ವಾಯು - ವರುಣನ ಅಬ್ಬರ ಕಡಿಮೆಯಾಗುವ ನಿರೀಕ್ಷೆಯಲ್ಲಿ ಜನತೆ

ಮಡಿಕೇರಿ, ಮೇ ೨೯: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ವಾಯು-ವರುಣನ ಅಬ್ಬರ ಎದುರಿಸುತ್ತಿರುವ ಕೊಡಗಿನ ಜನತೆ ಮಳೆ- ಗಾಳಿಯ ತೀವ್ರತೆ ಒಂದಷ್ಟು ಕಡಿಮೆಯಾಗುವ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ. ಒಂದು ವಾರದ ಕಾಲದ ವಾತಾವರಣದ ಅಸಹಜತೆಗೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಈಗಲೂ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ.

ಬುಧವಾರದAದು ದಿನವಿಡೀ ರಭಸದ ಮಳೆಯಾಗಿದ್ದು, ಗುರುವಾರ ಒಂದಷ್ಟು ಇಳಿಮುಖವಾದಂತಿತ್ತು. ಆದರೂ ಮಳೆಗಾಲದ ಸನ್ನಿವೇಶವೇ ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಅನಿರೀಕ್ಷಿತವಾಗಿ ಎದುರಾದ ಈ ಪರಿಸ್ಥಿತಿಯಿಂದಾಗಿ ಮುಂಗಾರು ಮಳೆಗೆ ಪೂರ್ವ ತಯಾರಿ ಮಾಡಿಕೊಳ್ಳಲಾಗದ ಜನತೆ ಮಳೆ - ಗಾಳಿಯ ರಭಸ ಕಡಿಮೆಯಾಗಲು ಪರಿತಪಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿದ್ದು, ವಿದ್ಯುತ್, ದೂರವಾಣಿ ಸಂಪರ್ಕ ಕಡಿತವಾಗಿರುವುದು ಇದೀಗ ಹಂತಹAತವಾಗಿ ಸರಿಯಾಗುತ್ತಿದೆ.

ನಗರ - ಪಟ್ಟಣ ಪ್ರದೇಶಗಳಲ್ಲಿ ಪರಿಸ್ಥಿತಿ ಒಂದಷ್ಟು ಸುಧಾರಿಸಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ವ್ಯವಸ್ಥೆ ಸಮರ್ಪಕವಾಗಿಲ್ಲ.ಮಳೆ ವಿವರ

ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨.೧೫ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೦.೦೬೮ ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨೫.೭೩ ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ ೧೩.೦೭ ಇಂಚು ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩.೦೨ ಇಂಚು ಮಳೆಯಾಗಿದ್ದು, ಜನವರಿಯಿಂದ ಇಲ್ಲಿ ತನಕ ೩೫ ಇಂಚು ದಾಖಲಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ಸರಾಸರಿ ೨.೦೨ ಇಂಚು ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ೨೬ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೯.೮೪ ಇಂಚು ಮಳೆಯಾಗಿತ್ತು.

ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೧.೮೪ ಇಂಚು ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨೪.೩೩ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧೩ ಇಂಚು ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೨.೨೬ ಇಂಚು ಮಳೆಯಾಗಿದೆ. ಜನವರಿಯಿಂದ ಇಲ್ಲಿ ತನಕ ೨೩.೨ ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ ೧೦.೧೨ ಇಂಚು ಮಳೆಯಾಗಿತ್ತು.

ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧.೬೬ ಇಂಚು ಮಳೆಯಾಗಿದೆ. ಜನವರಿಯಿಂದ ಇಲ್ಲಿ ತನಕ ೧೯.೨೬ ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ ೧೪ ಇಂಚು ಮಳೆಯಾಗಿತ್ತು.

