ಮಡಿಕೇರಿ, ಜೂ. ೧೯: ಮಡಿಕೇರಿ ವ್ಯಾಪ್ತಿಯಲ್ಲಿ ಗಣೇಶೋತ್ಸವ ಸಂದರ್ಭ ಪ್ರತಿಷ್ಠಾಪಿಸಲ್ಪಡುವ ಗಣಪತಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲು ನಗರದ ಪಂಪಿನ ಕೆರೆ ಬಳಿ ನೂತನ ಕೆರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ನಗರಸಭಾ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ನಗರಸಭಾಧ್ಯಕ್ಷೆ ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ದಿನ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಚಂದ್ರಶೇಖರ್ ನಗರದಲ್ಲಿ ಈಗಿರುವ ಗೌರಿಕೆರೆಗೆ ಅಲ್ಲಿನ ಸುತ್ತಮುತ್ತಲಿನ ಕಲುಷಿತ ನೀರು ಸೇರುತ್ತಿದ್ದು, ಅಶುದ್ಧವಾದ ನೀರಿನಲ್ಲಿಯೇ ಗಣಪತಿ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಬಗ್ಗೆ ನಗರಸಭೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಈ ವೇಳೆ ಧನಿಗೂಡಿಸಿದ ಅರುಣ್ ಶೆಟ್ಟಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮೂವತ್ತಕ್ಕೂ ಅಧಿಕ ಕಡೆ ಗಣಪತಿ ಪ್ರತಿಷ್ಠಾಪನೆ ನಡೆಯುತ್ತಾ ಬಂದಿದೆ. ಆದ್ದರಿಂದ ಗಣಪತಿ ವಿಸರ್ಜನೆಗೆ ಗೌರಿ ಕೆರೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕೆಂದರು. ಈ ವೇಳೆ ಮಾತನಾಡಿದ ಉಪಾಧ್ಯಕ್ಷ ಮಹೇಶ್ ಜೈನಿ ಒಂದೆಡೆ ಗೌರಿಕೆರೆ ಅಶುದ್ಧಗೊಳ್ಳುತ್ತಿದೆ; ಮತ್ತೊಂದೆಡೆ ಪ್ರತಿಬಾರಿ ಅದರ ನಿರ್ವಹಣೆಗೆ ಹಣ ವ್ಯಯವಾಗುತ್ತಿದೆ. ಆದ್ದರಿಂದ ಪಂಪಿನಕೆರೆ ಆವರಣದಲ್ಲಿರುವ ಜಾಗದಲ್ಲಿ ಗಣಪತಿ ಉತ್ಸವ ಮೂರ್ತಿಗಳ ವಿಸರ್ಜನೆಗಾಗಿ ನೂತನ ಕೆರೆ ನಿರ್ಮಾಣ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಮುಂದಡಿ ಇಡುವಂತೆ ಸದಸ್ಯ ಮನ್ಸೂರ್ ಸಲಹೆಯಿತ್ತರು. ಈ ಸಂಬAಧ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲು ಸಭೆ ನಿರ್ಧರಿಸಿತು.

ಅನುದಾನವಿದೆ - ದಾಖಲೆಗಳಲ್ಲಿ

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆರೆಗಳ ಅಭಿವೃದ್ಧಿಗಾಗಿ ಎರಡೂವರೆ ಕೋಟಿಯಷ್ಟು ಅನುದಾನವಿದೆ ಎಂದು ತಿಳಿಸಿದ ಪ್ರಾಧಿಕಾರದ ಅಧ್ಯಕ್ಷರೂ ಆದ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಈಗಾಗಲೇ ಇರುವ ಕೆರೆಗಳಿಗೆ ಸೂಕ್ತ ದಾಖಲಾತಿಗಳಿಲ್ಲದ ಕಾರಣ ಅವುಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ನಗರಸಭಾ ಆಯುಕ್ತ ರಮೇಶ್ ಹಾಗೂ ಸದಸ್ಯರು ಹಾಜರಿದ್ದರು. ಉಪಾಧ್ಯಕ್ಷ ಮಹೇಶ್ ಜೈನಿ ಒಂದೆಡೆ ಗೌರಿಕೆರೆ ಅಶುದ್ಧಗೊಳ್ಳುತ್ತಿದೆ; ಮತ್ತೊಂದೆಡೆ ಪ್ರತಿಬಾರಿ ಅದರ ನಿರ್ವಹಣೆಗೆ ಹಣ ವ್ಯಯವಾಗುತ್ತಿದೆ. ಆದ್ದರಿಂದ ಪಂಪಿನಕೆರೆ ಆವರಣದಲ್ಲಿರುವ ಜಾಗದಲ್ಲಿ ಗಣಪತಿ ಉತ್ಸವ ಮೂರ್ತಿಗಳ ವಿಸರ್ಜನೆಗಾಗಿ ನೂತನ ಕೆರೆ ನಿರ್ಮಾಣ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಮುಂದಡಿ ಇಡುವಂತೆ ಸದಸ್ಯ ಮನ್ಸೂರ್ ಸಲಹೆಯಿತ್ತರು. ಈ ಸಂಬAಧ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲು ಸಭೆ ನಿರ್ಧರಿಸಿತು.

ಅನುದಾನವಿದೆ - ದಾಖಲೆಗಳಲ್ಲಿ

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆರೆಗಳ ಅಭಿವೃದ್ಧಿಗಾಗಿ ಎರಡೂವರೆ ಕೋಟಿಯಷ್ಟು ಅನುದಾನವಿದೆ ಎಂದು ತಿಳಿಸಿದ ಪ್ರಾಧಿಕಾರದ ಅಧ್ಯಕ್ಷರೂ ಆದ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಈಗಾಗಲೇ ಇರುವ ಕೆರೆಗಳಿಗೆ ಸೂಕ್ತ ದಾಖಲಾತಿಗಳಿಲ್ಲದ ಕಾರಣ ಅವುಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ನಗರಸಭಾ ಆಯುಕ್ತ ರಮೇಶ್ ಹಾಗೂ ಸದಸ್ಯರು ಹಾಜರಿದ್ದರು.