ನಾಪೋಕ್ಲು, ಮೇ ೨೯: ಇಲ್ಲಿಗೆ ಸಮೀಪದ ಮರಂದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ, ಭದ್ರಕಾಳಿ ದೇವಸ್ಥಾನದ ವಿಷ್ಣುಮೂರ್ತಿಯ ದೊಡ್ಡ ಪಟ್ಟಣಿ ಹಬ್ಬವು ತಾ ೩೧ರಂದು ನಡೆಯಲಿದೆ.
ಜೂನ್ ೧ರಂದು ಬೆಳಿಗ್ಗೆ ೧೦ ಗಂಟೆಯಿAದ ಊರಿನ ೧೩ ಕುಟುಂಬದ ದೊಡ್ಡ ಮನೆಯಿಂದ ಕಲಿಯಪಾತ್ರೆ ಇಳಿದು ೧೧ ಗಂಟೆಗೆ ದೇವಸ್ಥಾನಕ್ಕೆ ಸೇರುವರು. ತದನಂತರ ೩ ಗಂಟೆಗೆ ೩ ಕೇರಿಯಿಂದ ಎತ್ತು ಪೋರಾಟ ಬಂದು ದೇವಸ್ಥಾನಕ್ಕೆ ಸೇರುವುದು. ೪ಕ್ಕೆ ಬಾಳೋಪಾಟ್ , ಬೊಳಕಾಟ್ ಜರುಗಲಿದೆ.
ಜೂನ್ ೨ರಂದು ಬೆಳಿಗ್ಗೆ ೬ ಗಂಟೆಯಿAದ ಸಾರ್ಥವು ಅಯ್ಯಪ್ಪ, ಅಜ್ಜಪ್ಪ ದೇವರ ಕೋಲಾಟವು ನಡೆಯಲಿದೆ. ಬಳಿಕ ೧೨.೩೦ ಗಂಟೆಯಿAದ ಭದ್ರಕಾಳಿ ಹಾಗೂ ಪಡಮಾಳಿ ದೇವರ ಕೋಲ, ತಿರುಮುಡಿ ತೆಗೆಯುವುದು ನಡೆಯಲಿದೆ.