ಐಗೂರು: ಮಾದಾಪುರದ ಜಂಬೂರಿನ ಬಸವೇಶ್ವರ ದೇವಾಲಯದ ವಾರ್ಷಿಕ ಕದಲಿ ಪೂಜೆಯು ಭಕ್ತಿಪೂರ್ವಕವಾಗಿ ನಡೆದು ಸಂಪನ್ನಗೊAಡಿತು. ಅರ್ಚಕ ನಂಜಪ್ಪ ಅವರು ಆರತಿ ಪೂಜೆಯನ್ನು ಸಲ್ಲಿಸಿದರು.

ಅಗ್ನಿಕುಂಡಕ್ಕೆ ಪೂಜೆಗಳು ನಡೆದು ಭಕ್ತರು ಬೆಂಕಿಯ ಕೆಂಡವನ್ನು ಹಾಯ್ದರು. ವೀರಗಾಸೆ ಕುಣಿತ ನಡೆಯಿತು. ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ನದಿಗೆ ಮಂಗಳವಾದ್ಯದ ಮೆರವಣಿಗೆಯಲ್ಲಿ ಸಾಗಿ ನದಿಯಲ್ಲಿ ಗಂಗಾ ಸ್ನಾನ ಮುಗಿಸಿ, ಮರಳಿ ದೇವಾಲಯವನ್ನು ಪ್ರವೇಶಿಸಿದರು. ಮಹಾ ಮಂಗಳಾರತಿ, ಅನ್ನಸಂತರ್ಪಣೆ ನಡೆದ ಉತ್ಸವದಲ್ಲಿ ಅಧ್ಯಕ್ಷ ಬಿ.ಎಸ್. ಕಾವೇರಪ್ಪ, ಪದಾಧಿಕಾರಿಗಳಾದ ಪಿ.ಎಸ್. ರತೀಶ್, ಮಂಜು ಆರ್., ರುದ್ರಕುಮಾರ್, ವಿ.ಪಿ. ತಿಲಕ್ ಕುಮಾರ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಸೋಮವಾರಪೇಟೆ: ಅನಾದಿ ಕಾಲದಿಂದಲೂ ಅನೂಚಾನವಾಗಿ ಆಚರಿಸಿಕೊಂಡು ಬಂದಿರುವ ಚೌಡ್ಲು ಗ್ರಾಮದ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವ, ಸಾಂಪ್ರದಾಯಿಕ ಆಚರಣೆಗಳಿಗೆ ಆದ್ಯತೆ ನೀಡುವ ಮೂಲಕ ಸಂಪನ್ನಗೊAಡಿತು.

ಮಲೆನಾಡು ಭಾಗದ ಗ್ರಾಮಗಳಲ್ಲಿ ವಿಶೇಷವಾಗಿ ನಡೆಯುವ ವಾರ್ಷಿಕ ಸುಗ್ಗಿ ಉತ್ಸವಗಳು ಬಹುತೇಕ ಮುಕ್ತಾಯಗೊಂಡಿದೆ. ತೋಳೂರು ಶೆಟ್ಟಳ್ಳಿ, ಹಾನಗಲ್ಲು ಶೆಟ್ಟಳ್ಳಿ, ಯಡೂರು, ತಲ್ತರೆಶೆಟ್ಟಳ್ಳಿ, ಕುಮಾರಳ್ಳಿ, ನಗರಳ್ಳಿ ಸೇರಿದಂತೆ ಇನ್ನಿತರ ಪ್ರಮುಖ ಗ್ರಾಮಗಳಲ್ಲಿ ಸುಗ್ಗಿಯ ಸಂಭ್ರಮ ಮುಗಿದಿದ್ದು, ಇಂದು ಚೌಡ್ಲು ಗ್ರಾಮದ ದೊಡ್ಡ ಸುಗ್ಗಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸಂಭ್ರಮದಿAದ ನಡೆಯಿತು. ಸಾಧಾರಣವಾಗಿ ಎಲ್ಲಾ ಗ್ರಾಮಗಳ ಸುಗ್ಗಿಗಳು ಪ್ರತಿವರ್ಷ ನಡೆದರೆ, ಚೌಡ್ಲುವಿನ ಸುಗ್ಗಿ ೨ ವರ್ಷಗಳಿಗೊಮ್ಮೆ ಮಾತ್ರ ನಡೆಯುತ್ತದೆ. ಒಂದು ವಾರಗಳ ಕಾಲ ನಡೆಯುವ ಸುಗ್ಗಿ ಉತ್ಸವದಲ್ಲಿ ಹಿಂದಿನಿAದಲೂ ನಡೆಸಿಕೊಂಡು ಬಂದAತಹ ಆಚರಣೆಗಳು ಜರುಗುತ್ತವೆ.

