ಮಡಿಕೇರಿ, ಮೇ ೧೬ : ತಾ. ೮ ರಿಂದ ೧೫ ರವರೆಗೆ ಹೈದರಾಬಾದಿನ ಜ್ವಾಲಾಗುಟ್ಟ ಅಕಾಡೆಮಿ ಆಫ್ ಎಕ್ಸಲೆನ್ಸ್ನಲ್ಲಿ ನಡೆದ ಯೋನೆಕ್ಸ್ ಸನ್ ರೈಸ್ ಆಲ್ ಇಂಡಿಯಾ ಸೀನಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯ ಮಹಿಳೆಯರ ಡಬಲ್ಸ್ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ.

೧೭ ವರ್ಷದ ದಿಯಾ ಭೀಮಯ್ಯ ಮೈಸೂರಿನ ವಿದ್ಯಾಶ್ರಮ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದ್ದು, ಸೀನಿಯರ್ಸ್ ಮಹಿಳೆಯರ ಡಬಲ್ಸ್ನಲ್ಲಿ ಹರಿಯಾಣದ ಬಾರುನಿ ಪರಸ್ವಾಲ್ ಅವರೊಂದಿಗೆ ಆಡಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ.

ಈಕೆ ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಭೀಮಯ್ಯ ಅವರು ಬಳಿ ತರಬೇತಿ ಪಡೆಯುತ್ತಿದ್ದಾಳೆ.