ಮಡಿಕೇರಿ, ಮೇ ೧೫: ಚೇರಂಬಾಣೆಯಲ್ಲಿ ಅಲ್ಲಿನ ಬೇಂಗ್‌ನಾಡ್ ಫೀನಿಕ್ಸ್ ಹಾಕಿ ಕ್ಲಬ್ ವತಿಯಿಂದ ಪೊನ್ನಚೆಟ್ಟಿರ ಮಿತ್ರ ಚಂಗಪ್ಪ ಸ್ಮರಣಾರ್ಥವಾಗಿ ಜರುಗಿದ ಜಿಲ್ಲಾಮಟ್ಟದ ಹಾಕಿ ಪ್ರಶಸ್ತಿಯನ್ನು ಬೇಗೂರಿನ ಈಶ್ವರ ಸ್ಪೋರ್ಟ್ಸ್ ಕ್ಲಬ್ ತಂಡ ತನ್ನದಾಗಿಸಿಕೊಂಡಿದೆ.

ಚೇರAಬಾಣೆ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಾಕಿ ಕೂರ್ಗ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಹಾಕಿ ಪಂದ್ಯಾವಳಿ ಆಯೋಜನೆಗೊಂಡಿದ್ದು ಜಿಲ್ಲೆಯ ವಿವಿಧೆಡೆಯ ೧೪ ಹಾಕಿ ಕ್ಲಬ್‌ಗಳು ಪಾಲ್ಗೊಂಡಿದ್ದವು. ಬೇಗೂರು ಈಶ್ವರ ಸ್ಪೋರ್ಟ್ಸ್ ಕ್ಲಬ್ ಹಾಗೂ ಅಮ್ಮತ್ತಿಯ ರಾಯಲ್ಸ್ ಕ್ಲಬ್ ತಂಡ ಫೈನಲ್ ತಲುಪಿತ್ತು. ಇಂದು ಈ ತಂಡಗಳ ನಡುವೆ ಅಂತಿಮ ಪಂದ್ಯಾಟಕ್ಕೆ ಮಳೆಯಿಂದ ಅಡಚಣೆಯಾದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್‌ನಂತೆ ಫಲಿತಾಂಶ ನಿರ್ಧರಿಸಲಾಯಿತು. ಇದರಲ್ಲಿ ಈಶ್ವರ ಕ್ಲಬ್ ತಂಡ ಜಯ ಸಾಧಿಸಿ ಪ್ರಶಸ್ತಿ ಹಾಗೂ ನಗದು ಬಹುಮಾನ ಗಳಿಸಿತು. ಅಮ್ಮತ್ತಿ ರಾಯಲ್ಸ್ ಕ್ಲಬ್ ತಂಡ ರನ್ನರ್ಸ್ ಪ್ರಶಸ್ತಿಗೆ ಪಾತ್ರವಾಯಿತು.

ಸಮಾರೋಪ ಸಮಾರಂಭ ಕ್ಲಬ್‌ನ ಅಧ್ಯಕ್ಷ ಬೋಡಂಡ ಅರುಣ್ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಅಂತಿಮ ಪಂದ್ಯಾಟಕ್ಕೆ ಹಾಕಿ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಅಮ್ಮಂಡಿರ ಚೇತನ್ ಕಾವೇರಪ್ಪ ಚಾಲನೆ ನೀಡಿದರು.

