ಮಡಿಕೇರಿ, ಮೇ ೧೬: ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ಮಾರ್ಗದರ್ಶನದಲ್ಲಿ ಮಡಿಕೇರಿಯಲ್ಲಿ ನೃತ್ಯ ಭಜನಾ ಕಮ್ಮಟ ಏರ್ಪಡಿಸಲಾಗಿದೆ.
ಮಹದೇವಪೇಟೆಯ ಪಂಪ್‌ಕೆರೆ ಬಳಿಯ ಕಾಶಿ ಮಠದಲ್ಲಿ ತಾ. ೧೭ (ಇಂದು) ಹಾಗೂ ೧೮ರವರೆಗೆ ಬೆಳಿಗ್ಗೆ ೯.೩೦ ರಿಂದ ಸಂಜೆ ೫.೩೦ರವರೆಗೆ ಕಮ್ಮಟ ನಡೆಯಲಿದೆ. ಆಯ್ದ ವಿವಿಧ ಭಜನಾ ಮಂಡಳಿಗಳ ಸದಸ್ಯರಿಗೆ ಕುಣಿತ ಭಜನಾ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ. ೯೪೮೦೭೩೧೦೨೦, ೯೪೪೯೭೩೧೨೩೮ ಅನ್ನು ಸಂಪರ್ಕಿಸಬಹುದಾಗಿದೆ.