ಗೋಣಿಕೊಪ್ಪಲು, ಮೇ ೯: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯು ಮೈದಾನ ೨ರಲ್ಲಿ ನಡೆಯಿತು. ೩ ಮಹಿಳಾ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಮಾಳೇಟಿರ (ಕೆದಮುಳ್ಳೂರ್) ತಂಡ ಹಾಗೂ ಚಿಮ್ಮಣಮಾಡ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಮಾಳೇಟಿರ ತಂಡ ೧ ವಿಕೆಟ್ ಕಳೆದುಕೊಂಡು ೯೮ ರನ್ ಬಾರಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ಚಿಮ್ಮಣಮಾಡ ತಂಡವು ೩ ವಿಕೆಟ್ ಕಳೆದುಕೊಂಡು ೨೨ ರನ್ ಸಂಪಾದಿಸುವ ಮೂಲಕ ಸೋಲನ್ನು ಅನುಭವಿಸಿತು. ಎರಡನೇ ಪಂದ್ಯವು ಮಾಚಿಮಂಡ ಹಾಗೂ ಮೊಣ್ಣಂಡ ತಂಡದ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಮಾಚಿಮಂಡ ೧ ವಿಕೆಟ್ ಕಳೆದುಕೊಂಡು ೮೨ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು.
ಬ್ಯಾಟಿಂಗ್ ಆರಂಭಿಸಿದ ಮೊಣ್ಣಂಡ ತಂಡ ೧ ವಿಕೆಟ್ ಕಳೆದುಕೊಂಡು ೪೨ ರನ್ ಕಲೆ ಹಾಕಿ ಸೋಲನ್ನು ಅನುಭವಿಸಿತು.
ಮೂರನೇ ಪಂದ್ಯವು ಚೆಕ್ಕೇರ ಹಾಗೂ ಮಚ್ಚಾಮಾಡ ತಂಡಗಳ ನಡುವೆ ನಡೆಯಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಮಚ್ಚಾಮಾಡ ತಂಡ ೨ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.
ಚೆಕ್ಕೇರ ತಂಡವು ಬ್ಯಾಟಿಂಗ್ ಆರಂಭಿಸಿ ಕೇವಲ ೩.೫ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೩೬ ರನ್ ಗಳಿಸಿ ಗೆಲುವು ಸಾಧಿಸಿತು.