ಹೋಬಳಿವಾರು ದಾಖಲಾದ ಮಳೆ

ಮಡಿಕೇರಿ ಕಸಬಾ ೩.೫೪ ಇಂಚು, ನಾಪೋಕ್ಲು ೩.೧೬, ಸಂಪಾಜೆ ೦.೧೬, ಭಾಗಮಂಡಲ ೫.೨, ವೀರಾಜಪೇಟೆ ೧.೯೮, ಅಮ್ಮತ್ತಿ ೨.೦೨, ಹುದಿಕೇರಿ ೧.೯೭, ಶ್ರೀಮಂಗಲ ೩.೦೪, ಪೊನ್ನಂಪೇಟೆ ೧.೬, ಬಾಳೆಲೆ ೦.೭೬, ಸೋಮವಾರಪೇಟೆ ೨.೭೨, ಶನಿವಾರಸಂತೆ ೨, ಶಾಂತಳ್ಳಿ ೩.೩೬, ಕೊಡ್ಲಿಪೇಟೆ ೦.೯೬, ಕುಶಾಲನಗರ ೦.೯೬, ಸುಂಟಿಕೊಪ್ಪ ೨.೩೬ ಇಂಚು ಮಳೆಯಾಗಿದೆ.

ಮಡಿಕೇರಿ: ಶಾಂತಳ್ಳಿ ಹೋಬಳಿ ತಲ್ತಾರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ಸುಶೀಲ ಬೋಪಯ್ಯ ಅವರ ಮನೆ ಭಾರಿ ಮಳೆ ಗಾಳಿಯಿಂದ ಹಾನಿಯಾಗಿದ್ದು, ಕುಟುಂಬಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಆಹಾರದ ಕಿಟ್ ವಿತರಣೆ ಮಾಡಿದರು.

ಸಿದ್ದಾಪುರ: ಮಳೆಯಿಂದ ಮನೆ ಹಾನಿಗೀಡಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅಧಿಕಾರಿಗಳು ಆಹಾರ ಸಾಮಗ್ರಿ ಕಿಟ್ ವಿತರಿಸಿದರು.

ನೆಲ್ಲಿಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿ ನಿವಾಸಿ ಲೀಲಾವತಿ ರಾಜು ಅವರ ಮನೆ ಕುಸಿದಿತ್ತು. ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ವಾಲ್ನೂರು-ತ್ಯಾಗತ್ತೂರು ಗ್ರಾಮದ ಬೀರಾನ್ ಅವರ ನಿವಾಸಕ್ಕೂ ಅಧಿಕಾರಿಗಳು ತೆರಳಿ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಆಡಳಿತ ಅಧಿಕಾರಿ ಸಚಿನ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.

ಸ್ಥಳಾಂತರಕ್ಕೆ ನೋಟೀಸ್

ಐಗೂರು: ಅಪಾಯದ ಸ್ಥಳಗಳಲ್ಲಿ ವಾಸಿಸುತ್ತಿರುವ ೩೫ ಕುಟುಂಬಗಳಿಗೆ ಕಂದಾಯ ಇಲಾಖೆ ಸ್ಥಳಾಂತರಗೊಳ್ಳುವAತೆ ನೋಟೀಸ್ ನೀಡಿದೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ಪಾತ್ರ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳ ಸುರಕ್ಷತೆ ದೃಷ್ಟಿಯಲ್ಲಿ ಸ್ಥಳಾಂತರವಾಗುವAತೆ ಸೂಚಿಸಲಾಗಿದೆ. ಗ್ರಾಮದ ಒಟ್ಟು ೩೫ ಮನೆಗಳಿಗೆ ತಿಳುವಳಿಕ ಪತ್ರ ನೀಡಲಾಗಿದೆ. ಈಗಾಗಲೇ ಸೋಮವಾರಪೇಟೆಯಲ್ಲಿ ಕಾಳಜಿ ಕೇಂದ್ರವನ್ನು ಗುರುತಿಸಲಾಗಿದೆ ಎಂದು ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣ ಕುಮಾರ್ ತಿಳಿಸಿದ್ದಾರೆ.

