ಇಸ್ರೇಲ್, ಜೂ. ೧೪ : ಪರಮಾಣು ಬಾಂಬುಗಳ ನಿರ್ಮಾಣದಲ್ಲಿ ತೊಡಗಿದೆ ಎಂಬ ಆರೋಪದಡಿ ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್ನ ರಾಜಧಾನಿ ಟೆಲ್-ಅವೀವ್ ಮೇಲೆ ಇರಾನ್ ಪ್ರತಿ ದಾಳಿ ನಡೆಸಿದೆ.
ಬಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿದ ಇರಾನ್, ಇಸ್ರೇಲ್ ರಾಜಧಾನಿ ಟೆಲ್-ಅವೀವ್ನ ಹಲವು ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಪರಿಣಾಮ ಇಸ್ರೇಲ್ನ ಕೆಲವು ನಾಗರಿಕರೂ ಕೂಡ ಹತರಾಗಿದ್ದಾರೆ. ಪರಮಾಣು ಬಾಂಬುಗಳ ತಯಾರಿಯಲ್ಲಿ ಇರಾನ್ ತೊಡಗಿದ್ದಾಗಿ ಖಚಿತ ಮಾಹಿತಿ ಪಡೆದ ಇಸ್ರೇಲ್ನ ರಕ್ಷಣಾ ಪಡೆ ಈ ಆಯುಧಗಳನ್ನು ಉತ್ಪಾದಿಸಬಲ್ಲ ಇರಾನಿನ ಹಲವಾರು ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ತಾ. ೧೨ ರ ರಾತ್ರಿಯಿಂದ ತಾ.೧೩ ರ ಮುಂಜಾನೆಯವರೆಗೆ ವಾಯು ದಾಳಿ ನಡೆಸಿ ಇರಾನಿನ
(ಮೊದಲ ಪುಟದಿಂದ) ಹಲವು ಪ್ರಮುಖ ಸೇನಾಧಿಕಾರಿಗಳು, ೯ ಪರಮಾಣು ವಿಜ್ಞಾನಿಗಳು ಸೇರಿದಂತೆ ಸುಮಾರು ೮೦ ಮಂದಿಯನ್ನು ಬಲಿಪಡೆದಿತು. ಇದಕ್ಕೆ ಪ್ರತಿದಾಳಿಯಂತೆ ನೂರಕ್ಕೂ ಅಧಿಕ ಡ್ರೋನ್ಗಳನ್ನು ತಾ. ೧೩ರಂದೇ ಇಸ್ರೆಲ್ ಮೇಲೆ ಇರಾನ್ ಪ್ರಯೋಗಿಸಿತ್ತು. ಆದರೆ ಇರಾನಿನ ರಕ್ಷಣಾ ಪಡೆಯ ಸಿಸ್ಟಮ್ಗಳಿಂದ ಈ ಡ್ರೋನ್ಗಳನ್ನು ನಿಯಂತ್ರಿಸಲಾಯಿತು.
ಇAದು ಪ್ರತಿ ದಾಳಿಯ ೨ನೇ ಹಂತವಾಗಿ ಬಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿದ ಇರಾನ್, ಇಸ್ರೇಲ್ನ ರಾಜಧಾನಿಯನ್ನು ಗುರಿಯಾಗಿಸಿ ಹಲವು ಕಟ್ಟಡಗಳನ್ನು ಧ್ವಂಸಗೊಳಿಸಿತು. ಈ ದಾಳಿಯಲ್ಲಿ ಇಸ್ರೇಲ್ನ ಕೆಲವು ನಾಗರಿಕರು ಕೂಡ ಬಲಿಯಾಗಿದ್ದಾರೆ. ಹಲವು ವರ್ಷಗಳವರೆಗೂ ಯುದ್ಧ ಮುಂದುವರಿಸಲು ತಾವು ತಯಾರಾಗಿರುವುದಾಗಿ ಇರಾನ್ನ ಹಿರಿಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಇರಾನ್ನ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜÁ಼ಮಿನ್ ನೆತನ್ಸಾಹು, ಇಸ್ರೇಲ್ನ ಭವಿಷ್ಯಕ್ಕಾಗಿ ಯುದ್ಧ ಅನಿವಾರ್ಯವಾಗಿದ್ದು, ಇರಾನ್ನ ಜನತೆಯ ಜೊತೆ ತಾನು ಇರುವುದಾಗಿ ಘೋಷಿಸಿದ್ದಾರೆ.