ಕರಿಕೆ, ಮೇ ೨೯: ತಲಕಾವೇರಿ ವನ್ಯಜೀವಿ ವಲಯದ ಬಾಚಿಮಲೆ ಎಂಬಲ್ಲಿ ಭಾಗಮಂಡಲ - ಕರಿಕೆ ಅಂತರ್‌ರಾಜ್ಯ ಸಂಪರ್ಕ ರಸ್ತೆ ಮಧ್ಯೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.

ಬಿಎಸ್‌ಎನ್‌ಎಲ್ ಅಂತರ್ಜಾಲದ ಸಂಪರ್ಕ ಗುತ್ತಿಗೆದಾರ ಚೇರಂಬಾಣೆಯ ಕಾಳಪ್ಪ ಎಂಬವರು ಕರಿಕೆಯಿಂದ ತೆರಳುವ ಸಂದರ್ಭ ಹೆಬ್ಬಾವು ಪತ್ತೆಯಾಗಿದ್ದು ಸುಮಾರು ಎಂಟು ಅಡಿ ಉದ್ದವಿರುವುದಾಗಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.