ಸುಂಟಿಕೊಪ್ಪ, ಜೂ. ೧೯: ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ೩ನೇ ವಾರ್ಡಿನ ನಿವಾಸಿ ಸುರೇಶ್ ಹಾಗೂ ಪಂಚಾಯಿತಿ ಸದಸ್ಯೆ ಚಂದ್ರಾವತಿ ಅವರ ಪುತ್ರ ಗಗನ್ (೨೧) ಎಂಬಾತ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ತಾನು ವಾಸವಿದ್ದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆAಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಗಗನ್ ರೀಲ್ಸ್ ಕೂಡ ಮಾಡುತ್ತಿದ್ದ. ಕಳೆದ ಎರಡು ದಿವಸಗಳಿಂದ ತಾಯಿಗೆ ಕರೆ ಮಾಡಿ ತಾನು ಅನಾರೋಗ್ಯಗೊಂಡಿದ್ದು, ಬನ್ನಿ ಎಂದು ಪದೇ ಪದೇ ಕರೆದಿದ್ದ ಎನ್ನಲಾಗಿದೆ. ಹೀಗಾಗಿ ಚಂದ್ರಾವತಿ ತಾ. ೧೮ ರಂದು ರಾತ್ರಿ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದರು. ತಾನು ಬರುತ್ತಿರುವ ವಿಷಯವನ್ನು ಕೂಡ ಆತನಿಗೆ ತಿಳಿಸಿದ್ದರು. ಆದರೆ ಚಂದ್ರಾವತಿ ಬೆಂಗಳೂರು ತಲುಪುವ ಮೊದಲೇ ಪ್ರೀತಿಯ ಪುತ್ರ ಗಗನ್ ನೇಣು ಬಿಗಿದು ಇಹಲೋಕ ತ್ಯಜಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಮೃತನ ಅಂತ್ಯಕ್ರಿಯೆ ಕಂಬಿಬಾಣೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.