ಮಡಿಕೇರಿ, ಜೂ. ೧೯: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ನೆಪ್ರೋಲಜಿ ತಜ್ಞ ವೈದ್ಯರು ನೇಮಕಗೊಂಡಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ಡಾ. ಎಂ.ಎನ್. ಆತೀಶ್ (ಡಿ.ಎಂ ನೆಪ್ರೋಲಜಿ) ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರನ್ನು ನೇಮಿಸಲಾಗಿದ್ದು, ಪ್ರತಿ ವಾರದ ಬುಧವಾರ ನೆಪ್ರೋಲಜಿ ಕ್ಲಿನಿಕ್ ಅನ್ನು ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಮೂತ್ರಪಿಂಡ ಸಂಬAಧಿತ ಸಮಸ್ಯೆ ಇರುವವರು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು ಹಾಗೂ ನೆಪ್ರೋಲಜಿಗೆ ಸಂಬAಧಿತ ಯಾವುದೇ ಸಮಸ್ಯೆಗಳಿದ್ದಲ್ಲಿ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸದರಿ ದಿನದಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆಗೆ ಭೇಟಿ ನೀಡಿ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ.