ಮಡಿಕೇರಿ, ಮೇ ೬: ಮರಗೋಡಿನ ಗೌಡ ಈವ್ನಿಂಗ್ ಸ್ಟಾರ್ ಕ್ಲಬ್ ವತಿಯಿಂದ ಆಯೋಜಿತವಾಗಿರುವ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯ ೮ನೇ ದಿನದಲ್ಲಿ ತಳೂರು ಹಾಗೂ ಪಾಣತ್ತಲೆ ಕುಟುಂಬ ತಂಡಗಳು ಪ್ರಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಮುದ್ಯನ ತಂಡ ೮ ವಿಕೆಟ್‌ಗೆ ೪೩ ರನ್ ಗಳಿಸಿದೆ, ಮಂಞಪುರ ತಂಡ ೪ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.

ಕೂಡಕಂಡಿ ತಂಡ ೬ ವಿಕೆಟ್‌ಗೆ ೩೪ ರನ್ ಗಳಿಸಿದರೆ ಕುಟ್ಟನ ತಂಡ ೩ ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ಪಡ್ಪುಮನೆ ತಂಡ ೨ ವಿಕೆಟ್‌ಗೆ ೬೦ ರನ್ ಗಳಿಸಿದರೆ, ಮುಕ್ಕಾಟಿ (ಕೈಕೇರಿ) ೨ ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು.

ಮುಕ್ಕಾಟಿ ಹರ್ಷಿತ್ ೧೯ ಎಸೆತಗಳಲ್ಲಿ ೪ ಸಿಕ್ಸರ್ ಒಂದು ಬೌಂಡರಿಯೊAದಿಗೆ ೪೧ ರನ್ ಗಳಿಸಿ ಗಮನ ಸೆಳೆದರು.

ಚೆರಿಯಮನೆ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು ೪೫ರನ್ ಗಳಿಸಿದರೆ, ಪಾಲಾರ್ ಗುಂಡ್ಯ ತಂಡ ೫ ವಿಕೆಟ್‌ಗೆ ೩೭ ರನ್ ಗಳಿಸಿ ಸೋಲನುಭವಿಸಿತು.

ಕಳಂಜನ ತಂಡ ೫ ವಿಕೆಟ್‌ಗೆ ೬೫ ರನ್ ಗಳಿಸಿದರೆ, ಪಾಣತ್ತಲೆ ತಂಡ ೩ ವಿಕೆಟ್‌ಗೆ ೭೧ ರನ್ ಬಾರಿಸಿ ಗೆಲುವು ಸಾಧಿಸಿತು. ಪಾಣತ್ತಲೆ ಮುಕುಂದ್ ೧ ಸಿಕ್ಸರ್ ಸಹಿತ ೯ ಎಸೆತಗಳಲ್ಲಿ ೧೭ ರನ್ ಗಳಿಸಿದರು.

ಮಂಞಪುರ ತಂಡ ೩ ವಿಕೆಟ್‌ಗೆ ೨೯ರನ್ ಗಳಿಸಿದರೆ, ತಳೂರು ತಂಡ ೧ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ತಳೂರು ವಿಕ್ಕಿ ೩ ಸಿಕ್ಸರ್ ಸಹಿತ ೫ ಎಸೆತದಲ್ಲಿ ೨೧ ರನ್ ಗಳಿಸಿ ಗಮನ ಸೆಳೆದರು. ನಡುವಟ್ಟಿರ ತಂಡ ೫ ವಿಕೆಟ್‌ಗೆ ೩೮ ರನ್ ಗಳಿಸಿದರೆ, ಯಾವುದೇ ವಿಕೆಟ್ ನಷ್ಟವಿಲ್ಲದೆ. ಕುಟ್ಟನ ತಂಡ ೪೨ ರನ್ ಬಾರಿಸಿ ಗೆಲುವು ಸಾಧಿಸಿತು. ಕುಟ್ಟನ ಉದಯ್ ೮ ಎಸೆತದಲ್ಲಿ ೨ ಸಿಕ್ಸರ್, ಒಂದು ಬೌಂಡರಿಯೊAದಿಗೆ ೨೨ ರನ್ ಗಳಿಸಿ ಔಟಾಗದೆ ಉಳಿದರು.

ಚೆರಿಯಮನೆ ತಂಡ ೨ ವಿಕೆಟ್‌ಗೆ ೮೧ ರನ್ ಗಳಿಸಿದರೆ, ಮುಕ್ಕಾಟಿ ತಂಡ ೮ ವಿಕೆಟ್ ಕಳೆದುಕೊಂಡು ೩೦ ರನ್ ಮಾತ್ರ ಗಳಿಸಿ ೫೧ ರನ್‌ಗಳ ಅಂತರದಿAದ ಸೋಲನುಭವಿಸಿತು. ಚೆರಿಯಮನೆ ನಯನ್ ೬ ಸಿಕ್ಸರ್ ಸಹಿತ ೧೭ ಎಸೆತದಲ್ಲಿ ೪೯ ರನ್‌ಗಳಿಸಿ ಔಟಾಗದೆ ಉಳಿದರು.

ಪುದಿಯನೆರವನ ತಂಡ ೨ ವಿಕೆಟ್‌ಗೆ ೭೧ ರನ್ ಕಲೆ ಹಾಕಿದರೆ, ಪಾಣತ್ತಲೆ ತಂಡ ೪ ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ಪಾಣತ್ತಲೆ ರಜತ್ ಪೊನ್ನಪ್ಪ ೧೦ ಎಸೆತಗಳಲ್ಲಿ ೪ ಸಿಕ್ಸರ್ ಸಹಿತ ೨೫ ರನ್ ಗಳಿಸಿ ಔಟಾಗದೆ ಉಳಿದರು. ತಳೂರು ತಂಡ ೫ ವಿಕೆಟ್‌ಗೆ ೮೨ ರನ್ ಗಳಿಸಿದರೆ, ಎದುರಾಳಿ ಕುಟ್ಟನ ತಂಡ ೭ ವಿಕೆಟ್ ಕಳೆದುಕೊಂಡು ೨೮ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ತಳೂರು ವಿಕ್ಕಿ ೨೫ ಎಸೆತದಲ್ಲಿ ಭರ್ಜರಿ ೯ ಸಿಕ್ಸರ್, ಒಂದು ಬೌಂಡರಿ ಸಹಿತ ೬೩ ರನ್ ಗಳಿಸಿ ತಂಡಕ್ಕೆ ನೆರವಾದರು. ಚೆರಿಯಮನೆ ತಂಡ ೪ ವಿಕೆಟ್‌ಗೆ ೫೧ ರನ್ ಗಳಿಸಿದರೆ, ಪಾಣತ್ತಲೆ ತಂಡ ೬ ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.