ಸುಂಟಿಕೊಪ್ಪ, ಮೇ.೯ : ಕ್ರೀಡೆಯ ಮೂಲಕ ಕ್ರೆöÊಸ್ತರನ್ನು ಒಂದೆಡೆ ಸೇರಿಸುವ ಕೆಲಸ ನಡೆದಿದೆ. ಇದರಿಂದಾಗಿ ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬ ದೃಢ ನಿರ್ಧಾರ ಈ ಮೂಲಕ ನಡೆದಿದೆ ಎಂದು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮ ಗುರು ವಿಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜಿ.ಯಂ.ಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೧೪ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಮತ್ತು ಸಾಧಕರಿಗೆ ಅಭಿನಂದನೆ ಸಮಾರಂಭ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕ್ರೀಡೆಯ ಮೂಲಕ ನಾವೆಲ್ಲರೂ ಒಂದೆಡೆ ಸೇರಿ ಒಂದೇ ಮನೆಯ ಮಕ್ಕಳಂತೆ ಸೌಹಾರ್ದತೆ, ಪರಸ್ಪರ ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳಲು ಇದು ಸುಂದರ ವೇದಿಕೆಯಾಗಿದೆ. ಕ್ರೀಡೆ ನಮ್ಮಲ್ಲಿ ಒಗ್ಗಟ್ಟು ಮೂಡಿಸುತ್ತದೆ. ಒಂದೆಡೆ ಸೇರಿದಾಗ ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಬಾಂಧÀವ್ಯ ಇನ್ನಷ್ಟು ಬೆಸೆದುಕೊಳ್ಳುತ್ತದೆ. ದೂರದ ಊರಿನಿಂದ ಬಂದವರೊAದಿಗೆ ಸಂಘಟನೆಯ ಪ್ರಾಧಾನ್ಯತೆ ದೊರಕಲಿದೆ

(ಮೊದಲ ಪುಟದಿಂದ) ಮತ್ತು ನಾವೆಲ್ಲ ಒಂದೇ ಎಂಬ ಮನೋಭಾವನೆ ಮೂಡಲಿದೆ. ಹಾಗಾಗಿ ಕ್ರೀಡಾ ಮನೋಭಾವದೊಂದಿಗೆ ಆಡುವುದರ ಮೂಲಕ ಕ್ರೀಡಾ ಮನೋಭಾವನೆ ತೋರಿಸಬೇಕೇ ಹೊರತು ಸೋಲು ಗೆಲುವಿನ ಲೆಕ್ಕಾಚಾರ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು..

ಕಾಂಗ್ರೆಸ್ ಮುಖಂಡ ಪಿ.ಎಂ.ಲತೀಫ್ ಮಾತನಾಡಿ, ಎಲ್ಲಾ ಸಮುದಾಯದವರು ತಮ್ಮ ತಮ್ಮ ಸಂಘಟನೆಗಾಗಿ ಈ ರೀತಿಯ ಕ್ರೀಡಾಕೂಟಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಹಾಗೆಯೇ, ಕ್ರೆöÊಸ್ತ ಜನಾಂಗದವರು ಸುಂಟಿಕೊಪ್ಪದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂಘಟನೆಗೆ ಕೊಟ್ಟ ಕೊಡುಗೆಯಾಗಿದೆ. ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಿಡುವು ಮಾಡಿಕೊಂಡು ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ತಾವೆಲ್ಲರೂ ಭಾಗವಹಿಸಿ ಸೌಹಾರ್ದಯುತವಾದ ಮತ್ತು ಕ್ರೀಡಾ ಮನೋಭಾವನೆಗಾಗಿ ಸೇರಬೇಕು ಎಂದರಲ್ಲದೇ, ಅಂತಿಮ ಪಂದ್ಯದಲ್ಲಿ ಜಯಗಳಿಸುವ ತಂಡಕ್ಕೆ ರೂ.೫೦೦೦ ನಗದು ಬಹುಮಾನವನ್ನು ಘೋಷಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, ಇಂತಹ ಸಮುದಾಯಗಳು ಆಯೋಜಿಸಿದ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಪಹಲ್ಗಾಮ್‌ನಲ್ಲಿ ನಡೆದ ೨೬ ಮಂದಿಯ ಹತ್ಯಾಕಾಂಡವನ್ನು ಖಂಡಿಸಿ ಭಾರತೀಯ ಯೋಧರೊಂದಿಗೆ ನಾವೆಲ್ಲರೂ ಇದ್ದು ಅವರಿಗೆ ಧೈರ್ಯ, ಸ್ಥೆöÊರ್ಯವನ್ನು ತುಂಬಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರಾಡ್ರಿಗಸ್ ಮಾತನಾಡಿ, ಒಂದು ಸಂಘವನ್ನು ಕಟ್ಟುವುದು ಕಷ್ಟಸಾಧ್ಯ. ಅದರಲ್ಲೂ ಕೊಡಗಿನಲ್ಲಿ ೧೪ ವರ್ಷಗಳಿಂದ ಬಹಳ ಪ್ರಬಲವಾಗಿ ಮುಂದುವರಿಸಿಕೊAಡು ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನದೊಂದಿಗೆ ಕ್ರೀಡಾಕೂಟವನ್ನು ಮಾಡುತ್ತಿರುವುದು ಸಂತೋಷ ತಂದಿದೆ. ಇದರೊಂದಿಗೆ ಕ್ರೈಸ್ತ ಯುವಕ ಯುವತಿಯರು ೧೮ ವರ್ಷ ತುಂಬಿದ ನಂತರದಲ್ಲಿ ರಾಜಕೀಯ ಅಥವಾ ಸರ್ಕಾರಿ ಹುದ್ದೆಯಲ್ಲಿ ಸೇರ್ಪಡೆಗೊಂಡಲ್ಲಿ ಮಾತ್ರ ತಮ್ಮನ್ನು ಸಮಾಜದಲ್ಲಿ ಗುರುತಿಸಲು ಸಾಧ್ಯ. ಹಾಗಾಗಿ ಹೆಚ್ಚಿನ ಕ್ರೆöÊಸ್ತ ಯುವಕರು ಕೇವಲ ನಾಮಕಾವಸ್ಥೆಗೆ ಮಾತ್ರ ಶಿಕ್ಷಣ ಪಡೆಯದೆ ಎಲ್ಲರೂ ಉನ್ನತ ಹುದ್ದೆಗಳಲ್ಲಿ ಸೇರುವ ಪಣ ತೊಡಬೇಕು. ಅಲ್ಲದೆ ರಾಜಕೀಯದಲ್ಲಿ ಒಬ್ಬ ಕಾರ್ಯಕರ್ತನಾಗಿ ತಾವು ಗುರುತಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕಗಳಿಸಿದ ಕ್ರೆöÊಸ್ತ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು.

ವೇದಿಕೆಯಲ್ಲಿ ಸಿಎಸ್‌ಐ ದೇವಾಲಯ ಚೆಟ್ಟಳ್ಳಿ ಚರ್ಚ್ನ ಧರ್ಮ ಗುರುಗಳಾದ ಜೆರಾಲ್ಡ್ ಸಿಕ್ವೇರಾ, ಸುಂಟಿಕೊಪ್ಪ ಸಿಎಸ್‌ಐ ಚರ್ಚಿನ ಧರ್ಮ ಗುರು ಮಧುಕಿರಣ್, ಸುಂಟಿಕೊಪ್ಪ ಸಂತ ಅಂತೋಣಿ ಸುಪೀರಿಯರ್ ಜೋವಿಟಾ, ಹಟ್ಟಿಹೊಳೆ ನಿರ್ಮಲ ಮಾತೆ ದೇವಾಲಯದ ರೆ.ಫಾ.ಗಿಲ್ಬರ್ಟ್ ಡಿಸಿಲ್ವಾ, ಸೋಮವಾರಪೇಟೆ ಓಎಲ್ ವಿ ಚರ್ಚಿನ ಧರ್ಮಗುರು ಅವಿನಾಶ್, ಜಿಲ್ಲಾ ಸಂಘದ ಗೌgವಾಧ್ಯಕ್ಷ ಜೋಕಿಂ ವಾಸ್, ಕಾರ್ಯಾಧ್ಯಕ್ಷ ಲಾರೆನ್ಸ್, ಕಾರ್ಯದರ್ಶಿ ಜೂಡಿ ಡೇವಿಡ್ ವಾಸ್, ಖಜಾಂಚಿ ಜೇಮ್ಸ್ ಡಿಸೋಜಾ, ಪಿ.ಎಫ್. ಸಭಾಸ್ಟೀನ್, ಎಂ.ಬಿ.ವಿನ್ಸೆAಟ್, ಜಿಲ್ಲಾ ಸಮಿತಿ, ತಾಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಂತರ ನಡೆದ ಜಿಲ್ಲಾ ಮಟ್ಟದ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿ ಸಿಎಸ್‌ಐ ದೇವಾಲಯದ ವಿಲಿಯಂ ಚಾಲನೆ ನೀಡಿದರು. ಈ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ೨೫ ಧರ್ಮ ಕೇಂದ್ರಗಳ ೨೨ ತಂಡಗಳು ಭಾಗವಹಿಸಿವೆ. ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟವು ಭಾನುವಾರ ಸಂಜೆ ಮುಕ್ತಾಯಗೊಳ್ಳಲಿದೆ.

ಕ್ರಿಕೆಟ್ ಪಂದ್ಯಾಟ

ಶುಕ್ರವಾರ ನಡೆದ ಪ್ರಥಮ ಪಂದ್ಯಾವಳಿ ಅಬ್ಬೂರುಕಟ್ಟೆ ಮತ್ತು ವೀರಾಜಪೇಟೆ ಬಿ.ತಂಡಗಳ ನಡುವೆ ನಡೆದು ವೀರಾಜಪೇಟೆ ತಂಡ ೫ ರನ್ ಗಳಿಂದ ಗೆದ್ದುಕೊಂಡಿತು. ದ್ವಿತೀಯ ಪಂದ್ಯಾವಳಿಯು ಪಾಲಿಬೆಟ್ಟ ಮತ್ತು ಹಟ್ಟಿಹೊಳೆ ತಂಡಗಳ ನಡುವೆ ನಡೆದು ಹಟ್ಟಿಹೊಳೆ ಪವಿತ್ರ ಕುಟುಂಬ ದೇವಾಲಯ ಜಯಗಳಿಸಿತು. ೩ನೇ ಪಂದ್ಯಾವಳಿ ಮಡಿಕೇರಿ ಸಂತ ಮೈಕಲರ ದೇವಾಲಯದ ಬಿ ತಂಡ ಹಾಗೂ ಆತಿಥೇಯ ಸಂತ ಅಂತೋಣಿ ದೇವಾಲಯದ ಬಿ ತಂಡಗಳ ನಡುವೆ ನಡೆದು ಸಂತ ಮೈಕಲರ ಬಿ ತಂಡವು ಗೆದ್ದುಕೊಂಡಿತು.

೪ನೇ ಪಂದ್ಯಾವಳಿಯು ಪೊನ್ನಂಪೇಟೆ ಸಂತ ಅಂತೋಣಿ ದೇವಾಲಯ ತಂಡÀ ಹಾಗೂ ಕುಶಾಲನಗರದ ಸಂತ ಸೆಬಾಸ್ಟಿಯನ್ ದೇವಾಲಯ ತಂಡಗಳ ನಡುವೆ ನಡೆದು ಪೊನ್ನಂಪೇಟೆ ತಂಡವು ಜಯಗಳಿಸಿತು. ೫ನೇ ಪಂದ್ಯಾವಳಿಯು ಗೋಪಾಲಪುರದ ಸಂತ ಅಂತೋಣಿ ದೇವಾಲಯದ ತಂಡ ಹಾಗೂ ಸೋಮವಾರಪೇಟೆ ಓಎಲ್ ವಿ ತಂಡಗಳ ನಡುವೆ ನಡೆದು ಗೋಪಾಲಪುರ ತಂಡವು ಗೆದ್ದುಕೊಂಡಿತು. ಪಾಲಿಬೆಟ್ಟ ದೇವಾಲಯ ತಂಡ ಆತಿಥೇಯ ಸಂತ ಅಂತೋಣಿ ದೇವಾಲಯದ ಎ ತಂಡಗಳ ನಡುವೆ ನಡೆದು ಪಾಲಿಬೆಟ್ಟ ತಂಡವು ಗೆಲುವು ಸಾಧಿಸುವುದ ರೊಂದಿಗೆ ಮುಂದಿನ ಸುತ್ತಿಗೆ ಆರ್ಹತೆಯನ್ನು ಪಡೆಯಿತು.