(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜೂ. ೧೮ : ಪ್ರಸ್ತುತದ ಆಧುನಿಕ ಯುಗದಲ್ಲಿ ತಂತ್ರಜ್ಞಾನ ನಿರೀಕ್ಷೆಗೂ ನಿಲುಕದ ರೀತಿಯಲ್ಲಿ ಮುಂದುವರಿಯುತ್ತಿದೆ. ಜನತೆ ದಿಗ್ಮೂಢರಾಗುವಂತಹ ವೇಗದಲ್ಲಿ ಎಲ್ಲವೂ ಬೆಳವಣಿಗೆ ಕಾಣುತ್ತಿದೆ. ಆದರೆ ಕೊಡಗು ಜಿಲ್ಲೆಯ ಜನರು ಮಾತ್ರ ವರ್ಷಂಪ್ರತಿಯAತೆ ಮಳೆಗಾಲ ಎದುರಾಯಿತೆಂದರೆ ಪರಸ್ಪರ ಸಂಪರ್ಕ ಸಾಧಿಸಲು ವಿಲವಿಲ ಒದ್ದಾಡಲೇಬೇಕಾಗಿದೆ.
ಈ ಸಮಸ್ಯೆ ಮಾತ್ರ ಯಾವುದೇ ಪರಿಹಾರ ಕಾಣದೆ ನಿರಂತರವಾಗಿ ಕಾಡುತ್ತಿದೆ. ಕೊಡಗಿನ ಜನರಿಗೆ ದೂರ ಸಂಪರ್ಕಕ್ಕೆ ಮುಖ್ಯ ಆಧಾರವಾಗಿರುವುದು ಬಿಎಸ್‌ಎನ್‌ಎಲ್‌ನ ವ್ಯವಸ್ಥೆ. ಇದು ಈ ಹಿಂದಿನಿAದಲೂ ಮುಂದುವರಿದುಕೊAಡು ಬಂದಿದೆ. ಆದರೆ ಬಿಎಸ್‌ಎನ್‌ಎಲ್‌ನ ಪ್ರಸ್ತುತದ ಪರಿಸ್ಥಿತಿ ಅದೋಗತಿಯಂತಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳ ಜನರ ಬವಣೆ ಹೇಳತೀರದು. ಪ್ರಸ್ತುತದ ಕಾಲಘಟ್ಟದಲ್ಲಿ ದೂರ ಸಂಪರ್ಕ ವ್ಯವಸ್ಥೆ ಅತ್ಯಂತ ಅನಿವಾರ್ಯವೂ ಆಗಿದೆ. ಪ್ರತಿಯೊಂದಕ್ಕೂ ಮೊಬೈಲ್, ದೂರವಾಣಿ ಬೇಕೇಬೇಕು. ಇದು ಇಲ್ಲದಿದ್ದಲ್ಲಿ ಬಹುತೇಕ ವ್ಯವಸ್ಥೆ, ಕೆಲಸ ಕಾರ್ಯಗಳಿಗೆ ಗ್ರಹಣ ಬಡಿದಂತಾಗುತ್ತದೆ.
ಬಿಎಸ್‌ಎನ್‌ಎಲ್‌ನೊAದಿಗೆ ಜಿಲ್ಲೆಯಲ್ಲಿ ಏರ್‌ಟೆಲ್, ಜಿಯೋ ಸೇರಿದಂತೆ ಇನ್ನಿತರ ಕೆಲವು ಕಂಪೆನಿಗಳ ವ್ಯವಸ್ಥೆಯೂ ಇದೆ. ಆದರೆ ಎಲ್ಲವೂ ಕೇವಲ ನಗರ - ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತ ಎಂಬAತಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಇರುವುದು ಬಿಎಸ್‌ಎನ್‌ಎಲ್ ಮಾತ್ರ. ಈಗೀಗ ಇತರ ಜಾಲಗಳ ಸಂಪರ್ಕವಿದ್ದರೂ ಅದು ಹೇಳಿಕೊಳ್ಳುವಷ್ಟು ಮಟ್ಟದಲ್ಲಿ ಲಭ್ಯವಿಲ್ಲ. ಆದರೆ ಬಿಎಸ್‌ಎನ್‌ಎಲ್‌ನ ಟವರ್‌ಗಳು ಜಿಲ್ಲೆಯ ಎಲ್ಲಾ ಗ್ರಾಮೀಣ ಭಾಗಗಳಲ್ಲಿವೆ. ಆದರೂ ಪ್ರಸ್ತುತ ಇದರ ನಿಷ್ಕಿçಯತೆಯಿಂದಾಗಿ ಎಲ್ಲವೂ ಬುಡಮೇಲಾಗುತ್ತಿದೆ.
ಕೇವಲ ಈ ಟವರ್‌ಗಳು ನೋಡಲು ಮಾತ್ರ ಪ್ರಯೋಜನಕ್ಕಿಲ್ಲ ಎಂಬAತೆ ನಿಂತಿವೆ. ಶೇ. ೯೦ಕ್ಕೂ ಅಧಿಕ ಬಿಎಸ್‌ಎನ್‌ಎಲ್ ಟವರ್‌ಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಈ ಸಂಸ್ಥೆಯ ಪರಿಸ್ಥಿತಿಯೂ ಪ್ರಸ್ತುತ ಡೋಲಾಯಮಾನವಾಗಿದೆ. ಅಧಿಕಾರಿಗಳು, ಸಿಬ್ಬಂದಿಗಳೂ ಇಲ್ಲ. ಅತ್ತ ಹಾವೂ ಸಾಯದು... ಕೋಲೂ ಮುರಿಯದು ಎಂಬ ನಾಣ್ಣುಡಿಯಂತಿದೆ ಬಿಎಸ್‌ಎನ್‌ಎಲ್‌ನ ಪರಿಸ್ಥಿತಿ.
ವಿದ್ಯುತ್ ಕೈಕೊಟ್ಟರೆ ನಿಷ್ಕಿçಯ
ಬಹುತೇಕ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಸ್‌ಎನ್‌ಎಲ್ ಟವರ್‌ಗಳು ವಿದ್ಯುತ್ ಸ್ಥಗಿತಗೊಂಡರೆ ಸ್ತಬ್ದವಾಗುತ್ತದೆ. ಇದು ಕೆಲವು ಗಂಟೆ - ಒಂದು ದಿನವಾದಲ್ಲಿ ಜನರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವೇನೋ. ಆದರೆ ದಿನಗಟ್ಟಲೆ, ವಾರಗಟ್ಟಲೆಗಳ ಕಾಲ ಸ್ತಬ್ದಗೊಂಡಲ್ಲಿ ಏನಾದೀತು? ಟವರ್‌ಗಳಿಗೆ ಬ್ಯಾಟರಿ ವ್ಯವಸ್ಥೆಗಳಿಲ್ಲ. ಜನರೇಟರ್ ಇದ್ದರೂ ಚಾಲಿಸುವವರಿಲ್ಲ, ಚಾಲನೆಗೆ ವ್ಯವಸ್ಥೆಯಿದ್ದರೂ ಡೀಸಲ್ ಇರದು. ಇದರಿಂದಾಗಿ ಎಲ್ಲರೂ ಶಿಲಾಯುಗದ ಕಾಲದ ಬದುಕಿನ ಅನುಭವ ಎದುರಿಸಬೇಕಾಗಿದೆ.
ಎಲ್ಲದಕ್ಕೂ ಒಟಿಪಿ ಬೇಕು
ಬಹುತೇಕ ಮಂದಿ ಬಿಎಸ್‌ಎನ್‌ಎಲ್ ಅವಲಂಬಿತರಾಗಿದ್ದು, ಬ್ಯಾಂಕ್‌ಖಾತೆ, ಆಧಾರ್‌ಕಾರ್ಡ್ ಸೇರಿದಂತೆ ಈಗಿನ ಅಗತ್ಯತೆಗಳಿಗೆ ಬಿಎಸ್‌ಎನ್‌ಎಲ್‌ನ ಮೊಬೈಲ್ ಸಂಖ್ಯೆಯನ್ನೇ ಜೋಡಣೆ ಮಾಡಿಕೊಂಡಿದ್ದಾರೆ.
