ಸುಂಟಿಕೊಪ್ಪ, ಮೇ ೨೧: ಡಿ.ಶಿವಪ್ಪ ಸ್ಮಾರಕ ೨೬ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ ೫ನೇ ದಿನವಾದ ಬುಧವಾರÀದಂದು ನಡೆದ ಪಂದ್ಯಾವಳಿಯಲ್ಲಿ ಟಿಡಿಎಲ್ ಎಫ್.ಸಿ. ಬೈಲುಕೊಪ್ಪ ಹಾಗೂ ಬೆಟ್ಟಗೇರಿ ಎಫ್.ಸಿ. ಸುಂಟಿಕೊಪ್ಪ ತಂಡಗಳು ಮುಂದಿನ ಸುತ್ತಿಗೆ ಆರ್ಹತೆ ಪಡೆದವು.

ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿರುವ ಪುಟ್ಬಾಲ್ ಪಂದ್ಯಾವಳಿಯು ಟಿಡಿಎಲ್ ಎಫ್.ಸಿ ಬೈಲುಕೊಪ್ಪ ಹಾಗೂ ವಿಜಯನಗರ ಮೈಸೂರು ತಂಡಗಳ ನಡುವೆ ನಡೆಯಿತು. ಪಂದ್ಯಾವಳಿಯ ಮೊದಲಾರ್ಧದಲ್ಲಿ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ತಂಡದ ಆಟಗಾರ ಸಿಗ್ಮಾ ೧ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ದ್ವಿತೀಯಾರ್ಧದ ೧ನೇ ನಿಮೀಷದಲ್ಲಿ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ತಂಡದ ಚಂಗ್‌ಬಾ ಗೋಲು ಹೊಡೆದರು. ಕುಂಗ ಅವರು ಗೋಲು ಬಾರಿಸುವ ಮೂಲಕ ಮೈಸೂರು ವಿಜಯನಗರ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು.

ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ ಹಾಗೂ ಸಿಟಿಜನ್ ಉಪ್ಪಳ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲಾರ್ಧದ ೧೨ನೇ ನಿಮಿಷದಲ್ಲಿ ಸಿಟಿಜನ್ ಉಪ್ಪಳ ತಂಡದ ಮುನ್ನಡೆ ಆಟಗಾರ ಮೂಸಾಬಾಯ್ ಮೊದಲ ಗೋಲು ಬಾರಿಸುವ ಮೂಲಕ ಮುನ್ನಡೆ ತಂದುಕೊಟ್ಟಿದರು. ಆದರೆ ಎದುರಾಳಿ ಬೆಟ್ಟಗೇರಿ ತಂಡ ಮತ್ತಷ್ಟು ಬಿರುಸಿನ ಆಟಕ್ಕೆ ಇಳಿದು ಎದುರಾಳಿ ತಂಡಕ್ಕೆ ೧೮ ನೇ ನಿಮಿಷದಲ್ಲಿ ಬೆಟ್ಟಗೇರಿ ತಂಡದ ರಕ್ಷಿತ್ ೧ ಗೋಲು ಬಾರಿಸುವ ಮೂಲಕ ಎದುರಾಳಿ ಗೋಲಿಗೆ ಸಮನಾಗಿಸಿದರು.

ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶನವನ್ನು ನೀಡುತ್ತಿದ್ದರೂ ಬೆಟ್ಟಗೇರಿ ಎಫ್.ಸಿ ತಂಡದ ಮನೋಜ್ ೧೨ನೇ ನಿಮಿಷದಲ್ಲಿ ತನಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ೧ ಗೋಲು ಬಾರಿಸುವ ಮೂಲಕ ಎದುರಾಳಿ ಸಿಟಿಜನ್ ಉಪ್ಪಳ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು.