ಭಾಗಮಂಡಲ, ಮೇ ೧೦: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯ ಪದಕಲ್ಲು ಗ್ರಾಮದಲ್ಲಿ ಯುವಕನೋರ್ವ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮಲ್ಲೇಶ್ (೨೦) ಮೃತ ದುರ್ದೈವಿ.

ಪದಕಲ್ಲು ಗ್ರಾಮದ ಸೋಮಯ್ಯ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೊತೆಗೆ ಸ್ಥಳೀಯ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಡ್ರಂ ಸೆಟ್ ನುಡಿಸುವ ಕೆಲಸ ಮಾಡುತ್ತಿದ್ದ ಮಲ್ಲೇಶ್ ನಿನ್ನೆ ಎಂದಿನAತೆ ಕಾರುಗುಂದ ಗೌಡ ಸಮಾಜಕ್ಕೆ ಮದುವೆ ಕಾರ್ಯಕ್ರಮಕ್ಕೆ ಹೋಗಿ ನಾಲ್ಕು ಗಂಟೆಗೆ ಮನೆಗೆ ವಾಪಸ್ ಆಗಿ ಮನೆಯಿಂದ ಹೊರ ಹೋಗಿ ತನ್ನ ತಂಗಿಗೆ ಕರೆ ಮಾಡಿ ನಾನು ಗೋಣಿಕೊಪ್ಪ ಮೂಲದ ಹುಡುಗಿಯನ್ನು ಪ್ರೀತಿಸುತ್ತಿದ್ದು, ಅವಳು ನನಗೆ ಮೋಸ ಮಾಡಿದ್ದಾಳೆ.

ಅದಕ್ಕೆ ನಾನು ವಿಷ ಕುಡಿದು ಸಾಯುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ಕೂಡಲೆ ತಂಗಿ ಗುಣವತಿ ತನ್ನ ತಾಯಿ ಯಮುನಾ ಅವರಿಗೆ ಕರೆ ಮಾಡಿ ವಿಷಯವನ್ನು ತಿಳಿಸುತ್ತಾರೆ. ಕೂಡಲೇ ತಾಯಿ ಯಮುನಾ ಮತ್ತು ತಂಗಿ ಅನುಸೂಯ ಮಲ್ಲೇಶನನ್ನು ಹುಡುಕಲು ಆರಂಭಿಸುತ್ತಾರೆ. ಆ ಸಂದರ್ಭ ಪಕ್ಕದಲ್ಲಿ ಗುಂಡಿನ ಶಬ್ದ ಕೇಳಿಸುತ್ತದೆ. ಗುಂಡಿನ ಶಬ್ದ ಕೇಳಿದ ಸ್ಥಳಕ್ಕೆ ಹೋಗಿ ನೋಡಿದಾಗ ಮಲ್ಲೇಶ್ ಕೋವಿಯೊಂದಿಗೆ ಮೃತಪಟ್ಟಿರುವುದು ಕಂಡುಬAದಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಭಾಗಮಂಡಲ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಯುವಕ ಆತ್ಮಹತ್ಯೆಗೆ ಬಳಸಿಕೊಂಡ ಕೋವಿ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.