(ಮೊದಲ ಪುಟದಿಂದ) ಇದೀಗ ಯಾವುದೇ ಕೆಲಸಕ್ಕೂ ಒಟಿಪಿ ಬೇಕೇ ಬೇಕು. ಆದರೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಎಲ್ಲಾ ಕೆಲಸಕ್ಕೂ ಅಡೆ - ತಡೆ, ವಿಳಂಬ ಸಾಮಾನ್ಯ ಎಂಬAತಾಗಿದೆ. ಬ್ಯಾಂಕ್‌ಗಳಲ್ಲಿ ಪ್ರಸ್ತುತ ರೈತಾಪಿ ವರ್ಗದವರು ಸಾಲ ಪಡೆಯಲೂ ಈ ನಿಷ್ಕಿçಯತೆಯಿಂದಾಗಿ ಪರಿತಪಿಸುವಂತಾಗಿದೆ. ಕೇವಲ ಜನರು ಮಾತ್ರವಲ್ಲ, ವಿವಿಧ ಇಲಾಖೆಗಳು, ಅಧಿಕಾರಿಗಳು, ಸಿಬ್ಬಂದಿಗಳೂ ಇದರಿಂದ ಸಮಸ್ಯೆ ಎದುರಿಸುತ್ತಿರುವುದು ಕೊಡಗಿನೆಲ್ಲೆಡೆ ಸಾಮಾನ್ಯ ಎಂಬAತಾಗಿದ್ದು, ಜನತೆಯ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ.
ನೆಟ್‌ವರ್ಕ್ ಸಮಸ್ಯೆ ಎಂಬದು ಕೊಡಗಿನ ಈಗಿನ ಬಹುದೊಡ್ಡ ತೊಂದರೆಯಾಗಿದೆ. ಆದರೆ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಹೇಗೋ ದಿನ ಕಳೆಯುತ್ತದೆ ಎಂಬAತಿದೆ ಜಿಲ್ಲೆಯಲ್ಲಿನ ಪರಸ್ಥಿತಿ. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳ ಮೊಬೈಲ್ ಕೂಡ ಬಿಎಸ್‌ಎನ್‌ಎಲ್ ಸಿಮ್‌ನದ್ದಾಗಿದೆ. ತುರ್ತು ಸಂದರ್ಭಗಳಲ್ಲೂ ಇದರ ಬಿಸಿ ಎಲ್ಲರಿಗೂ ತಟ್ಟುತ್ತದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನರು ಯಾರಾದರೂ ಸಾವಿಗೀಡಾದಲ್ಲಿ ಆ ಸುದ್ದಿಯನ್ನು ನೀಡಲು ಸಂಕಷ್ಟ ಎದುರಿಸುತ್ತಿದ್ದು, ಈ ವೇಳೆ ಆಕ್ರೋಶದ ಕಟ್ಟೆಯೊಡೆಯುತ್ತದೆ.
ಇದೀಗ ಮಳೆಗಾಲದ ಸಮಯ ಎದುರಾಗಿದೆ. ಜಿಲ್ಲೆಯ ಎಲ್ಲಾ ಭಾಗಗಳಿಂದಲೂ ನೆಟ್‌ವರ್ಕ್ ಸಮಸ್ಯೆ ಬಗ್ಗೆ ವರದಿಯಾಗುತ್ತಿದೆ. ಆದರೆ ಸಂಕಷ್ಟವನ್ನು ಯಾರೊಂದಿಗೆ ಹೇಳಿಕೊಳ್ಳುವುದು. ಯಾರ ಗಮನಕ್ಕೆ ತರುವುದು ಎಂಬ ಗೊಂದಲ ಸಾರ್ವಜನಿಕರದ್ದಾಗಿದೆ.