ಸುಂಟಿಕೊಪ್ಪ, ಮೇ ೧೬ : ಮಳೆಯ ಆಂತಕದ ನಡುವೆ ಸ್ಥಳೀಯ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ೨೬ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ದಿನದಂದು ಡಿ. ಶಿವಪ್ಪ ಅವರ ಮೊಮ್ಮಗ ವಿಶಾಲ್ ಶಿವಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಧ್ವಜಾರೋಹಣ ನೆರವೇರಿಸಿ, ಚೆಂಡನ್ನು ಒದ್ದೆಯುವ ಮೂಲಕ ೧೦ ದಿನಗಳ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ನೀಡಿದರು.
ಬ್ಲೂ ಬಾಯ್ಸ್ ಯುವಕ ಸಂಘದ ೩೯ನೇ ವರ್ಷ ಹಾಗೂ ಡಿ. ಶಿವಪ್ಪ ಸ್ಮಾರಕ ೨೬ನೇ ವರ್ಷದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮೊದಲ ದಿನದ ಪಂದ್ಯ ಆತಿಥೇಯ ಬ್ಲೂ ಬಾಯ್ಸ್ ಯೂತ್ ಕ್ಲಬ್ ಮತ್ತು ಪನ್ಯ ಎಫ್.ಸಿ. ಪನ್ಯ ತಂಡದ ಮೊದಲ ಉದ್ಘಾಟನಾ ಪಂದ್ಯವನ್ನು ಚೆಂಡು ಒದೆಯುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಪ್ರಸಾದ್ ಕುಟ್ಟಪ್ಪ, ಶಬೀರ್, ರಫೀಕ್ ಖಾನ್, ವಸಂತಿ, ಮಾಜಿ ಅಧ್ಯಕ್ಷ ಕೆ.ಇ. ಕರೀಂ ಹಾಗೂ ಬ್ಲೂ ಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ. ಪ್ರಸನ್ನ, ಬಿ.ಕೆ. ಪ್ರಶಾಂತ್, ಕುಶಾಲನಗರ ಉದ್ಯಮಿ ಬ್ಲೆಸ್ಜಿಕ್ರಾಸ್ತ, ಎಂ.ಎ. ಉಸ್ಮಾನ್ ಸೇರಿದಂತೆ ಮತ್ತಿತರರು ಇದ್ದರು.
ಮೊದಲ ಉದ್ಘಾಟನಾ ಪಂದ್ಯವು ಸುಂಟಿಕೊಪ್ಪ ಬ್ಲೂ ಬಾಯ್ಸ್ ಮತ್ತು ಪನ್ಯ ಎಫ್.ಸಿ ಪನ್ಯ ತಂಡದ ನಡುವೆ ನಡೆದು ಪಂದ್ಯದ ಮೊದಲಾರ್ಧದ ೧೨ ಮತ್ತು ೧೮ನೇ ನಿಮಿಷದಲ್ಲಿ ಬ್ಲೂಬಾಯ್ಸ್ ತಂಡದ ಮುನ್ನಡೆ ಆಟಗಾರ ಚಂದ್ರ ಅವರು ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಚೇತರಿಕೆಯ ಆಟವಾಡಿದ ಪನ್ಯ ಎಫ್.ಸಿ. ತಂಡದವರು ೨ ಗೋಲುಗಳಿಸುವ ಮೂಲಕ ಸಮಾನಂತರಗೊಳಿಸಿದರು. ಟೆöÊಬ್ರೇಕರ್‌ನಲ್ಲಿ ಪನ್ಯ ಎಫ್.ಸಿ ತಂಡವನ್ನು ೫-೩ ಗೋಲುಗಳಿಂದ ಸೋಲಿಸಿ ಆತಿಥೇಯ ಬ್ಲೂ ಬಾಯ್ಸ್ ತಂಡದವರು ಮುನ್ನಡೆ ಪಡೆದುಕೊಂಡರು.
ದ್ವಿತೀಯ ಪಂದ್ಯಾವಳಿಯು ಅಮಿಟಿ ಎಫ್.ಸಿ ಗದ್ದೆಹಳ್ಳ ಮತ್ತು ಬೆಟ್ಟಗೇರಿ ಎಫ್.ಸಿ ತಂಡಗಳ ನಡುವೆ ನಡೆದು ಎರಡು ತಂಡಗಳು ಸಮಬಲದ ಪ್ರದರ್ಶನ ನೀಡಿದವು. ಯಾವುದೇ ಗೋಲುಗಳಿಸಿದ ಹಿನ್ನೆಲೆಯಲ್ಲಿ ಟೈಬ್ರೇಕರ್‌ನಲ್ಲಿ ೪-೫ ಗೋಲುಗಳಿಂದ ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡವು ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು.