ಸುಂಟಿಕೊಪ್ಪ, ಮೇ ೬: ಇಲ್ಲಿನ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ದಿ. ಶಿವಪ್ಪ ಗೋಲ್ಡ್ ಕಪ್ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟವು ತಾ.೧೬ ರಿಂದ ೨೫ ರವರೆಗೆ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಬ್ಲೂ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ಕೆ.ಎಂ. ಆಲಿ ಕುಟ್ಟಿ ತಿಳಿಸಿದ್ದಾರೆ.
ಈ ಪಂದ್ಯಾಟದಲ್ಲಿ ರಾಜ್ಯದ ಹಲವು ಪ್ರತಿಷ್ಠಿತ ತಂಡಗಳು ಪಾಲ್ಗೊಳ್ಳಲಿದೆ. ತಾ. ೭ರಂದು (ಇಂದು) ಸಂಘದ ಆಶ್ರಯದಲ್ಲಿ ಮೈಸೂರಿನ ನಾರಾಯಣ ಹೃದಯ ಆಸ್ಪತ್ರೆಯಿಂದ ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೩:೦೦ ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಹೃದಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.