ಅತಿಥಿಗಳಾಗಿ ಮಡಿಕೇರಿ ಸಾಯಿ ಕೇಂದ್ರದ ತರಬೇತುದಾರರಾದ ಮಿನಿ ಉಣ್ಣಿರಾಜ್, ಬೆಂಗಳೂರು ಹಾಕಿ ಅಸೋಸಿಯೇಷನ್ ಉಪಾಧ್ಯಕ್ಷ ತುದಿಮಾಡ ಲೋಕೇಶ್ ಕುಟ್ಟಪ್ಪ, ಉದ್ಯಮಿ ಹೇಮಲತ ಟಿ.ಎ., ಬೆಳೆಗಾರರಾದ ಪೊನ್ನಚೆಟ್ಟಿರ ಅರುಣ್ ಸೋಮಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಚೇರಂಬಾಣೆ ಅಧ್ಯಕ್ಷ ಬಾಚರಣಿಯಂಡ ಸುಮನ್, ಪಟ್ಟಮಾಡ ಕುಶಾಲಪ್ಪ, ಅಧ್ಯಕ್ಷ, ಬೇಂಗ್‌ನಾಡ್ ಸ್ಪೋರ್ಟ್ಸ್ ಎಂಡ್ ರಿಕ್ರಿಯೇಷನ್ ಕ್ಲಬ್, ಪಟ್ಟಮಾಡ ಡಿ. ಪೊನ್ನಪ್ಪ, ಮಾಜಿ ನಗರಸಭಾ ಅಧ್ಯಕ್ಷ, ಮಂದಪAಡ ಗೊಂಬೆ ಮುತ್ತಣ್ಣ, ಪೊನ್ನಚೆಟ್ಟಿರ ರಮೇಶ್, ಜಂಟಿ ಕಾರ್ಯದರ್ಶಿ, ಕೊಡವ ಸಮಾಜ, ಬೆಂಗಳೂರು, ಪಟ್ಟಮಾಡ ಕಮಲಾಕ್ಷಿ, ನಿವೃತ್ತ ಮುಖ್ಯ ಶಿಕ್ಷಕಿ, ಮಂದಪAಡ ಜೀವನ್ ಸುಬ್ಬಯ್ಯ ಪಾಲ್ಗೊಂಡಿದ್ದರು.

ಪಟ್ಟಮಾಡ ವರ್ಣಿಕ ಪೊನ್ನಮ್ಮ ಪ್ರಾರ್ಥಿಸಿ, ಕುಲ್ಲೇಟಿರ ಅರುಣ ಬೇಬ ಸ್ವಾಗತಿಸಿ, ಚೋಕಿರ ಅನಿತ ದೇವಯ್ಯ ನಿರೂಪಿಸಿ, ವಂದಿಸಿದರು. ಅಜ್ಜೇಟಿರ ವಿಕ್ರಂ, ಕುಲ್ಲೇಟಿರ ಅರುಣ ಬೇಬ ವೀಕ್ಷಕ ವಿವರಣೆ ನೀಡಿದರು

ರಾಜ್ಯ ಮತ್ತು ರಾಷ್ಟçಮಟ್ಟದ ಹಾಕಿ ಆಟಗಾರ್ತಿಯರಾದ ಚೇರಂಬಾಣೆಯ ಪಟ್ಟಮಾಡ ಶ್ರೀಶ ಬೊಳ್ಳಮ್ಮ, ಪೊನ್ನಚೆಟ್ಟಿರ ಆಂಚಲ್ ದೇಚಮ್ಮ ಮತ್ತು ನಾಳಿಯಮ್ಮಂಡ ಯಜ್ಞ ಸನ್ಮಾನಿತರಾದರು.

ಮ್ಯಾನ್ ಆಫ್ ದ ಮ್ಯಾಚ್ ನೆಲ್ಲಮಕ್ಕಡ ಪ್ರತೀಕ್ ಪೂವಣ್ಣ, ರಾಯಲ್ಸ್ ಕ್ಲಬ್ ಅಮ್ಮತ್ತಿ, ಬೆಸ್ಟ್ ಗೋಲ್ ಕೀಪರ್ ಮಾಚಿಮಾಡ ಶ್ರೇಯಸ್, ಈಶ್ವರ ಸ್ಪೋರ್ಟ್ಸ್ ಕ್ಲಬ್, ಬೇಗೂರು, ಮ್ಯಾನ್ ಆಫ್ ದ ಸೀರಿಸ್ ಲಿಖಿತ್ ಶೆಟ್ಟಿ, ಈಶ್ವರ ಸ್ಪೋರ್ಟ್ಸ್ ಕ್ಲಬ್, ಬೇಗೂರು, ಶಿಸ್ತಿನ ತಂಡ ಪನ್ನಂಗಾಲ ಪ್ಯಾಂಥರ್ಸ್ ಸ್ಕಿಲ್‌ಫುಲ್ ಆಟಗಾರ ಅಂಕುರ್ ಖಔಖ, ಬೇಂಗ್‌ನಾಡ್ ಫೀನಿಕ್ಸ್ ಕ್ಲಬ್ ಪ್ರಶಸ್ತಿ ಪಡೆದುಕೊಂಡರು.