ಗೋಣಿಕೊಪ್ಪಲು, ಮೇ.೧೫ : ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩೯ ದಿನ ೬ ತಂಡಗಳು ಮುನ್ನಡೆ ಸಾಧಿಸಿದವು.

ಮೊದಲ ಪಂದ್ಯವು ಕರವಟ್ಟಿರ ಹಾಗೂ ಅಳಮೇಂಗಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಕರವಟ್ಟಿರ ತಂಡವು ೨ ವಿಕೆಟ್ ಕಳೆದುಕೊಂಡು ೭೧ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಅಳಮೇಂಗಡ ತಂಡ ೪ ವಿಕೆಟ್ ಕಳೆದುಕೊಂಡು ೬೪ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.

ಎರಡನೇ ಪಂದ್ಯವು ಪರುವಂಡ ಹಾಗೂ ಕಳಕಂಡ ತಂಡದ ನಡುವೆ ನಡೆಯಿತು. ಪರುವಂಡ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿ ೨ ವಿಕೆಟ್ ಕಳೆದುಕೊಂಡು ೭೩ರನ್ ಗಳಿಸಿ, ಎದುರಾಳಿ ತಂಡಕ್ಕೆ ಸವಾಲು ನೀಡಿತು. ಬ್ಯಾಟಿಂಗ್ ಆರಂಭಿಸಿದ ಕಳಕಂಡ ತಂಡವು ೮ ವಿಕೆಟ್ ಕಳೆದುಕೊಂಡು ೩೮ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.

ಮೂರನೇ ಪಂದ್ಯವು ಕುಪ್ಪಣಮಾಡ ತಂಡ ಹಾಗೂ ಆದೇಂಗಡ ತಂಡದ ನಡುವೆ ನಡೆಯಿತು. ಕುಪ್ಪಣಮಾಡ ತಂಡವು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು ೨ ವಿಕೆಟ್ ಕಳೆದುಕೊಂಡು ೮೬ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ನಿಗದಿತ ರನ್ ಅನ್ನು ಬೆನ್ನತ್ತಿದ ಆದೇಂಗಡ ತಂಡವು ೪ ವಿಕೆಟ್ ಕಳೆದುಕೊಂಡು ೫೦ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.

ನಾಲ್ಕನೇ ಪಂದ್ಯವು ಮಣವಟ್ಟಿರ ಹಾಗೂ ಮುಕ್ಕಾಟಿರ (ಹರಿಹರ) ತಂಡದ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಮಣವಟ್ಟಿರ ತಂಡವು ೫ ವಿಕೆಟ್ ಕಳೆದುಕೊಂಡು ೬೬ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಮುಕ್ಕಾಟಿರ ತಂಡವು ೫.೨ ಓವರ್ ನಲ್ಲಿ ೨ ವಿಕೆಟ್ ಕಳೆದುಕೊಂಡು ೬೭ ಗಳಿಸಿ ಗೆಲುವು ಸಾಧಿಸಿತು.

ಐದನೇ ಪಂದ್ಯವು ಕಾಣತಂಡ ತಂಡ ಹಾಗೂ ಬೊಟ್ಟಂಗಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಬೊಟ್ಟಂಗಡ ತಂಡವು ೨ ವಿಕೆಟ್ ಕಳೆದುಕೊಂಡು ೫೪ ರನ್ ಗಳಿಸಿ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ನೀಡಿತು. ಈ ರನ್ ಬೇಧಿಸುವ ಪ್ರಯತ್ನ ಮಾಡಿದ ಕಾಣತಂಡ ತಂಡವು ೫.೧ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೫೫ ರನ್ ಗಳನ್ನು ಮಾಡುವ ಗೆಲುವು ಸಾಧಿಸಿತು.

ಆರನೆಯ ಪಂದ್ಯವು ಓಡಿಯಂಡ ತಂಡ ಹಾಗೂ ಅಮ್ಮಾಟಂಡ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಅಮ್ಮಾಟಂಡ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೆ ೭೧ ರನ್ ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಆಹ್ವಾನ ನೀಡಿದರು. ಓಡಿಯಂಡ ತಂಡವು ಬ್ಯಾಟಿಂಗ್ ಆರಂಭಿಸಿ ೪ ವಿಕೆಟ್ ಕಳೆದುಕೊಂಡು ೫೪ ರನ್ ಗಳಿಸಿ ಸೋಲನ್ನು ಅನುಭವಿಸಿತು.