ಜಿಲ್ಲೆಯಲ್ಲಿ ಮಳೆ : ಮುಂದುವರೆಯುತ್ತಿರುವ ಅನಾಹುತಗಳು
ಮಡಿಕೇರಿ, ಮೇ ೨೭: ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ತಲ್ಲಣ ಸೃಷ್ಟಿಸಿರುವ ವಾಯು-ವರುಣನ ಅಬ್ಬರಕ್ಕೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ. ಈ ದುರಂತ ಮಾತ್ರವಲ್ಲದೆ ಜಿಲ್ಲೆಯ ಹಲವೆಡೆಗಳಲ್ಲಿ ಮತ್ತಷ್ಟು ಹಾನಿ ಪ್ರಕರಣಗಳು ವರದಿಯಾಗುತ್ತಿವೆ.
ಕಳೆದ ೩ ದಿನಗಳ ಹಿಂದೆ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಮರ ಬಿದ್ದು ಮೃತಪಟ್ಟ ಘಟನೆ ಮಾಸುವ ಮುನ್ನವೇ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಬಾಡಗ ಬಾಣಂಗಾಲದ ಕಾಫಿ ಬೆಳೆಗಾರ ಪೊನ್ನಚ್ಚಂಡ ವಿಷ್ಣು ಬೆಳ್ಯಪ್ಪ ಎಂಬವರ ಮೇಲೆ ಮರ ಬಿದ್ದು ಕೊನೆಯುಸಿರೆಳೆದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯಕ್ಕೂ ಮುನ್ನವೇ ಪ್ರಾಕೃತಿಕ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಎರಡಕ್ಕೆ ಏರಿದ್ದು, ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಆರ್ಜಿ ಗ್ರಾಮದಲ್ಲಿ ಗೌರಿ ಎಂಬ ಕಾರ್ಮಿಕ ಮಹಿಳೆ ದುರಂತ ಸಾವಿಗೀಡಾಗಿದ್ದರು.
ಸೋಮವಾರದಂದು ದಿನವಿಡೀ ಜಿಲ್ಲೆಯಾದ್ಯಂತ ಮಳೆ-ಗಾಳಿ ಮುಂದುವರೆದಿತ್ತು. ಮಂಗಳವಾರ ಬೆಳಿಗ್ಗೆಯ ತನಕವೂ ಮಳೆ-ಗಾಳಿ ತೀವ್ರತೆ ಕಂಡು ಬಂದಿದ್ದು, ನಂತರದಲ್ಲಿ ತುಸು ಕಡಿಮೆಯಾದಂತ್ತಿತು. ಆದರೂ ಮಳೆಗಾಲದ ಚಿತ್ರಣವೇ ಮುಂದುವರೆ ಯುತ್ತಿದ್ದು, ಜಿಲ್ಲೆಯ ವಿವಿಧೆಡೆಗಳಲ್ಲಿ ವ್ಯಾಪಕ ಹಾನಿಯಾಗಿರುವ ಕುರಿತು ವರದಿಯಾಗಿವೆ.
ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟದಲ್ಲಿ ಉಂಟಾಗಿರುವ ಏರಿಕೆ ಅದೇ ಸ್ಥಿತಿಯಲ್ಲಿ ಮುಂದು ವರೆದಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಈಗಿನ ಪರಿಸ್ಥಿತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡAತಿದೆ.
ಎರಡಕ್ಕೆ ಏರಿದ್ದು, ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಆರ್ಜಿ ಗ್ರಾಮದಲ್ಲಿ ಗೌರಿ ಎಂಬ ಕಾರ್ಮಿಕ ಮಹಿಳೆ ದುರಂತ ಸಾವಿಗೀಡಾಗಿದ್ದರು.
ಸೋಮವಾರದಂದು ದಿನವಿಡೀ ಜಿಲ್ಲೆಯಾದ್ಯಂತ ಮಳೆ-ಗಾಳಿ ಮುಂದುವರೆದಿತ್ತು. ಮಂಗಳವಾರ ಬೆಳಿಗ್ಗೆಯ ತನಕವೂ ಮಳೆ-ಗಾಳಿ ತೀವ್ರತೆ ಕಂಡು ಬಂದಿದ್ದು, ನಂತರದಲ್ಲಿ ತುಸು ಕಡಿಮೆಯಾದಂತ್ತಿತು. ಆದರೂ ಮಳೆಗಾಲದ ಚಿತ್ರಣವೇ ಮುಂದುವರೆ ಯುತ್ತಿದ್ದು, ಜಿಲ್ಲೆಯ ವಿವಿಧೆಡೆಗಳಲ್ಲಿ ವ್ಯಾಪಕ ಹಾನಿಯಾಗಿರುವ ಕುರಿತು ವರದಿಯಾಗಿವೆ.
ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟದಲ್ಲಿ ಉಂಟಾಗಿರುವ ಏರಿಕೆ ಅದೇ ಸ್ಥಿತಿಯಲ್ಲಿ ಮುಂದು ವರೆದಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಈಗಿನ ಪರಿಸ್ಥಿತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡAತಿದೆ.
ಪರದಾಟಕ್ಕೆ ಕಾರಣವಾಗಿದೆ.
ಶಾಂತಳ್ಳಿಗೆ ೬ ಇಂಚು ಮಳೆ
ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ತಾಲೂಕಿಗೆ ೬ ಇಂಚು ಮಳೆ ದಾಖಲಾಗಿದೆ. ಜಿಲ್ಲೆಗೆ ಸರಸಾರಿ ೩.೭ ಇಂಚು ಮಳೆಯಾಗಿದೆ. ಉಳಿದಂತೆ ಮಡಿಕೇರಿ ಕಸಬಾ ವ್ಯಾಪ್ತಿಯಲ್ಲಿ ೪.೪ ಇಂಚು, ನಾಪೋಕ್ಲು ಹೋಬಳಿ ೪.೦೮, ಸಂಪಾಜೆ ೦.೬, ಭಾಗಮಂಡಲ ೪.೪೮, ವೀರಾಜಪೇಟೆ ಕಸಬಾ ೩.೦೯, ಅಮ್ಮತ್ತಿ ೩.೨, ಸೋಮವಾರಪೇಟೆ ಕಸಬಾ ೩.೬, ಶನಿವಾರಸಂತೆ ೨.೫೬, ಕೊಡ್ಲಿಪೇಟೆ ೧.೬ ಇಂಚು ಮಳೆಯಾಗಿದೆ. ಪೊನ್ನಂಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೧ ಇಂಚು, ಪೊನ್ನಂಪೇಟೆ ೫.೨೮, ಶ್ರೀಮಂಗಲ ೪.೫೩, ಬಾಳೆಲೆ ೨.೬೪, ಕುಶಾಲನಗರ ಹೋಬಳಿ ೧.೮, ಸುಂಟಿಕೊಪ್ಪ ೧.೯೨ ಇಂಚು ಮಳೆ ದಾಖಲಾಗಿದೆ. ಸಿದ್ದಾಪುರ: ಕಳೆದ ಐದು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರ ವ್ಯಾಪ್ತಿಯ ಹಾಗೂ ಕೊಂಡAಗೇರಿ ಭಾಗದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಥವಾ ಕಾಳಜಿ ಕೇಂದ್ರದಲ್ಲಿ ಆಶ್ರಂiÀಚೆಯ್ಯAಡಾಣೆ: ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಸಾಂತ್ವನ ತಂಡ ತೆರವು ಮಾಡಿದೆ. ನೆಲ್ಲಿಹುದಿಕೇರಿಯಿಂದ ಅತ್ತಿಮಂಗಲಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಈ ಸಂದರ್ಭ ಎಸ್‌ವೈಎಸ್ ಸಾಂತ್ವನ ತಂಡ ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ಎಸ್‌ಎಫ್ ಸದಸ್ಯರು ಜಂಟಿಯಾಗಿ ರಸ್ತೆಯಲ್ಲಿ ಉರುಳಿದ ಬೃಹತ್ ಮರವನ್ನು ತೆರವುಗೊಳಿಸಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Ä ಪಡೆಯುವಂತೆ ಅಧಿಕಾರಿಗಳು ನೋಟೀಸ್ ನೀಡುತ್ತಿದ್ದಾರೆ.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅನಂತ್ ಶಂಕರ್ ಹಾಗೂ ಕಂದಾಯ ಪರೀಕ್ಷಕರಾದ ಅನಿಲ್ ಕುಮಾರ್ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿ ಮುತ್ತಪ್ಪ, ಭಾನುಪ್ರಿಯ. ಗ್ರಾಮ ಸಹಾಯಕ ಕೃಷ್ಣ ಅವರು ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಗುಹ್ಯ, ಕೊಂಡAಗೇರಿ ಗ್ರಾಮದ ನದಿ ತೀರದ ನಿವಾಸಿಗಳಿಗೆ ನೋಟೀಸ್ ವಿತರಿಸಿದರು. ಈಗಾಗಲೇ ತುರ್ತು ಸಂದರ್ಭದಲ್ಲಿ ನದಿ ತೀರದ ನಿವಾಸಿಗಳಿಗೆ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಅನಂತ್ ಶಂಕರ್ ಮಾಹಿತಿ ನೀಡಿದ್ದಾರೆ.
ಚೆಯ್ಯಂಡಾಣೆ: ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಸಾಂತ್ವನ ತಂಡ ತೆರವು ಮಾಡಿದೆ. ನೆಲ್ಲಿಹುದಿಕೇರಿಯಿಂದ ಅತ್ತಿಮಂಗಲಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಈ ಸಂದರ್ಭ ಎಸ್‌ವೈಎಸ್ ಸಾಂತ್ವನ ತಂಡ ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ಎಸ್‌ಎಫ್ ಸದಸ್ಯರು ಜಂಟಿಯಾಗಿ ರಸ್ತೆಯಲ್ಲಿ ಉರುಳಿದ ಬೃಹತ್ ಮರವನ್ನು ತೆರವುಗೊಳಿಸಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.