ಚೆಯ್ಯಂಡಾಣೆ, ಮೇ ೧೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ ಹಾಗೂ ರಾಷ್ಟಿçÃಯ ಆಯುಷ್ ಅಭಿಯಾನ ಕಾರ್ಯಕ್ರಮ ಯೋಜನೆ ಚೆಯ್ಯಂಡಾಣೆಯಲ್ಲಿ ಜರುಗಿತು.
ಚೆಯ್ಯಂಡಾಣೆಯ ಲಕ್ಷಿö್ಮ ಮಹಿಳಾ ಸಮಾಜ ಕಟ್ಟಡದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಬಿ.ಸಿ. ಟ್ರಸ್ಟ್ ಒಕ್ಕೂಟದ ಅಧ್ಯಕ್ಷೆ ಮಾಚಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಉದ್ಘಾಟಿಸಿದರು. ಈ ಸಂದರ್ಭ ಮಡಿಕೇರಿ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಸರಸ್ವತಿ ಮಾತನಾಡಿ, ಮನುಷ್ಯರಿಗೆ ಆಹಾರ ಮುಖ್ಯ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು, ಸಣ್ಣ ಪುಟ್ಟ ಕಾಯಿಲೆಗಳಿಗೆ ರಸ್ತೆಯ ಬದಿಯಲ್ಲಿರುವ ಔಷಧಿ ಸಸ್ಯಗಳನ್ನು ಗುರುತಿಸಿ ಅದರಿಂದ ರೋಗಗಳನ್ನು ನೀವಾರಿಸಿ ಕೊಳ್ಳಬಹುದು ಎಂದು ಗುಣಪಡಿಸಿಕೊಳ್ಳಬಹುದು ಎಂದರು. ಆಯುಷ್ ಇಲಾಖೆಯ ಕನ್ನಿಕಾ ಯೊಗಾಸನದ ಬಗ್ಗೆ ಮಾಹಿತಿ ನೀಡಿ ನೆರೆದಿದ್ದವರಿಗೆÀ ತರಬೇತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಭಾಗಮಂಡಲ ವಲಯದ ಮೇಲ್ವಿಚಾರಕÀ ಸುನಿಲ್ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಾಲಿನಿ, ಸೇವಾ ಪ್ರತಿನಿಧಿ ಪ್ರಭಾ, ಒಕ್ಕೂಟದ ಕೃಷಿ ಸಖಿ ಅಂಬಿಕಾ, ಮೀನಾಕ್ಷಿ, ಆಯುಷ್ ಇಲಾಖೆಯ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಲಿನಿ ನಿರೂಪಿಸಿ, ಪ್ರಭಾ ಸ್ವಾಗತಿಸಿ, ವಂದಿಸಿದರು.