ಗುಡ್ಡೆಹೊಸೂರು, ಜೂ. ೧೯ : ಇಲ್ಲಿನ ರಾಷ್ಟಿçÃಯ ಹೆದ್ದಾರಿ ಬಳಿ ನಿವಾಸಿ, ಐಶ್ವರ್ಯ ಕಾಲೇಜಿನ ಮಾಲೀಕರಾದ ಪುಲಿಯಂಡ ರಾಮ್ ದೇವಯ್ಯ ಅವರ ಹಸು ಕೊಳೆತ ಹಣ್ಣುಗಳನ್ನು ತಿಂದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಸುಂಟಿಕೊಪ್ಪದ ನಿವಾಸಿಯೋರ್ವರು ಇಲ್ಲಿನ ರಸ್ತೆ ಬದಿಯಲ್ಲಿ ಹಣ್ಣು ವ್ಯಾಪಾರ ನಡೆಸುತ್ತಿದ್ದರು. ತುಂಬಾ ಹಣ್ಣಾದ ಹಣ್ಣುಗಳನ್ನು ಹಿಂಬದಿಗೆ ಬಿಸಾಕುತ್ತಿದ್ದರು. ಇಂದು ಈ ಹಣ್ಣುಗಳನ್ನು ತಿಂದು ಹಾಲು ನೀಡುತ್ತಿದ್ದ ಹಸು ಸಾವನ್ನಪ್ಪಿದೆ ಎಂದು ರಾಮ್ ದೇವಯ್ಯ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.