ಮಡಿಕೇರಿ, ಮೇ ೧೬ : ಶ್ರೀಮಂಗಲ ೬೬/೧೧ಕೆ.ವಿ ವಿದ್ಯುತ್ ಉಪಕೇಂದ್ರದಿAದ ಹೊರಹೊಮ್ಮುವ ಎಲ್ಲಾ ಫೀಡರ್‌ಗಳಲ್ಲಿ ತಾ. ೧೭ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರದ ನಿರ್ವಾಹಣೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾಯಿಮನೆ, ಮಂಚಳ್ಳಿ, ಪೂಜೆಕಲ್ಲು, ನಲ್ಲೂರು, ನಾತಂಗಾಲ, ತೈಲ, ಕುಟ್ಟ, ಸಿಂಕೋನ, ಕೆ.ಎಂ.ಕೊಡ್ಲಿ, ಶ್ರೀಮಂಗಲ, ಹರಿಹರ, ನಾಲ್ಕೇರಿ, ಚೀಪೆಕೊಲ್ಲಿ, ಗುಡ್ಡಮಾಡು, ಬಿರುಗ, ಕೆ ಬಾಡಗ, ಶೆಟ್ಟಿಗೇರಿ, ಕುರ್ಚಿ, ಬಿರುನಾಣಿ, ವೆಸ್ಟ್ ನೆಮ್ಮಲೆ, ತೆರಾಲು, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.