ನವದೆಹಲಿ, ಮೇ ೯: ಭಾರತ-ಪಾಕ್ ನಡುವೆ ಪ್ರಸ್ತುತ ನಡೆಯುತ್ತಿರುವ ಯುದ್ಧ ತೀವ್ರತೆ ಪಡೆದಿದ್ದು, ತಾ.೮ರ ಮಧ್ಯರಾತ್ರಿ ಹಾಗೂ ತಾ.೯ರ ಮುಂಜಾನೆ ಪಾಕಿಸ್ತಾನಿ ಸೇನೆ ಭಾರತ ಮೇಲೆ ನಡೆಸಿದ ಡ್ರೋನ್ ದಾಳಿಯನ್ನು ಭಾರತೀಯ ರಕ್ಷಣಾ ಪಡೆ ನಿಯಂತ್ರಿಸಿದೆ. ಲೈನ್ ಆಫ್ ಕಂಟ್ರೋಲ್‌ನಲ್ಲಿ ಪಾಕಿಸ್ತಾನ ನಿರಂತರವಾಗಿ ನಡೆಸುತ್ತಿರುವ ಶೆಲ್ ದಾಳಿಗೆ ಭಾರತೀಯ ಸೇನೆಯ ಹಲವು ಯೋಧರು ಹುತಾತ್ಮರಾಗಿದ್ದು, ಕೆಲವರಿಗೆ ಗಾಯಗಳಾಗಿವೆ. ಪಾಕಿಸ್ತಾನಿ ಯೋಧರು ಕೂಡ ಭಾರತದ ಪ್ರತಿದಾಳಿಗೆ ಹತ್ಯೆಯಾಗಿದ್ದಾರೆ.

ಈ ಬಗ್ಗೆ ನವದೆಹಲಿಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಹಿತಿ ನೀಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕರ್ನಲ್ ಸೋಫಿಯಾ ಖುರೇಷಿ ಅವರುಗಳು, ಭಾರತದ ಲೆಹ್ ಇಂದ ಸರ್ ಕ್ರೀಕ್ ವರೆಗೆ ಭಾರತೀಯ ರಕ್ಷಣಾ ಪಡೆಯ ಕೇಂದ್ರಗಳನ್ನು ಗರಿಯಾಗಿಸಿ ಪಾಕಿಸ್ತಾನಿ ಸೇನೆಯು, ಒಟ್ಟು ೩೬ ಕಡೆಗಳಲ್ಲಿ ಡ್ರೋನ್‌ಗಳ ಮೂಲಕ ದಾಳಿ ನಡೆಸಲು ಯತ್ನಿಸಿತು. ಅಂದಾಜು ೩೦೦ ರಿಂದ ೪೦೦ ಡ್ರೋನ್‌ಗಳನ್ನು ಪಾಕಿಸ್ತಾನಿ ಸೇನೆ ಭಾರತದೆಡೆಗೆ ಕಳಿಸಿದ್ದು, ಇದರಲ್ಲಿ ಹಲವಾರು ಡ್ರೋನ್‌ಗಳನ್ನು ಭಾರತೀಯ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸಗೊಳಿಸಿತು. ಭಾರತೀಯ ರಕ್ಷಣಾ ಪಡೆಯ ಏರ್ ಡಿಫೆನ್ಸ್ ಸಿಸ್ಟಮ್‌ನ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆಯುವುದೇ ಈ ಪಾಕ್ ದಾಳಿಯ ಉದ್ದೇಶವಾಗಿತ್ತು. ಈ ಧ್ವಂಸಗೊAಡ ಡ್ರೋನ್‌ಗಳ ಪರಿಶೀಲನೆ ನಡೆಸಲಾಗಿದ್ದು ಟರ್ಕಿ ದೇಶದ ಅಸೀಸ್‌ಗಾರ್ಡ್ ಡ್ರೋನ್‌ಗಳೆಂಬುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ತಡರಾತ್ರಿ ಪಾಕಿಸ್ತಾನದ ಶಸ್ತçಸಜ್ಜಿತ ಯು.ಎ.ವಿ - ಮಾನವ ರಹಿತ ವಿಮಾನ, ಬಟಿಂಡ ಮಿಲಿಟರಿ ಕೇಂದ್ರದ ಮೇಲೆ ದಾಳಿ ಯತ್ನ ನಡೆಸಿದ್ದು, ಈ ಡ್ರೋನ್ ಅನ್ನು ಭಾರತ ಧ್ವಂಸಗೊಳಿಸಿದೆ ಎಂದು ಅವರುಗಳು ಮಾಹಿತಿ ನೀಡಿದರು.

ಲೈನ್ ಆಫ್ ಕಂಟ್ರೋಲ್‌ನಲ್ಲಿ ಫೈರಿಂಗ್

ಹೆವಿ ಕ್ಯಾಲಿಬರ್ ಆರ್ಟಿಲರಿ ಗನ್‌ಗಳನ್ನು ಹಾಗೂ ಡ್ರೋನ್‌ಗಳನ್ನು ಬಳಸಿ ಪಾಕಿಸ್ತಾನವು ಲೈನ್ ಆಫ್ ಕಂಟ್ರೋಲ್‌ನ ತಂದಾರ್, ಉರಿ, ಪೂಂಚ್, ಮೇಂದರ್, ರಜೋರಿ, ಅಕ್ನೂರ್ ಹಾಗೂ ಉದಮ್‌ಪೂರ್‌ಗಳಲ್ಲಿ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ಕೆಲ ಯೋಧರು ಹುತಾತ್ಮರಾಗಿದ್ದು ಕೆಲವರಿಗೆ ಗಾಯಗಳಾಗಿವೆ. ಪಾಕಿಸ್ತಾನಿ ಸೇನಾ ಯೋಧರೂ ಭಾರತೀಯ ಪ್ರತೀಕಾರ ದಾಳಿಯಲ್ಲಿ ಹತರಾಗಿದ್ದಾರೆ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಭಾರತದಿಂದ ಪ್ರತಿ ದಾಳಿ - ಪಾಕಿ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸ

ಪಾಕಿಸ್ತಾನಿ ಸೇನೆಯ ಅಪ್ರಚೋದಿತ ದಾಳಿಗೆ ಭಾರತೀಯ ರಕ್ಷಣಾ ಪಡೆಯು ಪ್ರತಿಕಾರ ನೀಡಿದ್ದು, ಪಾಕಿಸ್ತಾನದ ೪ ಏರ್ ಡಿಫೆನ್ಸ್ ಕೇಂದ್ರಗಳ ಮೇಲೆ ಭಾರತವು ಶಸ್ತçಸಜ್ಜಿತ ಡ್ರೋನ್ ದಾಳಿ ಕೈಗೊಂಡಿತು. ಈ ಪೈಕಿ ಒಂದು ಏರ್ ಡಿಫೆನ್ಸ್ ರಡಾರ್ ಅನ್ನು ಧ್ವಂಸಗೊಳಿಸಲು ಭಾರತೀಯ ಡ್ರೋನ್ ಸಫಲವಾಗಿದೆ ಎಂದು ತಿಳಿಸಿದರು.

ಸಿವಿಲ್ ಏರ್‌ಲೈನ್ಸ್ಅನ್ನು ರಕ್ಷಾಕವಚವಾಗಿಸಿದ ಪಾಕ್

ತಾ.೭ ರ ರಾತ್ರಿ ಪಾಕ್, ಭಾರತದ ಮೇಲೆ ನಡೆಸಿದ ಡ್ರೋನ್ ದಾಳಿ ಸಂದರ್ಭ ಪಾಕಿಸ್ತಾನಿ ಏರ್‌ಸ್ಪೇಸ್ ಅನ್ನು ಮುಚ್ಚದೆ ಕಾರ್ಯಾಚರಣೆಯನ್ನು ನಡೆಸಿದೆ. ಈ ಸಂದರ್ಭ ಅಂತರರಾಷ್ಟಿçÃಯ ವಿಮಾನವು ಪಾಕ್ ಏರ್‌ಸ್ಪೇಸ್‌ನಲ್ಲಿ ಸಂಚರಿಸಿದೆ. ದಮಮ್‌ನಿಂದ ಲಾಹೋರ್ ನಡುವೆ ಈ ಸಿವಿಲ್ ಏರ್‌ಲೈನ್ಸ್ ಏರ್‌ಬಸ್ ವಿಮಾನವು ಪಾಕ್ ಡ್ರೋನ್ ದಾಳಿ ಸಂದರ್ಭ ಹಾರಾಡಿದೆ. ಸಿವಿಲ್ ಏರ್‌ಲೈನ್ಸ್ ವಿಮಾನವನ್ನು ಪಾಕಿಸ್ತಾನ ರಕ್ಷಾಕವಚವಾಗಿ ಬಳಸಲು ನೋಡುತ್ತಿದೆ. ಭಾರತದ ಏರ್‌ಸ್ಪೇಸ್ ಈ ಸಂದರ್ಭ ಬಂದ್ ಮಾಡಲಾಗಿತ್ತು ಎಂಬುದಾಗಿ ಮಾಹಿತಿ ನೀಡಲಾಯಿತು. (ಮೊದಲ ಪುಟದಿಂದ)

ಶಾಲೆ, ಧಾರ್ಮಿಕ ಕೇಂದ್ರಗಳ ಮೇಲೆ ಪಾಕ್ ದಾಳಿ- ವಿಕ್ರಂ ಮಿಸ್ರಿ

ಪಾಕಿಸ್ತಾನವು ತಾ.೭ ರಂದು ನಡೆಸಿದ ಶೆಲ್ ದಾಳಿಯಲ್ಲಿ ಪಾಕಿ ಸೇನೆಯು ಭಾರತದಲ್ಲಿನ ಪೂಂಚ್ ಜಿಲ್ಲೆಯ ಶಾಲೆಯ ಮೇಲೆ ನಡೆಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಾಣ ಕಳೆದುಕೊಂಡರು. ಇದಲ್ಲದೆ ಧಾರ್ಮಿಕ ಕೇಂದ್ರವಾಗಿರುವ ಚರ್ಚ್ ಮೇಲೆಯೂ ಹಾಗೂ ಗುರುದ್ವಾರದ ಮೇಲೆ ದಾಳಿ ಮಾಡಿದ ಪರಿಣಾಮ ಹಲವಾರು ಮಂದಿಗೆ ಗಾಯಗಳಾಗಿವೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಹಿತಿ ನೀಡಿದರು. ಪಾಕಿಸ್ತಾನವು ಈ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದು, ಗುರುದ್ವಾರವನ್ನು ಭಾರತವೇ ಧ್ವಂಸ ಮಾಡಿದೆ ಎಂಬುದಾಗಿ ಸುಳ್ಳು ಸುದ್ದಿ ಹರಡುವ ಹುನ್ನಾರ ನಡೆಸುತ್ತಿದೆ ಎಂದರು.

ತಾ.೬ರಂದು ಭಾರತವು ನಡೆಸಿದ ದಾಳಿಗೆ ಬಾವಲ್‌ಪುರ್‌ನ ಜೈಶ್-ಇ-ಮಹಮ್ಮದ್ ಭಯೋತ್ಪಾದನಾ ಕೇಂದ್ರವು ಧ್ವಂಸಗೊAಡಿದೆ. ವಾಲ್ ಸ್ಟಿçÃಟ್ ಜರ್ನಲ್‌ನ ಪತ್ರಕರ್ತ ಡ್ಯಾನಿಯಲ್ ಪರ್ಲ್ರನ್ನು ೨೦೦೨ರಲ್ಲಿ ಶಿರಚ್ಛೇದ ಮಾಡಿ ವೀಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಪತ್ರಕರ್ತನ ಅಪಹರಣ ಹಾಗೂ ಹತ್ಯೆಗೆ ಜೈಶ್-ಇ-ಮಹಮ್ಮದ್ ಕಾರಣವಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿದರು.