ಮಡಿಕೇರಿ, ಮೇ ೨೮: ರಾಜ್ಯದ ವಿವಿಧ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಒಟ್ಟು ೭೪ ಲೈನ್‌ಮ್ಯಾನ್‌ಗಳನ್ನು ಮಳೆಗಾಲದ ತುರ್ತು ಕೆಲಸಕ್ಕಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಸುಮಾರು ೬೨೧ ವಿದ್ಯುತ್ ಕಂಬಗಳು ಹಾನಿಯಾಗಿದ್ದು, ವಿದ್ಯುತ್ ಅಡಚಣೆ ಹೆಚ್ಚಾಗಿದೆ. ಜೊತೆಗೆ ನಿರ್ವಹಣಾ ಸಿಬ್ಬಂದಿಗಳ ಕೊರತೆ ತೀವ್ರವಾಗಿರುವುದರಿಂದ ಮಳೆಗಾಲದ ತುರ್ತು ಕೆಲಸಕ್ಕೆ ಸಿಬ್ಬಂದಿಗಳ ಅಗತ್ಯತೆಯ ಬಗ್ಗೆ ಅಧೀಕ್ಷಕ ಇಂಜಿನಿಯರ್ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ತಾ. ೨೭ ರಿಂದ ಜೂನ್ ೩೦ರ ತನಕ ಆಡಳಿತಾತ್ಮಕ ಹಿತದೃಷ್ಟಿಯಿಂದ ೭೪ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.