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲೂ ಗುರುವಾರ ಮುಂಜಾನೆಯಿAದಲೂ ಧಾರಾಕಾರ ಗಾಳಿ ಸಹಿತ ಮಳೆ ಸುರಿಯಿತು. ಅಲ್ಲಲ್ಲಿ ರಸ್ತೆ ಬದಿಗಳ ಮರಗಳು ಧರೆಗುರುಳಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಬುಧವಾರ-ಗುರುವಾರ ಎರಡು ದಿನಗಳ ರಭಸದ ಗಾಳಿ - ಮಳೆಗೆ ಮಲ್ಲಳ್ಳಿ, ಊರುಗುತ್ತಿ, ಬೆಸೂರು. ಹೊನ್ನವಳ್ಳಿ, ಕಾರ್ಗೋಡು, ಬೆಂಬಳೂರು ಗ್ರಾಮಗಳಿಗೆ ಹೋಗುವ ರಸ್ತೆಗಳಲ್ಲಿ ಅಡ್ಡಲಾಗಿ ಮರಗಳು ಬಿದ್ದಿದ್ದವು. ವಾಹನ ಸಂಚಾರಕ್ಕೆ ಅಡಚಣೆಯಾಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಶನಿವಾರಸಂತೆ ವಲಯ ಅರಣ್ಯಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಗಾಳಿ - ಮಳೆ ಲೆಕ್ಕಿಸದೇ ಎಲ್ಲೆಡೆ ರಸ್ತೆಗಳಲ್ಲಿ ಬಿದ್ದಿದ್ದ ಮರಗಳನ್ನು ಕಡಿದು ತೆರವುಗೊಳಿಸಿ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಜಿ. ವಿಕ್ರಮ್, ಪುನೀತ್, ವಿಶ್ವನಾಥ್ ಶಾಬಣ್ಣನವರ್, ಗಸ್ತು ವನಪಾಲಕರಾದ ಬಿ.ಜಿ. ಭರಮಪ್ಪ, ಆನಂದ್ ಮಠಪತಿ, ಕರೆಪ್ಪ ಪೂಜಾರಿ, ಭೀಮಪ್ಪ ಸತ್ತಿ, ಎಸ್.ಕೆ. ರಮೇಶ್ ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಶನಿವಾರಸಂತೆ: ಹೋಬಳಿಯಾದ್ಯಂತ ಭಾರಿ ಗಾಳಿ-ಮಳೆ ಮುಂದುವರೆದಿದ್ದು, ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಣಕೋಡು ಗ್ರಾಮದ ಕೂಲಿಕಾರ್ಮಿಕ ಸುಬ್ಬಯ್ಯ ಅವರ ಮನೆಯ ಒಂದು ಭಾಗ ಕುಸಿದು ಬಿದ್ದಿದ್ದು ಶೇ. ೫೦ ರಷ್ಟು ಹಾನಿಯಾಗಿದೆ.

ಕಳೆದ ವರ್ಷದ ಮಳೆಗಾಲದಲ್ಲು ಸುಬ್ಬಯ್ಯ ಅವರ ಮನೆಯ ಮತ್ತೊಂದು ಭಾಗ ಕುಸಿದು ಬಿದ್ದಿತ್ತು. ಪರಿಹಾರವಾಗಿ ರೂ. ೧.೨೦ ಲಕ್ಷ ಮಂಜೂರಾಗಿ ದುರಸ್ತಿಪಡಿಸಿದ್ದರು. ಆದರೆ, ಈ ವರ್ಷವೂ ಮಳೆಗೆ ಮನೆಯ ಮತ್ತೊಂದು ಭಾಗದ ಗೋಡೆಯೂ ಕುಸಿದು ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಕಾರ್ಯನಿರ್ವಹಣಾಧಿಕಾರಿ ಪರಮೇಶ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಮಿತಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಆರ್. ಸುರೇಶ್, ಶನಿವಾರಸಂತೆ ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಚಂದನ್, ಇತರರು ಭೇಟಿ ನೀಡಿ ಪರಿಶೀಲಿಸಿದರು.

ಮನೆ ಹಾನಿಗೊಳಗಾದ ಸುಬ್ಬಯ್ಯ ಕುಟುಂಬಕ್ಕೆ ಟಾರ್ಪಲ್ ಒದಗಿಸಿದ್ದು ಪಕ್ಕದ ಸಮುದಾಯ ಭವನದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ, ಆಹಾರ ಸಾಮಗ್ರಿಗಳ ಕಿಟ್‌ಅನ್ನು ಒದಗಿಸಲಾಗಿದೆ.

ಮಡಿಕೇರಿ: ನೆರೆ ಸಂತ್ರಸ್ತರಿಗೆ ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ ದಿನಬಳಕೆ ಆಹಾರ ಸಾಮಗ್ರಿ ಕಿಟ್ ವಿತರಿಸಿದರು.

ಮಳೆಯಿಂದ ಮನೆ ಹಾನಿಯಾದ ಶನಿವಾರಸಂತೆ ದೊಡ್ಡಹನಕೋಡು ಗ್ರಾಮದ ಪಾರ್ವತಿ, ಈರಮ್ಮ ಕುಟುಂಬಕ್ಕೆ ಕಿಟ್ ವಿತರಣೆ ಮಾಡಲಾಯಿತು. ಮಡಿಕೇರಿ: ನೆರೆ ಸಂತ್ರಸ್ತರಿಗೆ ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ ದಿನಬಳಕೆ ಆಹಾರ ಸಾಮಗ್ರಿ ಕಿಟ್ ವಿತರಿಸಿದರು.

ಮಳೆಯಿಂದ ಮನೆ ಹಾನಿಯಾದ ಶನಿವಾರಸಂತೆ ದೊಡ್ಡಹನಕೋಡು ಗ್ರಾಮದ ಪಾರ್ವತಿ, ಈರಮ್ಮ ಕುಟುಂಬಕ್ಕೆ ಕಿಟ್ ವಿತರಣೆ ಮಾಡಲಾಯಿತು.

ಮಡಿಕೇರಿ: ಭಾಗಮಂಡಲ ಹೋಬಳಿ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗೂರು ಗ್ರಾಮದ ದೋಣಿ ಕಾಡು ಪ್ರದೇಶವನ್ನು ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮವನ್ನು ಪರಿಶೀಲಿಸಿದರು ಹಾಗೂ ಪದಕಲ್ಲು ಗ್ರಾಮದ ಹಾನಿಗೊಳಗಾಗಿರುವ ಭಾಸ್ಕರ್ ಎಂಬವರ ಮನೆಯನ್ನು ಪರಿಶೀಲಿಸಿದರು ಮತ್ತು ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಕಾಯ್ದಿರಿಸಿದ ಚೇರಂಬಾಣೆ ಗ್ರಾಮದ ಬಾಲಕರ ಭವನ ಭಾಗಮಂಡಲ ಗ್ರಾಮದ ಐಟಿಐ ಕಾಲೇಜು ಹಾಗೂ ಭಾಗಮಂಡಲ ಗ್ರಾಮದ ಕಾಶಿ ಮಠದಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.

ಸ್ಥಳದಲ್ಲಿ ಭಾಗಮಂಡಲ ಹೋಬಳಿ ಕಂದಾಯ ಪರಿಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಹಾಜರಿದ್ದರು.ಮರ ಧರಾಶಾಯಿ

ವೀರಾಜಪೇಟೆ: ವಿಪರೀತ ಗಾಳಿ ಹಾಗೂ ಮಳೆಯ ಪರಿಣಾಮ ಬೃಹತ್ ಗಾತ್ರದ ಮರವೊಂದು ಕಾಫಿ ತೋಟದಿಂದ ರಸ್ತೆಯ ಮೇಲೆ ಬಿದ್ದ ಘಟನೆ ರಾಮನಗರ ಸಮೀಪದ ಜಲಕೊಲ್ಲಿಯಲ್ಲಿ ಸಂಭವಿಸಿದೆ.

ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಕಂಬ ಧರೆಗುರುಳಿದೆ. ಈ ಸಂದರ್ಭ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳೀಯರು ವೀರಾಜಪೇಟೆಯ ಸೆಸ್ಕ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಹಾಗೂ ವಿದ್ಯುತ್ ತಂತಿಯನ್ನು ಸಮರ್ಪಕವಾಗಿ ಅಳವಡಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ವೀರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ಕಾಳಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಮುಂಗಾರು ಮುಂಚಿತವಾಗಿ ಆರಂಭವಾಗಿರುವುದರಿAದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ತಾಲೂಕಿನ ಸೂಕ್ಷ÷್ಮ ಮತ್ತು ಅತಿಸೂಕ್ಷ÷್ಮ ಪ್ರದೇಶದಲ್ಲಿನ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ವೀರಾಜಪೇಟೆಯ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ವೀರಾಜಪೇಟೆ ಸುತ್ತಮುತ್ತಲಿನ ಅಪಾಯದ ಸ್ಥಳಗಳಲ್ಲಿರುವವರಿಗೆ ಕಾಳಜಿ ಕೇಂದ್ರ ತೆರೆದು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳಲು ಪ್ರಾರಂಭವಾದಾಗಲೇ ಕಾಳಜಿ ಕೇಂದ್ರದ ವ್ಯವಸ್ಥೆಯನ್ನು ವೀರಾಜಪೇಟೆ ಪುರಸಭೆ ವತಿಯಿಂದ ಮಾಡಲಾಗಿದೆ. ಯಾರೂ ಕೂಡ ಇದುವರೆಗೂ ಕಾಳಜಿ ಕೇಂದ್ರಕ್ಕೆ ಬಂದಿಲ್ಲ. ಪುರಸಭೆ ವತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮುಂಗಾರು ಆರಂಭ ಹಿನ್ನೆಲೆ ವೀರಾಜಪೇಟೆ ತಾಲೂಕು ವಿಪತ್ತು ನಿರ್ವಹಣಾ ಕೇಂದ್ರ-೦೮೨೭೪-೨೫೭೩೨೮, ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ

ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ವಿಕೋಪಪೀಡಿತ ಪ್ರದೇಶಗಳಲ್ಲಿ ಲಭ್ಯವಿರಬೇಕಾದ ಔಷಧ, ಚಿಕಿತ್ಸಾ ಉಪಕರಣಗಳ ಕುರಿತಂತೆ ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಇದೀಗ ಮಳೆಯ ಪ್ರಮಾಣ ತಗ್ಗಿರುವುದರಿಂದ ಯಾರೂ ಕೂಡ ಕಾಳಜಿ ಕೇಂದ್ರದ ಆಶ್ರಯ ಪಡೆದುಕೊಂಡಿಲ್ಲ. ನೆರೆ ಸಂತ್ರಸ್ತರಿಗಾಗಿ ಸಿದ್ಧಗೊಂಡಿರುವ ಕಾಳಜಿ ಕೇಂದ್ರಗಳು

ಮಡಿಕೇರಿ: ಕೊಡಗಿನಲ್ಲಿ ಮಳೆ ಬಿರುಸು ಪಡೆದುಕೊಂಡು ವಾರಗಳು ಉರುಳಿವೆ. ದಿನಕ್ಕೊಂದು ಹಾನಿ, ಪ್ರವಾಹ ಪರಿಸ್ಥಿತಿಯಿಂದ ಜನಜೀವನದ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಸಾವು-ನೋವುಗಳು ಸಂಭವಿಸಿವೆ. ಪ್ರತಿ ಮಳೆಗಾಲದಲ್ಲೂ ಜಿಲ್ಲಾಡಳಿತ ಸೂಕ್ಷö್ಮ, ಅತೀ ಸೂಕ್ಷö್ಮ ಪ್ರದೇಶಗಳನ್ನು ಗುರುತಿಸುತ್ತದೆ. ಈ ಬಾರಿಯೂ ಸಂಭವನೀಯ ವಿಪತ್ತು ಪ್ರದೇಶಗಳನ್ನು ಪಟ್ಟಿ ಮಾಡಲಾಗಿದ್ದು, ಜನರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.

ಅಪಾಯದಂಚಿನಲ್ಲಿ ವಾಸಿಸುವವರ ಸ್ಥಳಾಂತರಕ್ಕೂ ನೋಟೀಸ್ ನೀಡಲಾಗುತ್ತಿದ್ದು, ಬೇರೆಡೆ ಆಶ್ರಯ ಪಡೆಯಲು ಸೂಚನೆ ನೀಡಲಾಗಿದೆ. ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆಯೊಂದಿಗೆ ಆಶ್ರಯ ನೀಡಲು ೧೦೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾಳಜಿ ಕೇಂದ್ರ ಗುರುತಿಸಲಾಗಿದೆ. ಈ ಪೈಕಿ ವಿವಿಧೆಡೆ ಕಾಳಜಿ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದ್ದು, ತಾಲೂಕು, ಸ್ಥಳೀಯಾಡಳಿತದಿಂದ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಆದರೆ, ಇದುವರೆಗೆ ಯಾರೊಬ್ಬರು ಕಾಳಜಿ ಕೇಂದ್ರವನ್ನು ಆಶ್ರಯಿಸಿಲ್ಲ. ಆದರೂ ಕೇಂದ್ರವನ್ನು ಸಿದ್ಧವಾಗಿರಿಸಿಕೊಳ್ಳಲಾಗಿದೆ.

ಗೋಣಿಕೊಪ್ಪಲು: ಮಳೆ ಹಾನಿ ಪ್ರದೇಶಕ್ಕೆ ತಹಶೀಲ್ದಾರ್ ಮೋಹನ್ ಕುಮಾರ್ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಿದರು.

ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು, ಚೌಡಿಕಟ್ಟೆ, ಮಜ್ಜಿಗೆಹಳ್ಳ ಭಾಗಗಳಿಗೆ ತೆರಳಿ ಮಳೆಯಿಂದ ಹಾನಿಗೊಳಗಾದ ಭಾಗಶಃ ಮನೆಗಳಿಗೆ ತಾಲೂಕು ಆಡಳಿತದಿಂದ ಮೊದಲ ಹಂತದಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಿದರು. ಅಪಾಯದಲ್ಲಿರುವ ಮನೆಗಳು ಮತ್ತೆ ಕುಸಿಯುವ ಭೀತಿ ಇರುವುದರಿಂದ ಸಮೀಪದ ಕಾಳಜಿ ಕೇಂದ್ರದಲ್ಲಿ ಇರುವಂತೆ ಫಲಾನುಭವಿಗಳಿಗೆ ತಹಶೀಲ್ದಾರ್ ಮನವಿ ಮಾಡಿದರು.

ಮಳೆಯಿಂದ ಭಾಗಶಃ ಹಾನಿಗೊಳಗಾದ ಮನೆಗಳಿಗೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸ್ಥಳದಲ್ಲಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ತಹಶೀಲ್ದಾರರಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಈಗಾಗಲೇ ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಮಳೆ ಹಾನಿಯಿಂದ ತೊಂದರೆ ಆದ ಸಂದರ್ಭ ಕೂಡಲೇ ಕ್ರಮ ಕೈಗೊಳ್ಳಲು ರೂ. ೨೫ ಲಕ್ಷ ಅನುದಾನವನ್ನು ನೀಡಿದ್ದಾರೆ. ಈ ಅನುದಾನದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮನೆಗಳಿಗೆ ಹಾನಿ ಆದಲ್ಲಿ ಕನಿಷ್ಟ ರೂ. ೫,೫೦೦ ರಿಂದ ಗರಿಷ್ಠ ರೂ. ೧.೨೦ ಲಕ್ಷ ಹಣವನ್ನು ಪರಿಹಾರ ರೂಪದಲ್ಲಿ ನೀಡಲು ಅವಕಾಶವಿದೆ ಎಂದರು.

ಭೇಟಿಯ ವೇಳೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ವಿನಯ್ ಕುಮಾರ್, ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ವಿ.ಕೆ. ಗಣೇಶ್, ಪೊನ್ನಂಪೇಟೆ ಕಂದಾಯ ಅಧಿಕಾರಿಗಳಾದ ಸುಧೀಂದ್ರ, ಸಹಾಯಕರುಗಳಾದ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.ಸಿದ್ದಾಪುರ: ಅಮ್ಮತ್ತಿ ಹೋಬಳಿ ಚೆನ್ನಯ್ಯನಕೋಟೆ ಗ್ರಾಮದ ಎಚ್.ಸಿ ಚಂದ್ರ ಅವರ ವಾಸದ ಮನೆಯ ಹಿಂಬದಿಯ ಗೋಡೆ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಕುಸಿದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ.

ಸಿದ್ದಾಪುರ: ಪ್ರವಾಹ ಭೀತಿ ಹಿನ್ನೆಲೆ ನೆಲ್ಲಿಹುದಿಕೇರಿ ಹಾಗೂ ಕರಡಿಗೋಡಿನಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಆದರೆ, ಯಾವುದೇ ಸಂತ್ರಸ್ತರು ಇಲ್ಲಿ ಆಶ್ರಯ ಪಡೆದಿಲ್ಲ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿದು ನದಿ ತೀರದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿತ್ತು.

ಈ ಹಿನ್ನೆಲೆ ನೆಲ್ಲಿಹುದಿಕೇರಿ ಗ್ರಾಮದ ನದಿತೀರದ ನಿವಾಸಿಗಳಿಗೆ ತುರ್ತಾಗಿ ಆಶ್ರಯ ಪಡೆಯಲು ನೆಲ್ಲಿಹುದಿಕೇರಿ ಗ್ರಾಮದ ಶಾದಿಮಹಲ್ ಸಭಾಂಗಣದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಕಾಳಜಿ ಕೇಂದ್ರ ಗುರುತಿಸಲಾಗಿvಗೋಣಿಕೊಪ್ಪಲು: ಪಟ್ಟಣದ ಕೆಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಡುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೪ ಕೊಠಡಿಗಳಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲು ಎಲ್ಲಾ ಸಿದ್ಧತೆಯನ್ನು ತಾಲೂಕು ಆಡಳಿತ ಕೈಗೊಂಡಿದೆ.

ಶೌಚಾಲಯ, ತಂಗುವ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಇನ್ನಿತರ ಅಗತ್ಯತೆಗಳನ್ನು ಒದಗಿಸಲು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಕ್ರಮ ಕೈಗೊಂಡಿದ್ದಾರೆ. ದಿನದ ೨೪ ಸಿಬ್ಬಂದಿಗಳನ್ನು ನಿಯೋಜನೆಗೂ ಪೂರ್ವತಯಾರಿ ಕೈಗೊಳ್ಳಲಾಗಿದೆ.

ನಗರದ ಕೀರೆಹೊಳೆ ಉಕ್ಕಿ ಹರಿದರೆ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭ ನಿವಾಸಿಗಳನ್ನು ಸ್ಥಳಾಂತರಿಸಿ ಇಲ್ಲಿ ಆಶ್ರಯ ನೀಡಬಹುದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವರದಿಯಾಗಿಲ್ಲ.ÀÄ್ತ. ಆದರೆ, ಪರಿಹಾರ ಕೇಂದ್ರಕ್ಕೆ ನದಿ ತೀರದ ನಿವಾಸಿಗಳು ಆಗಮಿಸಿದ ಹಿನ್ನೆಲೆ ಕಾಳಜಿ ಕೇಂದ್ರವನ್ನು ತೆರೆಯಲಿಲ್ಲ. ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದರು.

ಸಿದ್ದಾಪುರದ ಕರಡಿಗೋಡು ಗ್ರಾಮದ ನದಿತೀರದ ನಿವಾಸಿಗಳಿಗಾಗಿ ಕರಡಿಗೋಡು ಗ್ರಾಮದ ಸಮುದಾಯ ಭವನ ಹಾಗೂ ಸಿದ್ದಾಪುರದ ಸ್ವರ್ಣಮಾಲ ಸಭಾಂಗಣ ಮತ್ತು ಬಿಜಿಎಸ್ ಶಾಲೆಯ ಸಭಾಂಗಣ ಗುರುತಿಸಲಾಗಿತ್ತು. ಆದರೆ ಮಳೆಯ ರಭಸ ತಗ್ಗಿದ ಹಿನ್ನೆಲೆ ಯಾವುದೇ ಸ್ಥಳಗಳಲ್ಲಿ ಕಾಳಜಿ ಕೇಂದ್ರವು ಪ್ರಾರಂಭವಾಗಿಲ್ಲ.

ಕುಶಾಲನಗರ: ಪ್ರಕೃತಿ ವಿಕೋಪ ಹಾಗೂ ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ಏಳು ಕಡೆ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಯಾಗಿ ಪುರಸಭೆ ಮುಖ್ಯ ಅಧಿಕಾರಿ ಟಿ.ಜೆ. ಗಿರೀಶ್, ಸಹಾಯಕ ನೋಡಲ್ ಅಧಿಕಾರಿಯಾಗಿ ಕಂದಾಯ ಅಧಿಕಾರಿ ರಾಮು, ಕಾಳಜಿ ಕೇಂದ್ರಗಳ ಉಸ್ತುವಾರಿ ನಿರ್ವಹಣೆ ಅಧಿಕಾರಿಯಾಗಿ ಹಿರಿಯ ಆರೋಗ್ಯ ಅಧಿಕಾರಿ ಉದಯ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಪುರಸಭೆ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮ ವ್ಯಾಪ್ತಿಯ ಸಂತ್ರಸ್ತರಿಗೆ ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊಠಡಿಗಳನ್ನು ಮೀಸಲಿರಿಸಲಾಗಿದೆ.

ದಂಡಿನಪೇಟೆ ವ್ಯಾಪ್ತಿಯ ಸಂತ್ರಸ್ತರಿಗೆ ಕುಶಾಲನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೈಚನಹಳ್ಳಿ ಯೋಗಾನಂದ ಬಡಾವಣೆ ವ್ಯಾಪ್ತಿಯ ಸಂತ್ರಸ್ತರಿಗೆ ಡಾ. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಇಂದಿರಾ ಬಡಾವಣೆ ವ್ಯಾಪ್ತಿಯಲ್ಲಿ ವಸತಿ ನಿಲಯ ಮತ್ತು ಹೆಚ್ಚುವರಿಯಾಗಿ ಹಾರಂಗಿ ಪುನರ್ವಸತಿ ಕೇಂದ್ರದ ಬಳಿ ಬಿಸಿಎಂ ಹಾಸ್ಟೆಲ್, ಕುವೆಂಪು ಬಡಾವಣೆ, ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಮುಳ್ಳುಸೋಗೆ ಮತ್ತು ಗುಮ್ಮನಕೊಲ್ಲಿ ಶಾಲಾ ಆವರಣದಲ್ಲಿ ತಲಾ ಎರಡು ಕೊಠಡಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಕಾಳಜಿ ಕೇಂದ್ರದ ಉಸ್ತುವಾರಿ ಅಧಿಕಾರಿ ಉದಯಕುಮಾರ್ ತಿಳಿಸಿದ್ದಾರೆ.

ಶಾಲಾ ಮುಖ್ಯಸ್ಥರು ಹಾಗೂ ಅಡುಗೆ ಸಿಬ್ಬಂದಿಗಳೊAದಿಗೆ ನಿ