ಈ ಸಾಲಿನ ಮಾರ್ಚ್ ಹಾಗೂ ಏಪ್ರಿಲ್‌ನ ಬೇಸಿಗೆಯ ೨ ತಿಂಗಳ ಅವಧಿ ಯಲ್ಲಿ ಭಾರತದಾ ದ್ಯಂತ ಸಿಡಿಲಿನ ಬಡಿತಕ್ಕೆ ೧೬೨ ಮಂದಿ ತಮ್ಮ ಪ್ರಾಣ ಕಳೆದು ಕೊಂಡರು. ಜಗತ್ತಿನಾ ದ್ಯಂತ ವಾರ್ಷಿಕ ಅಂದಾಜು ೬,೦೦೦ ದಿಂದ ೨೪,೦೦೦

ಮಂದಿಯಾದರೂ ಸಿಡಿಲ ಬಡಿತಕ್ಕೆ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದು ಹಲವು ವರದಿಗಳ ಅಂದಾಜು. ಭಾರತದಲ್ಲಿ ವಾರ್ಷಿಕ ೨,೫೦೦ ಮಂದಿ ಬಲಿಯಾಗುವುದಾಗಿಯೂ ಅಂದಾಜಿಸಲಾಗಿದೆ. ಈ ಅಪಾಯಕಾರಿ ನೈಸರ್ಗಿಕ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವುದು ಬಹುತೇಕ ಅಸಾಧ್ಯ. ಆದರೆ ನಿರ್ದಿಷ್ಟ ಪ್ರದೇಶದಲ್ಲಿ ಸಿಡಿಲ ಬಡಿತದ ಬಗ್ಗೆ ಮುನ್ಸೂಚನೆ ದೊರೆತಲ್ಲಿ ಹಲವಾರು ಪ್ರಾಣಗಳ ರಕ್ಷಣೆ ಸಾಧ್ಯ. ಹೆಚ್ಚಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರೇ ಸಿಡಿಲ ಬಡಿತಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ.

ಚಂಡಮಾರುತ ಸಂದರ್ಭ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಹಾನಿಯಾಗು ವುದು ಸಹಜ. ಈ ಚಂಡಮಾರುತ ಸಮುದ್ರದಲ್ಲಿ ಸೃಷ್ಟಿಯಾಗುವ ಸಂದರ್ಭವೇ ಇವುಗಳ ಉಪಗ್ರಹ ಚಿತ್ರಗಳನ್ನಾಧರಿಸಿ ಇವುಗಳ ತೀವ್ರತೆ, ಗಾತ್ರಕ್ಕನುಸಾರವಾಗಿ ಕರಾವಳಿ ವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿ ಸುವ ಕಾರ್ಯವನ್ನು ಆಯಾ ಸರಕಾರಗಳು ನೆರವೇರಿಸುವ ಮೂಲಕ ಸಹಸ್ರ-ಸಹಸ್ರ ನಾಗರಿಕರನ್ನು ಪ್ರತಿ ವರ್ಷ ರಕ್ಷಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಇದೀಗ ವಾತಾವರಣದ ಹಲವು ವೈಜ್ಞಾನಿಕ ಪ್ರಕ್ರಿಯೆಗಳನ್ನು ಸೂಕ್ಷö್ಮವಾಗಿ ಗಮನಿಸಿ ಯಾವ ಪ್ರದೇಶದಲ್ಲಿ ಯಾವಾಗ ಸಿಡಿಲು ಬಡಿಯುವ ಸಾಧ್ಯತೆ ಇದೆ ಎಂಬುದನ್ನು ಪತ್ತೆ ಹಚ್ಚಿ ಆ ಮೂಲಕ ಸಹಸ್ರ ಮಂದಿಯ ಪ್ರಾಣ ರಕ್ಷಣೆ ಮಾಡುವತ್ತ ಭಾರತೀಯ ವಿಜ್ಞಾನಿಗಳು ಕಾರ್ಯಪ್ರವೃತ್ತರಾಗಿ ದ್ದಾರೆ. ಇನ್ನೂ ಸಂಶೋಧನಾ ಹಂತದಲ್ಲಿರುವ ಈ ಹೊಸ ‘ಲೈಟ್ನಿಂಗ್ ಡಿಟೆಕ್ಷನ್ ಸಿಸ್ಟಮ್’ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಸಿಡಿಲು ಬಡಿಯಬಲ್ಲ ೩ ಗಂಟೆ ಮುನ್ನವೇ ಈ ಸಿಸ್ಟಮ್ ಮುನ್ಸೂಚನೆ ನೀಡುವ ಸಾಧ್ಯತೆಗಳಿವೆ.

ಇಲ್ಲಿ ಗಮನಿಸಬೇಕಾದ ಅಂಶವೆAದರೆ ಚಂಡಮಾರುತ ಸ್ಥಿತಿಗತಿ ಪತ್ತೆ ಹಚ್ಚುವ ಹಾಗೂ ಇದೀಗ ಸಿಡಿಲ ಬಡಿತ ಊಹಿಸುವ ಉಪಗ್ರಹಗ ಭೂ-ಪದರದಿಂದ ೩೬,೦೦೦ ಕಿ.ಮೀ ಎತ್ತರದಲ್ಲಿ ಪರಿಭ್ರಮಿಸುತ್ತಿದೆ.

ವಾತಾವರಣದಿಂದ ಕುರುಹು

ಸಿಡಿಲಿನ ಬಡಿತವು ಭೂಮಿಯನ್ನು ಅಪ್ಪಳಿಸುವ ಮೂರು ಗಂಟೆಗಳ ಮೊದಲು, ಭೂಮಿಯಿಂದ ೩೬,೦೦೦ ಕಿಲೋಮೀಟರ್ ದೂರದಲ್ಲಿ ಸುತ್ತುತ್ತಿರುವ ಉಪಗ್ರಹವು, ವಾತಾವರಣದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ ಸಂಭಾವ್ಯ ಸಿಡಿಲು ಬಡಿತ ಪ್ರದೇಶಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸುತ್ತದೆ. "ಹೊರಸೂಸಲ್ಪಡುವÀ ದೀರ್ಘ ತರಂಗ ವಿಕಿರಣ" (ಔಐಖ – ಔuಣgoiಟಿg ಐoಟಿgತಿಚಿve ಖಚಿಜiಚಿಣioಟಿ) ಅಥವಾ ಇನ್ಫಾçರೆಡ್ ವಿಕಿರಣಗಳಲ್ಲಿನ ವ್ಯತ್ಯಾಸಗಳನ್ನು ಪತ್ತೆಹಚ್ಚಿ ಆ ಮೂಲಕ ಸಿಡಿಲ ಬಡಿತದ ಸಂಭಾವ್ಯತೆಯನ್ನು ಪತ್ತೆಹಚ್ಚಲಾಗುತ್ತದೆ. ಸೂರ್ಯನ ಶಾಖದಿಂದ ಬಿಸಿಯಾಗುವ ಭೂಮಿಯು ಬಾಹ್ಯಾಕಾಶಕ್ಕೆ ಈ ಇನ್ಫಾçರೆಡ್ ಕಿರಣಗಳ ಮೂಲಕ ಶಾಖವನ್ನು ಹೊರಸೂಸುತ್ತದೆ. ಇದರ ನಡತೆಗಳನ್ನು ಸೂಕ್ಷö್ಮವಾಗಿ ಗಮನಿಸುವ ಉಪಗ್ರಹವು ಸಿಡಿಲ ಬಡಿತದ ಸಂಭಾವ್ಯತೆಯ ಬಗ್ಗೆ ಮಾಹಿತಿ ನೀಡುತ್ತದೆ.

ಭಾರತದ ಬಾಹ್ಯಾಕಾಶ ಸಂಸ್ಥೆ-ಇಸ್ರೋವಿನ ಇನ್ಸಾಟ್-೩ಡಿ ಉಪಗ್ರಹದ ಮಾಹಿತಿಯನ್ನು ಬಳಸಿಕೊಂಡು ರಾಷ್ಟಿçÃಯ ದೂರ ಸಂವೇದಿ ಕೇಂದ್ರದ (ಓಖSಅ – ಓಚಿಣioಟಿಚಿಟ ಖemoಣe Seಟಿsiಟಿg ಅeಟಿಣಡಿe) ವಿಜ್ಞಾನಿಗಳು, ಗುಡುಗು ಸಹಿತ ಮಳೆಯಾಗುವ ಮೊದಲು ಈ ಹೊರಸೂಸಲ್ಪಡುವ ವಿಕಿರಣವು ಗಮನಾರ್ಹ ಬದಲಾವಣೆಗಳನ್ನೊಳಗೊಳ್ಳುತ್ತದೆ ಎಂದು ಕಂಡುಹಿಡಿದಿದ್ದಾರೆ. ಆ ಮೂಲಕ ಸಿಡಿಲ ಬಡಿತದ ಬಗ್ಗೆಯೂ ಊಹಾಪೋಹಗಳನ್ನು ಹೆಚ್ಚಿನ ನಿಖರತೆಯಿಂದಲೇ ಮಾಡಬಹುದಾಗಿದೆ ಎಂದು ನಂಬಿದ್ದಾರೆ. ಇದು ಕಾರ್ಯ ರೂಪಕ್ಕೆ ಬಂದಲ್ಲಿ ಸಹಸ್ರ ಮಂದಿಯ ಜೀವ ರಕ್ಷಣೆಗೆ ಸಹಕಾರಿಯಾಗಲಿದೆ.

"ಭೂಮಿ ಬಿಸಿಯಾದಾಗ, ವಾತಾವರಣದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಲಿದೆ. ಕಡಿಮೆ ತೂಕವಿರುವ ಬೆಚ್ಚಗಿನ ಗಾಳಿ ಈ ಒತ್ತಡ ಕಡಿಮೆ ಇರುವ ಎತ್ತರದ ಪ್ರದೇಶಕ್ಕೆ ಏರುತ್ತದೆ. ಈ ಪ್ರಕ್ರಿಯೆಯು ಗಾಳಿ ಮತ್ತು ಗುಡುಗು ಸಹಿತ ಮಳೆಗೆ ಕಾರಣವಾಗುತ್ತದೆ. ಇದು ಔಐಖ ನಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ" ಎಂದು ತಂಡದ ಪ್ರಮುಖ ಸಂಶೋಧಕ ಅಲೋಕ್ ಟಾವೊರಿ ಮಾಧ್ಯಮಗಳಿಗೆ ಇತ್ತೀಚೆಗೆ ವಿವರಿಸಿದ್ದರು. ಔಐಖನೊಂದಿಗೆ ಭೂ-ಪದರದ ತಾಪಮಾನ (ಐSಖಿ-ಐಚಿಟಿಜ Suಡಿಜಿಚಿಛಿe ಖಿemಠಿeಡಿಚಿಣuಡಿe), ಮೋಡ ಗಳ ಚಲನವಲನ (ಅಒಗಿ- ಅಟouಜ ಒoಣioಟಿ ಗಿeಛಿಣoಡಿs) ಗಳನ್ನೂ ಗಮನಿಸಿ ಸಿಡಿಲ ಬಡಿತದ ಬಗ್ಗೆ ನಿಖರ ಮಾಹಿತಿಯನ್ನು ಪಡೆಯಬಹು ದಾಗಿದೆ. ಸಿಡಿಲ ಬಡಿತ ಊಹೆಯ ‘ಜಾಗತಿಕ ಸ್ಟಾö್ಯಂರ‍್ಡ್’ ಪ್ರಕಾರ ಈ ಮುನ್ಸೂಚನಾ ಸಿಸ್ಟಮ್, ಸಾರ್ವಜನಿಕರನ್ನು ಅರ್ಧ ಗಂಟೆ ಮುಂಚಿತವಾದರೂ ಎಚ್ಚರಿಸುವ ಸಾಮರ್ಥ್ಯ ಹೊಂದಬೇಕಿದೆ. ಆದರೆ ನಮ್ಮ ವಿಜ್ಞಾನಿಗಳು ೩ ಗಂಟೆಗೂ ಮುನ್ನವೇ ಮುನ್ಸೂಚನೆ ನೀಡುವ ಸಿಸ್ಟಮ್‌ನ ಅಭಿವೃದ್ಧಿ ಮಾಡುವತ್ತ ಹೊರಟಿರುವುದು ಉತ್ತಮ ಬೆಳವಣಿಗೆ.

ಇನ್ಸಾಟ್ ಉಪಗ್ರಹ ಮಾಹಿತಿಯನ್ನು ನೇರವಾಗಿ ಓಖSಅ ಸರ್ವರ್‌ಗಳಿಗೆ ರವಾನಿಸಲಾಗುತ್ತದೆ. ಅಲ್ಲಿ, ವಿಶೇಷ ‘ಅಲ್ಗಾರಿದಮ್‌ಗಳು’ ಸಂಭಾವ್ಯ ಸಿಡಿಲ ಬಡಿತ ಪ್ರದೇಶಗಳನ್ನು ಗುರುತಿಸಲು ಈ ಮಾಹಿತಿಯನ್ನು ಬಳಸುತ್ತವೆ. ಈ ಮಾಹಿತಿಯನ್ನು ನಂತರ ಪ್ರಸಾರಕ್ಕಾಗಿ ಓಖSಅ-ಭುವನ್ ಪೋರ್ಟಲ್ ಮೂಲಕ ಭಾರತ ಹವಾಮಾನ ಇಲಾಖೆ (Iಒಆ – Iಟಿಜiಚಿಟಿ ಒeಣeoಡಿoಟogiಛಿಚಿಟ ಆeಠಿಚಿಡಿಣmeಟಿಣ) ಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ಸಂಪೂರ್ಣ ವಾಗಿ ಕಾರ್ಯರೂಪಕ್ಕೆ ಬಂದ ನಂತರ, ಈ ವ್ಯವಸ್ಥೆಯು ಎಚ್ಚರಿಕೆಗಳನ್ನು ನೀಡುವ ಮೂಲಕ ಸಾವುನೋವುಗಳನ್ನು ತಡೆಯುವಲ್ಲಿ ಸಫಲವಾಗಲಿದೆ.

ಏಕೆ ೩೬,೦೦೦ ಕಿ.ಮೀ....?

ಉಪಗ್ರಹ ಅಂತರ್ಜಾಲ ನೀಡುವ ಸ್ಟಾರ್ ಲಿಂಕ್‌ನ ಉಪ ಗ್ರಹಗಳು ಭೂ-ಪದರ ದಿಂದ ಅಂದಾಜು

೧೦೦-೧೫೦ ಕಿ.ಮೀ, ೨೫ ವರ್ಷಗಳಿಂದ ನೂರಾರು ಗಗನಯಾತ್ರಿಕರಿಗೆ ಆಶ್ರಯವಾಗಿದ್ದಲ್ಲದೆ ಭೂಮಿಯನ್ನು ಇನ್ನೂ ಕೂಡ ಪರಿಭ್ರಮಿಸುತ್ತಿರುವ ಅಂತರರಾಷ್ಟಿçÃಯ ಬಾಹ್ಯಾಕಾಶ ಕೇಂದ್ರವು ಅಂದಾಜು ೪೦೦ ಕಿ.ಮೀ ಎತ್ತರದಲ್ಲಿದ್ದರೆ ಹವಾಮಾನ ಉಪಗ್ರಹಗಳು ಬರೋಬ್ಬರಿ ೩೬,೦೦೦ ಕಿ.ಮೀ ಎತ್ತರದಲ್ಲಿರುವುದು ಸಹಜವಾಗಿ ಆಶ್ಚರ್ಯಕರ. ಆದರೆ ಇದು ಅಗತ್ಯ..

ಹವಾಮಾನ ಉಪಗ್ರಹಗಳು ಭೂ-ವಾತಾವರಣದ ಎಲ್ಲಾ ಅಂಶಗಳನ್ನು ಸೂಕ್ಷö್ಮವಾಗಿ ಗಮನಿಸುವ ಅಗತ್ಯವಿರುವ ಕಾರಣ ಭೂಮಿಯ ಒಂದೇ ಪ್ರದೇಶದ ಮೇಲೆ ನಿಗಾ ಇಡುವುದು ಅತ್ಯವಶ್ಯಕ. ಅಂದರೆ, ಭೂಮಿಯಿಂದ ವೀಕ್ಷಿಸಿದಾಗ, ಉಪಗ್ರಹವು ಆಗಸದ ಒಂದೇ ಕಡೆ ‘ಪಾರ್ಕ್’ ಆದಂತೆ ಗೋಚರಿಸಬೇಕು. ಉಪಗ್ರಹವು ಭೂ-ಪದರದಿಂದ ದೂರ ಸಾಗಿದಷ್ಟು ಆ ಉಪಗ್ರಹದ ಮೇಲೆ ಭೂಮಿಯ ಗುರುತ್ವಾಕರ್ಷಣಾ ಶಕ್ತಿ ಸಹಜವಾಗಿ ಕಡಿಮೆಯಾಗುತ್ತದೆ. ಈ ಶಕ್ತಿ ಕಡಿಮೆಯಾದಷ್ಟು ಉಪಗ್ರಹಕ್ಕೆ ಅಗತ್ಯವಿರುವ ಪರಿಭ್ರಮಣಾ ವೇಗ ಕೂಡ ಕಡಿಮೆಯಾಗುತ್ತದೆ. ಭೂ-ಪದರದಿಂದ ೩೬,೦೦೦ ಕಿ.ಮೀ ಎತ್ತರದಲ್ಲಿ ಸರಿಯಾಗಿ ಭೂ-ಗುರತ್ವಾಕರ್ಷಣಾ ಶಕ್ತಿ ಹಾಗೂ ಉಪಗ್ರಹವು ಭೂ-ಪದರದ ಒಂದೇ ಪ್ರದೇಶದ ಮೇಲೆ ಇರಲು ಅಗತ್ಯವಿರುವ ವೇಗವು ಸಮತೋಲನದಲ್ಲಿದೆ. ಈ ಕಾರಣದಿಂದ ಹವಾಮಾನ ಉಪಗ್ರಹಗಳು ಜಿಯೋ-ಸ್ಟೇಷನರಿ ಕಕ್ಷೆ, ಅಂದರೆ-೩೬,೦೦೦ ಕಿ.ಮೀ ಎತ್ತರದಲ್ಲಿಯೇ ಇರುವುದು ಅಗತ್ಯ. ಅಂತರರಾಷ್ಟಿçÃಯ ಬಾಹ್ಯಾಕಾಶ ಕೇಂದ್ರವು ಕೇವಲ ೪೦೦ ಕಿ.ಮೀ. ಎತ್ತರದಲ್ಲಿರುವ ಕಾರಣ ಅತಿವೇಗದಲ್ಲಿ ಭೂಮಿಯನ್ನು ಪರಿಗ್ರಹಿಸುವ ಅಗತ್ಯವಿದೆ. ಪ್ರತಿನಿತ್ಯ ಇದು ಭೂಮಿಯ ಸುತ್ತ ೮ ಪ್ರದಕ್ಷಿಣೆ ಗಳನ್ನು ಪೂರೈಸುವ ಅಗತ್ಯವಿದೆ. ಇಲ್ಲದಿದ್ದರೆ ಭೂ-ಸ್ಪರ್ಶವಾಗುವ ಸಾಧ್ಯತೆಗಳಿವೆ.

ಇಸ್ರೋ ನಿರ್ಮತ ಇನ್ಸಾö್ಯಟ್-೩ಡಿ ಹವಾಮಾನ ಉಪಗ್ರಹವು ೨೦೧೩ರಿಂದ ಕಾರ್ಯಾಚರಿಸುತ್ತಿದ್ದು, ಚಂಡಮಾರುತ ಸಂದರ್ಭ ಅನೇಕ ಜೀವಗಳ ರಕ್ಷಣೆಗೆ ಸಹಕಾರಿಯಾಗಿದ್ದು, ಇದೀಗ ಸಿಡಿಲ ಬಡಿತದಿಂದ ಜನರ ರಕ್ಷಣೆ ಮಾಡುವಲ್ಲಿಯೂ ಬಳಕೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

- ಪ್ರಜ್ವಲ್ ಜಿ. ಆರ್.,

ಮಡಿಕೇರಿ.