ಮಡಿಕೇರಿ, ಮೇ ೧೧: ಕೊಡಗು ಜಿಲ್ಲಾ ಅಹಿಂದ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷÀ ಪ್ರಭುಲಿಂಗ ದೊಡ್ಡನಿ ಅವರ ಆದೇಶದ ಮೇರೆಗೆ ಅಹಿಂದ ಜಿಲ್ಲಾಧ್ಯಕ್ಷರಾಗಿ ರವಿಗೌಡ. ಗೌರವ ಅಧ್ಯಕ್ಷರಾಗಿ ಟಿ.ಎಂ. ಅಯ್ಯಪ್ಪ. ಕಾರ್ಯಧ್ಯಕ್ಷರಾಗಿ ವಿನೋದ್ ಗಣೇಶ್ ದೊಡ್ಮನೆ ಹಾಗೂ ಸುಧಯ್ ನಾಣಯ್ಯ. ಉಪಾಧ್ಯಕ್ಷರಾಗಿ ಹರೀಶ್ ಹೆಚ್.ಜಿ. ಹಾಗೂ ಸೋಮನಾಥ್. ಐ. ಪ್ರಧಾನ ಕಾರ್ಯದರ್ಶಿ ಸುಲೇಮಾನ್. ಎಂ.ವೈ. ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಹೆಚ್.ಎಲ್. ಸಲಹೆಗಾರರಾಗಿ ಜಹೀರ್ ಅಹ್ಮದ್ ಎಂ.ಬಿ. ಅವರುಗಳನ್ನು ಆಯ್ಕೆ ಮಾಡಲಾಗಿದೆ.