ಅನಿಲ್ ಎಚ್.ಟಿ.
ಮಡಿಕೇರಿ, ಮೇ ೯: ಕೇರಳ ರಾಜ್ಯದ ಪ್ರಮುಖ ನಗರಗಳಿಂದಲೇ ಪಾಕಿಸ್ತಾನಕ್ಕೆ ಯುವಕರನ್ನು ರವಾನಿಸಿ ಅಲ್ಲಿ ಭಯೋತ್ಪಾದನಾ ಚಟುವಟಿಕೆಗಳ ತರಬೇತಿ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಬುಧವಾರ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಕೇರಳದ ಕೆಲವು ಯುವಕರು ಸಾವನ್ನಪ್ಪಿರುವುದು ಪತ್ತೆಯಾಗಿದೆ. ತಡಿಯಂಡವಿಡೆ ನಜೀರ್ ಎಂಬ ಕೇರಳದ ಭಯೋತ್ಪಾದಕ ಸಂಘಟನೆಯ ನಾಯಕನೇ ಪಾಕಿಸ್ತಾನದ ಪರ ಭಯೋತ್ಪಾದನಾ ಕಾರ್ಯಾಚರಣೆಗಳಿಗಾಗಿ ಈ ಯುವಕರನ್ನು ಆಯ್ಕೆ ಮಾಡಿ ರವಾನಿಸಿದ್ದ ಎಂದೂ ತಿಳಿದುಬಂದಿದೆ. ಅಂದAತೆ, ಈ ತಡಿಯಂಡವಿಡೆ ನಜೀರ್ ಬೇರೆ ಯಾರೂ ಅಲ್ಲ. ೧೫ ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಹೊಸತೋಟದಲ್ಲಿ ಶುಂಠಿ ಕೃಷಿ ನೆಪದಲ್ಲಿ ಉಗ್ರ ತರಬೇತಿ ಚಟುವಟಿಕೆಗೆ ಹೊಂಚು ಹಾಕಿ ಕೆಲಕಾಲ ಕೊಡಗಿನಲ್ಲಿಯೇ ಆಶ್ರಯ ಪಡೆದಿದ್ದ ನಟೋರಿಯಸ್ ವ್ಯಕ್ತಿಯೇ ಈತ.
ಕೊಡಗಿಗೆ ಸನಿಹದ ಕಣ್ಣೂರು ಮತ್ತು ಮಲ್ಲಾಪುರಂ ಸೇರಿದಂತೆ ಎರ್ನಾಕುಲಂನಲ್ಲಿಯೂ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಸಿದ್ದಗೊಳಿಸುವ ಕಾರ್ಯ ಸಕ್ರಿಯವಾಗಿತ್ತು ಎಂದು ಮೂಲಗಳು ತಿಳಿಸಿವೆ. ನಾಸೀರ್ ಹಲವು ವರ್ಷಗಳ ಕಾಲ ಕರ್ನಾಟಕದ ಜೈಲಿನಲ್ಲಿಯೇ ಇದ್ದು ತರುವಾಯ ಕೇರಳದ ಜೈಲಿಗೆ ಸ್ಥಳಾಂತರಗೊAಡಿದ್ದ. ನಜೀರ್ ಬಾಂಗ್ಲಾದಲ್ಲಿಯೂ ಕೂಡ ಕೆಲ ಕಾಲ ಕಾರ್ಯನಿರ್ವಹಿಸಿದ್ದು ನಂತರ ಹೊಸತೋಟದಲ್ಲಿ ಉಗ್ರ ಚಟುವಟಿಕೆ ಬೆಳಕಿಗೆ ಬರುತ್ತಿದ್ದಂತೆಯೇ ೨೦೦೯ರಲ್ಲಿ ಈತನ ಬಂಧನವಾಗಿತ್ತು. ಪ್ರಸ್ತುತ ನಜೀರ್ ಜೀವಾವಧಿ ಶಿಕ್ಷೆಯನ್ನು ಕೇರಳದ ಜೈಲಿನಲ್ಲಿ ಅನುಭವಿಸುತ್ತಿದ್ದಾನೆ. ಹೀಗಿದ್ದರೂ ನಜೀರ್ ತರಬೇತಿ ನೀಡಿದ ಯುವಕರ ಪಡೆ ಸಕ್ರಿಯವಾಗಿರುವುದು ಗೊತ್ತಾಗಿದೆ.
(ಮೊದಲ ಪುಟದಿಂದ) ಉಗ್ರವಾದಿ ಸಂಘಟನೆಗಳ ಮೂಲಕ ಕೇರಳದ ನಾನಾ ಕಡೆ ಆಯ್ದ ಯುವಕರಿಗೆ ತರಬೇತಿ ನೀಡುತ್ತಿದ್ದ ನಜೀರ್ ಅಂಥ ಯುವಕರನ್ನು ಪಾಕ್ ಅತಿಕ್ರಮಿತ ಕಾಶ್ಮೀರಕ್ಕೆ ರವಾನಿಸಿ ಅಲ್ಲಿ ಭಯೋತ್ಪಾದನಾ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದ. ಇವರ ಕಾರ್ಯಾಚರಣೆ ಹೇಗಿತ್ತು ಎಂದರೆ ಕಾಶ್ಮೀರಕ್ಕೆ ತೆರಳುವ ೫ ಯುವಕರ ಪೈಕಿ ಇಬ್ಬರು ಯುವಕರು ಕೇರಳಕ್ಕೆ ಮರಳಿದರೆ ಉಳಿದ ಮೂವರು ಪಾಕಿಸ್ತಾನ ಮತ್ತು ಅಫಘಾನಿಸ್ತಾನದಲ್ಲಿ ಜಿಹಾದ್ ಸಂಬAಧಿತ ಕಾರ್ಯಾಚರಣೆಯಲ್ಲಿ ಸಕ್ರಿಯರಾಗುತ್ತಿದ್ದರು.
