ಗೋಣಿಕೊಪ್ಪಲು, ಮೇ ೯: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩೩ನೇ ದಿನ ೭ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಅಚ್ಚಪಂಡ ಹಾಗೂ ತಾತಪಂಡ ತಂಡದ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಅಚ್ಚಪಂಡ ತಂಡವು ೧ ವಿಕೆಟ್ ಕಳೆದುಕೊಂಡು ೮೭ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ನಿಗದಿತ ರನ್ ಅನ್ನು ಭೇದಿಸುವ ಪ್ರಯತ್ನ ಮಾಡಿದ ತಾತಪಂಡ ತಂಡ ೬ ವಿಕೆಟ್ ಕಳೆದುಕೊಂಡು ೩೨ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.
ಎರಡನೇ ಪಂದ್ಯವು ಕರಿನೆರವಂಡ ಹಾಗೂ ಕರ್ತಮಾಡ ತಂಡದ ನಡುವೆ ನಡೆಯಿತು.
ಕರ್ತಮಾಡ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿ ೫ ವಿಕೆಟ್ ಕಳೆದುಕೊಂಡು ೩೦ ರನ್ ಗಳಿಸಿ, ಎದುರಾಳಿ ತಂಡಕ್ಕೆ ಸವಾಲು ನೀಡಿತು.
ಉತ್ತಮ ಬ್ಯಾಟಿಂಗ್ ಆರಂಭಿಸಿದ ಕರಿನೆರವಂಡ ತಂಡವು ಕೇವಲ ೩.೧ ಓವರ್ ನಲ್ಲಿ ೧ ವಿಕೆಟ್ ಕಳೆದುಕೊಂಡು ೩೧ ರನ್ ಗಳಿಸುವ ಮೂಲಕ ಕರ್ತಮಾಡ ತಂಡವನ್ನು ಸೋಲಿಸಿ, ಗೆಲುವಿನ ನಗೆ ಬೀರಿತು.
ಮೂರನೇ ಪಂದ್ಯವು ಕುಟ್ಟಂಡ (ಮಾದಾಪುರ) ತಂಡ ಹಾಗೂ ಮಲ್ಲೇಂಗಡ ತಂಡದ ನಡುವೆ ನಡೆಯಿತು.
ಮಲ್ಲೇಂಗಡ ತಂಡವು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು ೫ ವಿಕೆಟ್ ಕಳೆದುಕೊಂಡು ೮೭ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು.
ನಿಗದಿತ ರನ್ ಅನ್ನು ಬೆನ್ನತ್ತಿದ ಕುಟ್ಟಂಡ ತಂಡವು ೪ ವಿಕೆಟ್ ಕಳೆದುಕೊಂಡು ೭೨ ರನ್ ಸಂಪಾದಿಸಿ ಸೋಲನ್ನು ಅನುಭವಿಸಿತು.
ನಾಲ್ಕನೇ ಪಂದ್ಯವು ಮಾಚಿಮಂಡ ಹಾಗೂ ನೆರವಂಡ ತಂಡದ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಮಾಚಿಮಂಡ ತಂಡವು ೭ ವಿಕೆಟ್ ಕಳೆದುಕೊಂಡು ೩೯ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ನೆರವಂಡ ತಂಡವು ಕೇವಲ ೩.೨ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೪೦ ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಐದನೇ ಪಂದ್ಯವು ಕಾಟಿಮಾಡ ತಂಡ ಹಾಗೂ ಕಾಳಿಮಾಡ ತಂಡದ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಕಾಟಿಮಾಡ ತಂಡವು ೧ ವಿಕೆಟ್ ಕಳೆದುಕೊಂಡು ೬೧ ರನ್ ಗಳಿಸಿ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ನೀಡಿತು.
ಕಾಳಿಮಾಡ ತಂಡವು ೪.೪ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೬೬ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು.
ಆರನೇ ಪಂದ್ಯವು ಬೊಳಂದAಡ ತಂಡ ಹಾಗೂ ಇಟ್ಟಿರ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಟ್ಟಿರ ತಂಡ ೨ ವಿಕೆಟ್ ಕಳೆದುಕೊಂಡು ೭೫ ರನ್ ಸಂಪಾದಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ಬೊಳಂದAಡ ತಂಡವು ಬ್ಯಾಟಿಂಗ್ ಆರಂಭಿಸಿ ೪ ವಿಕೆಟ್ ಕಳೆದುಕೊಂಡು ೭೬ ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಏಳನೇ ಪಂದ್ಯವು ಚೀಕಂಡ ತಂಡ ಹಾಗೂ ಮಚ್ಚಮಾಡ ತಂಡಗಳ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಮಚ್ಚಾಮಾಡ ತಂಡವು ೫ ವಿಕೆಟ್ ಕಳೆದುಕೊಂಡು ೬೪ ರನ್ ಕಲೆ ಹಾಕುವ ಮೂಲಕ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ಚೀಕಂಡ ತಂಡವು ಬ್ಯಾಟಿಂಗ್ ಆರಂಭಿಸಿ ೭ ವಿಕೆಟ್ ಕಳೆದುಕೊಂಡು ೫೦ ರನ್ ಬಾರಿಸುವ ಮೂಲಕ ಸೋಲನ್ನು ಅನುಭವಿಸಿತು.