ಮಡಿಕೇರಿ, ಮೇ ೨೭: ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ನಡೆಯುತ್ತಿರುವ ಮಡಿಕೇರಿಯ ಡಾ. ಬಿ.ಆರ್. ಅಂಬೇಡ್ಕರ್ ಬಾಲಕರ ವಸತಿ ನಿಲಯ ಅವ್ಯವಸ್ಥೆಗಳ ಆಗರವಾಗಿ ಮಾರ್ಪಾಡಾಗಿದ್ದು, ಕಟ್ಟಡದಲ್ಲಿ ನೀರಿನ ಸೋರಿಕೆ ಉಂಟಾಗಿ ವಾಸ್ತವ್ಯ ಮಾಡಲು ಕಷ್ಟಕರ ಎಂಬ ಹಂತಕ್ಕೆ ತಲುಪಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ರಾತೋರಾತ್ರಿ ನಗರದ ಹೃದಯ ಭಾಗದಲ್ಲಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸುವ ಮೂಲಕ ಆಡಳಿತದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಚೈನ್‌ಗೇಟ್ ಬಳಿ ಇರುವ ವಸತಿ ನಿಲಯದಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸೂಕ್ತ ವ್ಯವಸ್ಥೆಗಳಿಲ್ಲದೆ ಸಮಸ್ಯೆ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಮಳೆಗಾಲದ ಅವಧಿಯಲ್ಲಿಯೂ ಬಿಸಿ ನೀರಿನ ವ್ಯವಸ್ಥೆ ಇಲ್ಲ, ಹಾಸ್ಟೆಲ್ ಒಳಗಡೆ ಹಾವು ಬರುತ್ತಿದೆ. ನಿಯೋಜನೆಗೊಂಡಿರುವ ವಾರ್ಡನ್ ತಿಂಗಳಿಗೊಮ್ಮೆ ಬರುತ್ತಾರೆ ಎಂಬ ಸಾಲು ಸಾಲು ದೂರುಗಳು ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿವೆ.
ಮಳೆಗಾಲ ಆಗಿರುವುದರಿಂದ ಬಿಸಿನೀರಿನ ಸೌಲಭ್ಯ ಅಗತ್ಯವಾಗಿದೆ. ಆದರೆ, ವಿದ್ಯುತ್ ಕಡಿತ ನೆಪವೊಡ್ಡಿ ನೀರಿನ ವ್ಯವಸ್ಥೆ ಇಲ್ಲ ಎಂದು ಸಿಬ್ಬಂದಿಗಳು ಮಡಿಕೇರಿ, ಮೇ ೨೭: ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ನಡೆಯುತ್ತಿರುವ ಮಡಿಕೇರಿಯ ಡಾ. ಬಿ.ಆರ್. ಅಂಬೇಡ್ಕರ್ ಬಾಲಕರ ವಸತಿ ನಿಲಯ ಅವ್ಯವಸ್ಥೆಗಳ ಆಗರವಾಗಿ ಮಾರ್ಪಾಡಾಗಿದ್ದು, ಕಟ್ಟಡದಲ್ಲಿ ನೀರಿನ ಸೋರಿಕೆ ಉಂಟಾಗಿ ವಾಸ್ತವ್ಯ ಮಾಡಲು ಕಷ್ಟಕರ ಎಂಬ ಹಂತಕ್ಕೆ ತಲುಪಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ರಾತೋರಾತ್ರಿ ನಗರದ ಹೃದಯ ಭಾಗದಲ್ಲಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸುವ ಮೂಲಕ ಆಡಳಿತದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಚೈನ್‌ಗೇಟ್ ಬಳಿ ಇರುವ ವಸತಿ ನಿಲಯದಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸೂಕ್ತ ವ್ಯವಸ್ಥೆಗಳಿಲ್ಲದೆ ಸಮಸ್ಯೆ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಮಳೆಗಾಲದ ಅವಧಿಯಲ್ಲಿಯೂ ಬಿಸಿ ನೀರಿನ ವ್ಯವಸ್ಥೆ ಇಲ್ಲ, ಹಾಸ್ಟೆಲ್ ಒಳಗಡೆ ಹಾವು ಬರುತ್ತಿದೆ. ನಿಯೋಜನೆಗೊಂಡಿರುವ ವಾರ್ಡನ್ ತಿಂಗಳಿಗೊಮ್ಮೆ ಬರುತ್ತಾರೆ ಎಂಬ ಸಾಲು ಸಾಲು ದೂರುಗಳು ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿವೆ.
ಮಳೆಗಾಲ ಆಗಿರುವುದರಿಂದ ಬಿಸಿನೀರಿನ ಸೌಲಭ್ಯ ಅಗತ್ಯವಾಗಿದೆ. ಆದರೆ, ವಿದ್ಯುತ್ ಕಡಿತ ನೆಪವೊಡ್ಡಿ ನೀರಿನ ವ್ಯವಸ್ಥೆ ಇಲ್ಲ ಎಂದು ಸಿಬ್ಬಂದಿಗಳು