ಮಡಿಕೇರಿ, ಮೇ ೯ : ಮರಗೋಡಿನ ಗೌಡ ಈವ್ನಿಂಗ್ ಸ್ಟಾರ್ ಕ್ಲಬ್ ವತಿಯಿಂದ ಮರಗೋಡಿನಲ್ಲಿ ನಡೆದ ಗೌಡ ಜನಾಂಗದ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬದ ಚಾಂಪಿಯನ್ ಆಗಿ ಪರ್ಲಕೋಟಿ ತಂಡ ಹೊರ ಹೊಮ್ಮಿದೆ. ಉಳುವಾರನ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.

ಒಟ್ಟು ೧೦೩ ಕುಟುಂಬ ತಂಡಗಳು ಪಾಲ್ಗೊಂಡಿದ್ದ ಕ್ರಿಕೆಟ್ ಹಬ್ಬದಲ್ಲಿ ಅಂತಿಮ ಪಂದ್ಯಾವಳಿಗೆ ಪ್ರವೇಶಿಸಿದ ಎರಡು ಬಲಿಷ್ಠ ತಂಡಗಳ ಪೈಕಿ ಪರ್ಲಕೋಟಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಉಳುವಾರನ

(ಮೊದಲ ಪುಟದಿಂದ) ತಂಡ ೧೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೬೮ ರನ್ ಕಲೆ ಹಾಕಿತು. ಉತ್ತರವಾಗಿ ಆಡಿದ ಪರ್ಲಕೋಟಿ ತಂಡ ೬.೨ ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೭೦ ರನ್ ಬಾರಿಸುವ ಮೂಲಕ ವಿಜಯಿಶಾಲಿಯಾಯಿತು. ಪರ್ಲಕೋಟಿ ದರ್ಶನ್ ೨೪ ಎಸೆತಗಳಲ್ಲಿ ೬ ಸಿಕ್ಸರ್, ಒಂದು ಬೌಂಡರಿ ಸಹಿತ ೫೦ ರನ್ ಗಳಿಸಿ ಔಟಾಗದೇ ತಂಡದ ಗೆಲುವಿಗೆ ಆಸರೆಯಾದರು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪರ್ಲಕೋಟಿ ತಂಡ ೩ ವಿಕೆಟ್‌ಗೆ ೯೫ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕಟ್ಟಮನೆ ತಂಡ ೯ ವಿಕೆಟ್‌ಗೆ ೬೪ ರನ್ ಮಾತ್ರ ಗಳಿಸಿ ಸೋಲನುಭವಿಸಿತು.

ಮತ್ತೊಂದು ಪಂದ್ಯದಲ್ಲಿ ಉಳುವಾರನ ತಂಡ ೯ ವಿಕೆಟ್‌ಗೆ ೮೯ ರನ್ ಗಳಿಸಿದರೆ, ಎದುರಾಳಿ ಯಾಗಿದ್ದ ತಳೂರು ತಂಡ ೬ ವಿಕೆಟ್ ಕಳೆದುಕೊಂಡು ೭೪ ರನ್ ಮಾತ್ರ ಗಳಿಸಿ ಸೋಲನುಭವಿಸಿತು.

ಕ್ರಿಕೆಟ್ ಹಬ್ಬದಲ್ಲಿ ಅತ್ಯಂತ ಪ್ರಮುಖ ಆಟಗಾರ ಪ್ರಶಸ್ತಿಯನ್ನು ತಳೂರು ವಿಕ್ಕಿ ಪಡೆದುಕೊಂಡರೆ, ಉತ್ತಮ ದಾಂಡಿಗನಾಗಿ ಬಿಳಿಯಂಡ್ರ ಸತ್ಯಂದ್, ಉತ್ತಮ ಎಸೆತಗಾರನಾಗಿ ಉಳುವಾರನ ಜೀವು, ಉತ್ತಮ ಮಹಿಳಾ ಆಟಗಾರ್ತಿಯಾಗಿ ಬಡುವಂಡ್ರ ಪುನರ್ವ ಲಕ್ಷಿö್ಮಪತಿ, ಉದಯೋಮ್ಮುಖ ಆಟಗಾರನಾಗಿ ಸಣ್ಣಜನ ಗೋಕುಲ್, ಅಂತಿಮ ಪಂದ್ಯಾವಳಿಯ ಉತ್ತಮ ಆಟಗಾರನಾಗಿ ಪರ್ಲಕೋಟಿ ದರ್ಶನ್, ಉತ್ತಮ ಕ್ಷೇತ್ರ ರಕ್ಷಕನಾಗಿ ಪರ್ಲಕೋಟಿ ಲಕ್ಷಿತ್ ಬಹುಮಾನ ಪಡೆದುಕೊಂಡರು.