ಕೇರಳಕ್ಕೆ ಮರಳುವ ಈರ್ವರು ಯುವಕರು ಮತ್ತಷ್ಟು ಯುವಕರನ್ನು ಇಂಥ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದರು. ಕೇರಳ ರಾಜ್ಯದಿಂದಲೇ ಪಾಕಿಸ್ತಾನಕ್ಕೆ ಅನೇಕ ಯುವಕರು ಭಯೋತ್ಪಾದನಾ ಚಟುವಟಿಕೆಗಳಿಗೆ ರವಾನೆಯಾಗಿರುವ ಸಾಧ್ಯತೆ ದಟ್ಟವಾಗಿದೆ.
ಇಂಥ ಜಿಹಾದ್ ಶಿಬಿರ ಸೇರಿಕೊಂಡ ಯುವಕರು ಜಿಹಾದ್ ಶಿಬಿರದಿಂದ ಮರಳಿ ಮನೆಗೆ ಬರಬೇಕೆಂದು ಬಯಸಿದರೆ ಅಂಥ ಯುವಕರನ್ನು ಯಾವುದೇ ಕಾರಣಕ್ಕೂ ಕೇರಳಕ್ಕೆ ಮರಳಿ ಕಳುಹಿಸುತ್ತಿರಲಿಲ್ಲ. ಬದಲಿಗೆ ಜಿಹಾದ್‌ನಿಂದ ಮರಳುವುದೂ ಒಂದೇ ಸಾಯುವುದೂ ಒಂದೇ ಎಂದು ಬೆದರಿಕೆ ಒಡ್ಡಲಾಗುತ್ತಿತ್ತು. ಸ್ವತಃ ನಜೀರ್ ಅಂಥ ಯುವಕರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಕೇರಳದಲ್ಲಿ ತಾಂತ್ರಿಕ ತರಬೇತಿ
ಪೆಹಲ್ಗಾಮ್‌ನಲ್ಲಿ ಏಪ್ರಿಲ್ ೨೨ ರಂದು ೨೬ ಪ್ರವಾಸಿಗರ ಹತ್ಯಾಕಾಂಡದ ರೂವಾರಿಯಾಗಿರುವ ಶೇಖ್ ಸಜ್ಜದ್ ಗುಲ್ ಎಂಬಾತ ಕಾಶ್ಮೀರ ಮೂಲದವನಾಗಿದ್ದು ಬೆಂಗಳೂರಿನಲ್ಲಿ ಎಂ.ಬಿ.ಎ. ಪದವಿ ಪಡೆದ ಬಳಿಕ ಕೇರಳದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ತರಬೇತಿ ಪಡೆದಿದ್ದ. ಕಾಶ್ಮೀರದಲ್ಲಿ ಸ್ವಂತ ಲ್ಯಾಬ್ ಹೊಂದಿದ್ದ ಶೇಖ್, ಭಯೋತ್ಪಾದಕ ಸಂಘಟನೆಗಳಿಗೆ ಅಗತ್ಯವಾದ ವೈಜ್ಞಾನಿಕ ನೆರವನ್ನು ಕಾಲದಿಂದ ಕಾಲಕ್ಕೆ ನೀಡುತ್ತಾ ಬಂದಿದ್ದ. ೫ ಕೆಜಿ ಆರ್ ಡಿಎಕ್ಸ್ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ೨೦೦೩ರಲ್ಲಿ ಪೊಲೀಸರಿಂದ ಬಂಧಿತನಾಗಿದ್ದ ಶೇಖ್ ೧೦ ವರ್ಷಗಳ ಜೈಲು ಶಿಕ್ಷೆಯ ಬಳಿಕ ೨೦೧೭ ರಲ್ಲಿ ಬಿಡುಗಡೆಯಾಗಿದ್ದ. ಆ ಬಳಿಕವೂ ಉಗ್ರ ಚಟುವಟಿಕೆಗಳಲ್ಲಿ ಶೇಖ್ ಸಕ್ರಿಯನಾಗಿದ್ದ ಮಾತ್ರವಲ್ಲ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದಲೇ ಭಯೋತ್ಪಾದಕ ಚಟುವಟಿಕೆಗಳನ್ನು ನಿರಂತರವಾಗಿ ನಿರ್ವಹಿಸುತ್ತಿದ್ದ. ಕೇರಳದಿಂದ ಬರುತ್ತಿದ್ದ ಯುವಕರಿಗೆ ಅಗತ್ಯ ನೆರವು ಮತ್ತು ತರಬೇತಿಯನ್ನೂ ಶೇಖ್ ನೀಡುತ್ತಿದ್ದ ಸಾಧ್ಯತೆಗಳಿವೆ