬರುತ್ತಾರೆ.

ಸುಮಾರು ೨ ಸಾವಿರ ಮಂದಿ ಉಚಿತ ಯೋಗ ಕಲಿತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.