ಮಡಿಕೇರಿ, ಮೇ ೧೫: ಗೌಡ ಫುಟ್ಬಾಲ್ ಅಕಾಡೆಮಿ ಇವರ ವತಿಯಿಂದ ಎಂಟನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ ೨೦೨೫ರ ಈ ದಿನದ ಮೊದಲನೇ ಪಂದ್ಯ ಇಟ್ಟಣಿಕೆ ಹಾಗೂ ಪರ್ಲಕೋಟಿ ತಂಡಗಳ ನಡುವೆ ನಡೆದು ಪಂದ್ಯದಲ್ಲಿ ಪರ್ಲಕೋಟಿ ತಂಡ ೩ ಗೋಲ್ ಗಳಿಂದ ಜಯಗಳಿಸಿತು.

ದೇವಂಗೋಡಿ ಹಾಗೂ ಬಿಳಿಯಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಬಿಳಿಯಂಡ್ರ ತಂಡ ೬ ಗೋಲ್ ಗಳಿಂದ ಜಯಗಳಿಸಿತು. ಕೈಕೇರಿ ಮುಕ್ಕಾಟಿ ಹಾಗೂ ಕೊಂಪುಳಿರ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಪುಳಿರ ತಂಡ ೩ ಗೋಲ್ ಗಳಿಂದ ಜಯಗಳಿಸಿತು. ಗುಡ್ಡಾಂಡ್ರ ಹಾಗೂ ಚೆಟ್ಟಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಟ್ಟಿಮಾಡ ತಂಡ ೨ ಗೋಲ್ ಗಳಿಂದ ಜಯಗಳಿಸಿತು. ನೆಯ್ಯಣಿ ಹಾಗೂ ತುಂತಜಿರ ನಡುವಿನ ಪಂದ್ಯದಲ್ಲಿ ತುಂತಜಿರ ತಂಡ ೨ ಗೋಲು ಗಳಿಸಿದರೆ, ನೇಯ್ಯಣಿ ತಂಡ ೩ ಗೋಲ್ ಗಳಿಸಿ ಜಯಗಳಿಸಿತು. ಬಡುವಂಡ್ರ ಹಾಗೂ ಬಿಳಿಯಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ೧-೧ ಗೋಲು ಗಳಿಸಿಕೊಂಡು ಸಮಬಲ ಸಾಧಿಸಿದವು. ಟೈಬ್ರೇಕರ್‌ನಲ್ಲಿ ಬಿಳಿಯಂಡ್ರ ತಂಡ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಪೊಕ್ಕುಳಂಡ್ರ ಹಾಗೂ ಎಡಿಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಪೊಕ್ಕುಳಂಡ್ರ ತಂಡ ೩ ಗೋಲ್ ಗಳಿಸಿಕೊಂಡು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಬೊಳ್ಳೂರು ಹಾಗೂ ಪರ್ಲಕೋಟಿ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲ ೧ ಗೋಲ್ ಗಳಿಸಿಕೊಂಡು ಸಮಬಲ ಸಾಧಿಸಿತು ಟೈಬ್ರೇಕರ್ ನಲ್ಲಿ ಬೊಳ್ಳೂರು ತಂಡ ಜಯಗಳಿಸಿತು. ಬೈಲೆ ಹಾಗೂ ಸಿರಕಜೆ ತಂಡಗಳ ನಡುವಿನ ಪಂದ್ಯದಲ್ಲಿ ಬೈಲೆ ತಂಡ ೭ ಗೋಲ್ ಗಳಿಸಿಕೊಂಡು ಜಯಗಳಿಸಿತು.

ಕಟ್ಟೆಮನೆ ಹಾಗೂ ಕಡ್ಲೇರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲ ೧ ಗೋಲ್ ಗಳಿಸಿ ಸಮಬಲ ಸಾಧಿಸಿತು. ಟೈ ಬ್ರೇಕರ್‌ನಲ್ಲಿ ಕಟ್ಟೆಮನೆ ತಂಡ ಜಯಗಳಿಸಿತು. ಕುಯ್ಯಮುಡಿ ಹಾಗೂ ಕೊಲ್ಯದ ತಂಡಗಳ ನಡುವಿನ ಪಂದ್ಯದಲ್ಲಿ ಕುಯ್ಯಮುಡಿ ತಂಡ ೫ ಗೋಲ್ ಗಳಿಂದ ಜಯಗಳಿಸಿತು. ಬಿಳಿಯಂಡ್ರ ಮತ್ತು ಕೊಂಪುಳಿರ ತಂಡ ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದವು.