ಕುಶಾಲನಗರ, ಮೇ ೧೮: ಕುಶಾಲನಗರ - ಮಡಿಕೇರಿ ರಸ್ತೆಯ ಶ್ರೀ ಆದಿಶಕ್ತಿ ಅಂತÀರ್ಘಟ್ಟೆ ಅಮ್ಮ ದೇವಸ್ಥಾನದÀ ಹತ್ತನೇ ವಾರ್ಷಿಕ ಪೂಜಾ ಕಾರ್ಯಕ್ರಮ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಸಾಮೂಹಿಕ ಪೂಜೆ ಸಲ್ಲಿಸಿದರು. ಅರ್ಚಕÀ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ೧೨.೩೦ಕ್ಕೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಾಡಿಸಲಾಗಿತ್ತು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷÀ ಗಿರೀಶ್, ಉಪಾಧ್ಯಕ್ಷ ಬಿ.ಎಸ್. ಗಣೇಶ್, ಕಾರ್ಯದರ್ಶಿ ಜಗದೀಶ್, ಗೌರವ ಅಧ್ಯಕ್ಷ ಗೋವಿಂದರಾಜ್ ಪ್ರಮುಖರಾದ ಮಲ್ಲೇಶ್ ಯೋಗೇಶ್, ಸುರೇಶ್ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳಾದ ಎಸ್.ಕೆ. ಶ್ರೀನಿವಾಸ್, ಚಂದ್ರಮೋಹನ್ ದೇವರಾಜ್ ಇದ್ದರು.