*ಗೋಣಿಕೊಪ್ಪ, ಮೇ ೧೧: ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ನಮ್ಮೆಯಲ್ಲಿ ಮಕ್ಕಳಿಗೆ ಆಯೋಜಿಸಿದ್ದ ಮಾತಿನ ಸ್ಪರ್ಧೆಯಲ್ಲಿ ಮಕ್ಕಳ ಕೊಡವ ಭಾಷೆಯ ಅಭಿಮಾನ ವ್ಯಕ್ತವಾಯಿತು. ೫ ರಿಂದ ೧೦ ವಯೋಮಿತಿಯವರಿಗೆ ಕೊಡವ ಮಕ್ಕಳು ನಂಗ ಕೊಡವ ವಿಷಯದಲ್ಲಿ ನಡೆದ ಸ್ಪರ್ಧೆಯಲ್ಲಿ ಅಪ್ಪಂಡೇರAಡ ಚಿರಾಯು ಕುಶಾಲಪ್ಪ ಹಾಗೂ ಪುಡಿಯಂಡ ಶಿವಾಸ್ಯ ಮೊಣ್ಣಪ್ಪ ಪ್ರಥಮ ಸ್ಥಾನ ಪಡೆದುಕೊಂಡರು. ಮಾದಂಡ ದಿಯಾರ ಗಂಗಾ ದ್ವಿತೀಯ, ಮಾದಂಡ ದೀತ್ಯಾ ಕಾವೇರಿ ಹಾಗೂ ಮುಕ್ಕಾಟೀರ ತಾನ್ಯ ತಂಗಮ್ಮ ತೃತೀಯ ಸ್ಥಾನ, ನೆರಪಂಡ ಚಿರಾ ಮುತ್ತಕ್ಕ ಹಾಗೂ ಪಟ್ಟಮಡ ಕೃತಿ ಚಿಣ್ಣಪ್ಪ ನಾಲ್ಕನೇ ಸ್ಥಾನ ಪಡೆದುಕೊಂಡರು. ಕೊಡವ ಪದ್ದತಿ, ಪರಂಪರೆ, ಸಂಸ್ಕೃತಿ ಪಿಂಞ ಬದ್‌ಕ್‌ಲ್ ಆನ ಬದ್‌ಲ್ ಎಂಬ ವಿಷಯದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ೧೧ ರಿಂದ ೧೬ ವಯೋಮಿತಿಯ ಮಕ್ಕಳಲ್ಲಿ ಚೊಟ್ಟೆಮಡ ವಿಯಾ ಸೋಮಣ್ಣ ಪ್ರಥಮ, ಚೆಟ್ಟಂಗಡ ಲೇಖನ ಉತ್ತಪ್ಪ ದ್ವಿತೀಯ, ಮಚ್ಚಮಾಡ ಲಿರಿಷಾ ತಂಗಮ್ಮ ಹಾಗೂ ಮುರುವಂಡ ನಿಹಾರಿಕ ಅಣ್ಣಯ್ಯ ತೃತೀಯ ಸ್ಥಾನ ಪಡೆದರು. ಉದ್ಯಮಿ ಚೊಟ್ಟೆಯಂಡಮಡ ಬಿಪಿನ್ ಬಹುಮಾನ ನೀಡಿದರು. ತೀರ್ಪುಗಾರರಾಗಿ ಚಂಗುಲAಡ ಸೂರಜ್, ಚಿಮ್ಮಚ್ಚೀರ ಪವಿತ ರಜನ್, ಕಬ್ಬಚ್ಚೀರ ರಶ್ಮಿ ಕಾರ್ಯಪ್ಪ ಕಾರ್ಯನಿರ್ವಹಿಸಿದರು.