ಮಡಿಕೇರಿ, ಜೂ. ೧೯: ತಿತಿಮತಿ ಸಮೀಪದ ನೊಕ್ಯಾ ನಿವಾಸಿ ಪಿ.ಡಿ. ಸುಬ್ರಮಣಿ ಅವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೃತಕ ಕಾಲು ಅಳವಡಿಸಲಾಗಿದೆ. ಮನೆಯಿಂದ ಬೆಂಗಳೂರಿಗೆ ತೆರಳಲು ಅವರಿಗೆ ವಾಹನದ ಅಗತ್ಯತೆ ಬಗ್ಗೆ ಪಾಲಿಬೆಟ್ಟ ಚೆಶೈರ್ ಹೋಮ್ ಪ್ರಾಂಶುಪಾಲ ಶಿವರಾಜ್ ಅವರು ಮಾಧ್ಯಮ ಸ್ಪಂದನ ಗಮನ ಸೆಳೆದಿದ್ದರು.
ಯುವ ಕಾಂಗ್ರೆಸ್ ಮಡಿಕೇರಿ ಅಧ್ಯಕ್ಷ ಅನೂಪ್ ಕುಮಾರ್ ಸುಂಟಿಕೊಪ್ಪ ಅವರನ್ನು ಕೋರಿ ವಾಹನ ವ್ಯವಸ್ಥೆ ಕಲ್ಪಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಯಿತು. ಮಾಧ್ಯಮ ಸ್ಪಂದನ ತಂಡದ ಸದಸ್ಯ ಪುತ್ತಂ ಪ್ರದೀಪ್, ಬಾಲನ್, ಚೆಶೈರ್ ಹೋಮ್ ಪ್ರಾಂಶುಪಾಲ ಶಿವರಾಜ್ ಜೊತೆಗಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಬ್ರಮಣಿ ಅವರಿಗೆ ಯಶಸ್ವಿಯಾಗಿ ಕೃತಕ ಕಾಲು ಅಳವಡಿಸಲಾಗಿದೆ. ಮಡಿಕೇರಿ ನಗರಸಭೆ ಜೆ.ಡಿ.ಎಸ್. ಸದಸ್ಯ ಎಂ.ಎ. ಮುಸ್ತಫಾ ಆರ್ಥಿಕ ನೆರವು ಒದಗಿಸಿ ಸಹಕಾರ ನೀಡಿದರು.