ಮಡಿಕೇರಿ, ಮೇ ೨೭ : ಪ್ರಸಕ್ತ ವರ್ಷ ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿದ್ದ ಕೊಡಗು ಇದೀಗ ೪ನೇ ಸ್ಥಾನದತ್ತ ದಾಪುಗಲಿರಿಸಿದೆ.
ಮೇ ೨ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಕೊಡಗು ಶೇ. ೮೨.೨೧ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ಐದನೇ ಸ್ಥಾನ ಹೊಂದಿತ್ತು. ನಾಲ್ಕನೇ ಸ್ಥಾನ ಶಿವಮೊಗ್ಗ ಜಿಲ್ಲೆಗೆ ದೊರೆತಿದ್ದು, ಶಿವಮೊಗ್ಗಕ್ಕಿಂತ ಕೊಡಗು ೦.೦೮ ಕಡಿಮೆ ಫಲಿತಾಂಶ ಪಡೆದಿತ್ತು.
ಇದೀಗ ಮರು ಮೌಲ್ಯ ಮಾಪನದ ಬಳಿಕ ಕೊಡಗು ನಾಲ್ಕನೇ ಸ್ಥಾನಕ್ಕೆ ಏರುತ್ತಿದೆ. ಮರು ಮೌಲ್ಯಮಾಪನದಲ್ಲಿ ಕೊಡಗು ಜಿಲ್ಲೆಯ ೨೫ ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ವಿಶೇಷವಾಗಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ೧೧, ಸೋಮವಾರಪೇಟೆ ತಾಲೂಕಿನಲ್ಲಿ ೧೩ ಹಾಗೂ ಮಡಿಕೇರಿ ತಾಲೂಕಿನಲ್ಲಿ ಓರ್ವ ವಿದ್ಯಾರ್ಥಿ ಸೇರಿ ಒಟ್ಟು ೨೫ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆರಂಭದಲ್ಲಿ ಇಷ್ಟು ಮಂದಿ ಅನುತ್ತೀರ್ಣರಾಗಿದ್ದಾಗಿ ಫಲಿತಾಂಶ ಬಂದಿತ್ತು. ಈ ೨೫ ವಿದ್ಯಾರ್ಥಿಗಳು ಮೊದಲನೇ ಪರೀಕ್ಷೆಯಲ್ಲೇ ತೇರ್ಗಡೆಯ ಪಟ್ಟಿಗೆ (ಮೊದಲ ಪುಟದಿಂದ) ಸೇರಲಿರುವುದರೊಂದಿಗೆ ಶೇಕಡವಾರು ಫಲಿತಾಂಶದಲ್ಲಿ ೦.೧೯ರಷ್ಟು ಹೆಚ್ಚಳದೊಂದಿಗೆ ಜಿಲ್ಲೆ ಮೇಲಿನ ಸ್ಥಾನಕ್ಕೆ ಏರುತ್ತಿರುವುದಾಗಿ ತಿಳಿದುಬಂದಿದೆ.
ಇದೀಗ ಎಸ್.ಎಸ್.ಎಲ್.ಸಿ. ಎರಡನೇ ಪರೀಕ್ಷೆ (ಪೂರಕ ಪರೀಕ್ಷೆ) ನಡೆಯುತ್ತಿದೆ. ಜಿಲ್ಲೆಯ ಮೂರು ತಾಲೂಕಿನ ತಲಾ ಎರಡು ಕೇಂದ್ರಗಳಲ್ಲಿ ಪರೀಕ್ಷೆ ಜರುಗುತ್ತಿದೆ. ಒಟ್ಟು ೬೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೂ ತಮ್ಮ ಸಾಧನೆಯ ಪ್ರಗತಿ ಹೆಚ್ಚಿಸಿಕೊಳ್ಳಲು ಮತ್ತೆ ಪರೀಕ್ಷೆ ಬರೆಯುತ್ತಿದ್ದಾರೆ. ಇವರುಗಳಲ್ಲದೆ ವಿವಿಧ ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ರಿಪೀರ‍್ಸ್ ಖಾಸಗಿ ರಿಪೀರ‍್ಸ್ ಹಾಗೂ ಮರು ರಿಪೀರ‍್ಸ್ಗಳೂ ಎರಡನೆಯ ಪರೀಕ್ಷೆ ಬರೆಯುತ್ತಿದ್ದಾರೆ.
ಕನ್ನಡದಲ್ಲಿ ೬೨೫, ಇಂಗ್ಲೀಷ್ ೪೬೨, ಹಿಂದಿ ೬೭೩, ಗಣಿತ ೧೦೬೩, ವಿಜ್ಞಾನ ೧೦೦೪ ಹಾಗೂ ಸಮಾಜಶಾಸ್ತçದಲ್ಲಿ ೮೩೩ ಮಂದಿ ಪರೀಕ್ಷೆೆ್ಷ ಎದುರಿಸುತ್ತಿದ್ದಾರೆ. ಈಗಾಗಲೇ ಕನ್ನಡ ಹಾಗೂ ಗಣಿತ ಪರೀಕ್ಷೆ ಮುಗಿದಿದ್ದು ಇತರ ವಿಷಯಗಳ ಪರೀಕ್ಷೆ ನಡೆಯಬೇಕಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖಾ ಮಾಹಿತಿ ತಿಳಿಸಿದೆ.