ಮಡಿಕೇರಿ, ಮೇ ೧೬: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ, ಸಿದ್ದಾಪುರ ಅಮೃತ ಯುವ ಮೊಗೇರ ಸೇವಾ ಸಮಾಜದ ಆಶ್ರಯದಲ್ಲಿ ೩ನೇ ವರ್ಷದ ರಾಜ್ಯಮಟ್ಟದ ಮೊಗೇರ ಬಾಂಧವರ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ತಾ. ೧೭ (ಇಂದು) ಹಾಗೂ ೧೮ ರಂದು ನಡೆಯಲಿದೆ.

ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯.೩೦ ಗಂಟೆಗೆ ನಡೆಯುವ ಕ್ರೀಡಾಕೂಟದ ಸಮಾರಂಭವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಉದ್ಘಾಟಿಸುವರು. ಅಮೃತ ಮೊಗೇರ ಸಮಾಜ ಕ್ರೀಡಾ ಅಧ್ಯಕ್ಷ ಪಿ.ಜಿ. ಗಣೇಶ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮೊಗೇರ ಸಮಾಜ ಗೌರವ ಅಧ್ಯಕ್ಷ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ. ರವಿ ಧ್ವಜಾರೋಹಣ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ. ಜನಾರ್ಧನ, ಸ್ಥಾಪಕ ಅಧ್ಯಕ್ಷ ಸದಾನಂದ ಮಾಸ್ಟರ್, ಜಿ.ಪಂ. ಮಾಜಿ ಸದಸ್ಯ ವಿಜು ಸುಬ್ರಮಣಿ, ರಾಜ್ಯ ಮೊಗೇರ ಸಂಘದ ಉಪಾಧ್ಯಕ್ಷ ಪಿ.ಕೆ. ಚಂದ್ರು, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಸಿ. ರಘು, ಸೋಮವಾರಪೇಟೆ ಅಧ್ಯಕ್ಷ ವಸಂತ, ಶಕ್ತಿ ದಿನಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್, ಮೊಗೇರ ಸಮಾಜದ ಜಿಲ್ಲಾ ಉಪಾಧ್ಯಕ್ಷ ಬಿ.ಎಂ. ದಾಮೋದರ, ಗೌರವಾಧ್ಯಕ್ಷ ಎಂ.ಜಿ. ಚಂದ್ರ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಪ್ರದರ್ಶನ ಪಂದ್ಯ

ಕ್ರೀಡಾಕೂಟದ ಅಂಗವಾಗಿ ಅತಿಥೇಯ ಮೊಗೇರ ಸಮಾಜ ತಂಡ ಹಾಗೂ ಕೊಡಗು ಪತ್ರಕರ್ತರ ಸಂಘದ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ.