ಪೊನ್ನಂಪೇಟೆ, ಜೂ. ೧೯: ಅಗ್ನಿವೀರ್‌ಗೆ ಆಯ್ಕೆಯಾಗಿ ತರಬೇತಿ ಮುಗಿಸಿ, ಎಂ.ಇ.ಜಿ.ಗೆ ನೇಮಕಾತಿ ಹೊಂದಿದ ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಅಕಾಡೆಮಿ ವಿದ್ಯಾರ್ಥಿ ಇಟ್ಟೀರ ಸುಬ್ರಮಣಿ ಹಾಗೂ ದಮಯಂತಿ ದಂಪತಿಯ ಪುತ್ರ ಇಟ್ಟೀರ ಎಸ್. ಹರ್ಷ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಮತ್ತು ಕೋಚಿಂಗ್ ಅಕಾಡೆಮಿ ಅಧ್ಯಕ್ಷ ಅಮ್ಮಣಿಚಂಡ ಲವನ್ ಮಾದಪ್ಪ ಮಾತನಾಡಿ, ಕೊಡಗು ಭಾರತೀಯ ಸೈನ್ಯಕ್ಕೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಸೈನಿಕರನ್ನು ನೀಡಿರುವ ಜಿಲ್ಲೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗಿನ ಯುವಕರಲ್ಲಿ ಸೈನ್ಯಕ್ಕೆ ಸೇರಲು ಆಸಕ್ತಿ ಕಡಿಮೆಯಾಗುತ್ತಿದೆ.

ಆದ್ದರಿಂದ ಕೊಡಗಿನ ವಿದ್ಯಾರ್ಥಿಗಳನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸುವ ಸಲುವಾಗಿ ಅಕಾಡೆಮಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಕಾಡೆಮಿ ಉಪಾಧ್ಯಕ್ಷ ಸೋಮಯ್ಯ ಕೆ.ಕೆ., ಶಾಖಾ ವ್ಯವಸ್ಥಾಪಕ ಬಶೀರ್ ಎನ್.ಎಂ., ಶಿಕ್ಷಕರಾದ ಎಂ.ಎ. ಆಲಿ, ದೈಹಿಕ ಶಿಕ್ಷಣ ಶಿಕ್ಷಕ ಬೋಪಣ್ಣ ಎಂ.ಎA., ಯೋಗ ತರಬೇತುದಾರರಾದ ಶರ್ಲಿ ಬೋಪಣ್ಣ, ಡಾ. ಸಿಂಚನ ಸಿ.ಪಿ., ಪೋಷಕರಾದ ರವೀಂದ್ರ ಕೆ.ಬಿ., ಮಧುರ ಕೆ.ಆರ್. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.