ಶನಿವಾರಸಂತೆ, ಮೇ ೧೮: ಸಮೀಪದ ಕೊಡ್ಲಿಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಾಷ್ಟಿçÃಯ ಡೆಂಗ್ಯೂ ನಿಯಂತ್ರಣ ದಿನವನ್ನು ಆಚರಿಸಲಾಯಿತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಧನಿಕಾ, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಸರಸ್ವತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಕೇಂದ್ರದಿAದ ಬಸ್ ನಿಲ್ದಾಣದವರೆಗೆ ಫಲಕ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ರಸ್ತೆಯುದ್ದಕ್ಕೂ ಆಶಾ ಕಾರ್ಯಕರ್ತೆಯರು ಘೋಷಣ ಫಲಕಗಳನ್ನು ಹಿಡಿದು ಸೊಳ್ಳೆಗಳಿಂದ ರೋಗಗಳು ಉಚಿತ’, ‘ಉದಾಸೀನ ಮಾಡಿದರೆ ಸಾವು ಖಚಿತ’, ‘ಚಿಕನ್ ಗುನ್ಯದಿಂದ ಪಾರಾಗಿ’, ‘ಸ್ವಚ್ಛ ಪರಿಸರ ಆರೋಗ್ಯಕ್ಕೆ ಆಧಾರ’, ‘ಮೊಬೈಲ್ ಮಾತು ಬಿಟ್ಟು ಸೊಳ್ಳೆ ಪರದೆ ಕಟ್ಟಿ’, ‘ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ’ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರ ಗಮನ ಸೆಳೆದು ಜಾಗೃತಿ ಮೂಡಿಸಿದರು. ಸಮುದಾಯ ಆರೋಗ್ಯ ಅಧಿಕಾರಿಗಳಾದ ಅನಿತಾ, ಅಖಿಲ್ ರಾಜ್, ನಂದೀಶ್, ಧರಣೀಶ್ ಹಾಗೂ ಕೊಡ್ಲಿಪೇಟೆ - ಶನಿವಾರಸಂತೆಯ ೨೬ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.