ಪೊನ್ನಂಪೇಟೆ, ಜೂ. ೧೯: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೧ನೇ ವಿಭಾಗದ ಎಂ.ಜಿ. ನಗರದಲ್ಲಿರುವ ಕನ್ನಂಬಾಡಿಯಮ್ಮನವರ ದೇವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಧನಸಹಾಯ ನೀಡಿದರು.
ಶಾಸಕರು ನೀಡಿದ ರೂ. ೧.೫ ಲಕ್ಷ ಮೊತ್ತದ ಧನಸಹಾಯವನ್ನು ಸೋಮವಾರದಂದು ಕನ್ನಂಬಾಡಿಯಮ್ಮನವರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷÀ ಮೀದೇರಿರ ನವೀನ್ ಆಡಳಿತ ಮಂಡಳಿ ಅಧ್ಯಕ್ಷ ಎಂ.ಪಿ. ಪರಮೇಶ್ ಅವರಿಗೆ ಹಸ್ತಾಂತರಿಸಿದರು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ಎಂ. ರಶೀದ್, ಸದಸ್ಯ ಮೂಕಳೇರ ಸುಮಿತ, ಕೋಳೆರ ಭಾರತಿ, ಜುನೈದ್, ಕನ್ನಂಬಾಡಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಶಶಿ, ಶೇಖರ, ದರ್ಶನ್, ಸ್ವಾಮಿ ಮೊದಲಾದವರು ಹಾಜರಿದ್ದರು.