ಚೌಡ್ಲು, ಕಿಬ್ಬೆಟ್ಟ, ಕರ್ಕಳ್ಳಿ ಮತ್ತು ನಗರೂರು ವ್ಯಾಪ್ತಿಗೆ ಒಳಪಡುವ ಚೌಡ್ಲು ಸುಗ್ಗಿಯಲ್ಲಿ ಹಳೆ ತಲೆಮಾರಿನ ವಿವಾಹ ಸಂದರ್ಭದ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡುವದು ವಿಶೇಷ. ನಗರೂರು ಗ್ರಾಮದಲ್ಲಿರುವ ಸುಗ್ಗಿಕಟ್ಟೆಯಿಂದ ಅದೇ ಗ್ರಾಮದ ಯುವಕನಿಗೆ ವಧುವಿನ ರೂಪ ಕೊಟ್ಟು, ಅಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಂತರ ದಿಬ್ಬಣದೊಂದಿಗೆ ವರನ ಊರಾದ ಚೌಡ್ಲು ಗ್ರಾಮಕ್ಕೆ ಮೆರವಣಿಗೆ ಬರುವದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದ್ದು, ಈಗಿನ ತಲೆಮಾರೂ ಸಹ ಈ ಆಚರಣೆಯನ್ನು ಮುಂದುವರೆಸಿಕೊAಡು ಬರಲಾಗಿದೆ.

ಸುಗ್ಗಿ ಪ್ರಾರಂಭದಿAದಲೂ ಅನೇಕ ಕಟ್ಟುಪಾಡುಗಳನ್ನು ಅಳವಡಿಸಿಕೊಂಡು ಗ್ರಾಮ ದೇವತೆ ಸಬ್ಬಮ್ಮ ತಾಯಿಯನ್ನು ಭಕ್ತಿಭಾವದಿಂದ ಪೂಜಿಸುವ, ದೈವೀ ಕಾರ್ಯ ನೆರವೇರಿಸುವ ಮಂದಿ (ದೇವರಿಗೆ ನಡೆಯುವವರು) ವಿಶೇಷವಾಗಿ ಸುಗ್ಗಿಯಲ್ಲಿ ಪ್ರಾಧಾನ್ಯತೆ ಪಡೆಯುವರು.

ಎರಡು ವರ್ಷಗಳಿಗೊಮ್ಮೆ ನಡೆಯುವ ಚೌಡ್ಲು ಸುಗ್ಗಿ ವಿಶೇಷತೆ ಗಳಿಂದ ಕೂಡಿದ್ದು, ನಗರೂರು ಗ್ರಾಮದ ಮುಖಂಡರು ವಧು ವಿನೊಂದಿಗೆ ದಿಬ್ಬಣದ ಮೂಲಕ ಮೆರವಣಿಗೆಯಲ್ಲಿ ಚೌಡ್ಲು ಗ್ರಾಮಕ್ಕೆ ಆಗಮಿಸಿದರು. ವರನ ಕುಟುಂಬ ಸದಸ್ಯರಂತೆ ಚೌಡ್ಲು ಗ್ರಾಮದವರು ವಧುನಿನ ಕಡೆಯವರನ್ನು ಬರಮಾಡಿಕೊಂಡು ಸಬ್ಬಮ್ಮ ದೇವಿಯ ಸನ್ನಿಧಿಯಲ್ಲಿ ಧಾನ್ಯ ಬಿತ್ತನೆ ಮಾಡುವ ಮೂಲಕ ಹೊನ್ನಾರು ಉತ್ಸವ ನೆರವೇರಿಸಿದರು. ಕರ್ಕಳ್ಳಿ ಹಾಗೂ ಕಿಬ್ಬೆಟ್ಟ ಗ್ರಾಮಗಳಿಂದಲೂ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ ಪ್ರಧಾನ ದೇವಾಲಯ ವಾದ ಚೌಡ್ಲು ಸಬ್ಬಮ್ಮ ದೇವರ ದೇವಸ್ಥಾನಕ್ಕೆ ವಾಲಗ ದೊಂದಿಗೆ ಮೆರವಣಿಗೆ ತೆರಳಿದರು.

ಇಲ್ಲಿ ಸಮಾಗಮಗೊಂಡ ನಂತರ ನಾಲ್ಕೂ ಗ್ರಾಮಗಳ ಮಂದಿ ಸಬ್ಬಮ್ಮ ದೇವಿಯಲ್ಲಿ ಗ್ರಾಮದ ಸುಭೀಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಸುಗ್ಗಿ ಬನದಲ್ಲಿ ಗ್ರಾಮದ ವಯೋವೃದ್ಧರಿಂದ ಹಿಡಿದು ಪುಟಾಣಿ ಮಕ್ಕಳ ಸಹಿತ ಮಹಿಳೆಯರು, ಪುರುಷರು, ಯುವ ಜನಾಂಗದವರು ಸಾಂಪ್ರದಾಯಿಕ ಸುಗ್ಗಿ ವಾಲಗಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.

ಚೌಡ್ಲು ಸುಗ್ಗಿಯಲ್ಲಿ ದಿನಂಪ್ರತಿ ವಿವಿಧ ಸಾಂಪ್ರದಾಯಿಕ ಆಚರಣೆಗಳು ಜರುಗಿದವು. ಸುಗ್ಗಿ ಕಂಬದಲ್ಲಿ ಉಯಿಲು ತೂಗುವದು, ಮಳೆ ಕರೆಯುವದು, ಬಿತ್ತನೆ ಮಾಡುವದೂ ಸೇರಿದಂತೆ ಇತರ ಪೂಜಾ ವಿಧಿವಿಧಾನಗಳು ನೆರವೇರಿದವು.

ಸುಗ್ಗಿ ಉತ್ಸವಕ್ಕೆ ಶಾಸಕ ಡಾ. ಮಂತರ್ ಗೌಡ ಆಗಮಿಸಿ, ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಗ್ರಾಮದ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು. ಗ್ರಾಮಸ್ಥರಾದ ಅಂಜನ್ ಕುಮಾರ್, ದೇವಯ್ಯ, ನಂದಕುಮಾರ್, ಸಿ.ಎಸ್. ಕುಟ್ಟಪ್ಪ, ತಮ್ಮಣ್ಣಪ್ಪ, ರಾಜು ದೇವರ ಒಡೆಕಾರರಾಗಿ ಉತ್ಸವದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದರು. ಚೌಡ್ಲು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ಎನ್. ನಾಗರಾಜು, ಕಾರ್ಯದರ್ಶಿ ಸಿ.ಈ. ಭರತೇಶ್, ಉಪಾಧ್ಯಕ್ಷ ಸಿ.ಪಿ. ವಿರೂಪಾಕ್ಷ, ಖಜಾಂಚಿ ಸಿ.ಆರ್. ಮಂಜುನಾಥ್ ಸುಗ್ಗಿಯ ಉಸ್ತುವಾರಿ ವಹಿಸಿದ್ದರು. ಉತ್ಸವದ ನಂತರ ಅನ್ನದಾನ ನಡೆಯಿತು.ಸುಂಟಿಕೊಪ್ಪ: ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವ ಅಂಗವಾಗಿ ಧ್ವಜಾರೋಹಣವನ್ನು ಬಳ್ಳಾರಿ ಧರ್ಮಕ್ಷೇತ್ರದ ಹಟ್ಟಿ ಪವಿತ್ರ ದೇವಾಲಯದ ಧರ್ಮಗುರುಗಳಾದ ರೆ.ಫಾ. ವಿಜಯಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ನೆರವೇರಿಸಿದರು.

ಗುರುವಾರದಂದು ಸಂಜೆ ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣದ ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ವಾರ್ಷಿಕೋತ್ಸವದ ೩ ದಿನಗಳ ಕಾಲ ಆಡಂಬರ ವಿಶೇಷ ಬಲಿಪೂಜೆಗೆ ಚಾಲನೆಯನ್ನು ನೀಡಿದರು.

ತಾ. ೪ ರಂದು ಸಂಜೆ ೫.೩೦ ಗಂಟೆಗೆ ಸಂತ ಅಂತೋಣಿಯವರ ಹಬ್ಬದ ಅಂಗವಾಗಿ ಆಡಂಬರ ಗಾಯನ ಬಲಿಪೂಜೆಯನ್ನು ಬರ್ನಾಡ್ ಮೊರಾಸ್ ನೆರವೇರಿಸಿದರು. ಪಾಲಕ ಸಂತ ಅಂತೋಣಿಯವರ ತೇರಿನ ಮೆರವಣಿಗೆಯ ನಂತರ ಪರಮ ಪ್ರಸಾದ ಆರಾಧನೆಯನ್ನು ಮೈಸೂರು ಧರ್ಮಕ್ಷೇತ್ರದ ಆಡಳಿತ ಧರ್ಮಾಧಿಕಾರಿಗಳು ನೆರವೇರಿಸಿದರು ಎಂದು ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ತಿಳಿಸಿದ್ದಾರೆ.

ತಾ. ೫ ರಂದು ಶ್ರೀ ಅಗ್ನಿ ಚಾಮುಂಡಿ ತೆರೆ ಮಹೋತ್ಸವ

ವೀರಾಜಪೇಟೆ: ವೀರಾಜಪೇಟೆ ತಾಲೂಕು ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಶ್ರೀ ಅಗ್ನಿ ಚಾಮುಂಡಿ ೩೧ನೇ ವಾರ್ಷಿಕ ತೆರೆ ಮಹೋತ್ಸವ ತಾ. ೫ ಮತ್ತು ತಾ. ೬ ರಂದು ನಡೆಯಲಿದೆ.

ತಾ. ೫ ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರಧಾನ ಹೋಮ, ನವ ಕಲಶ ಮತ್ತು ಆಶ್ಲೇಷ ಬಲಿ, ೧೦ ಗಂಟೆಗೆ ತಕ್ಕರ ಮನೆಯಿಂದ ಭಂಡಾರ ತರುವುದು, ೧೧.೩೦ಕ್ಕೆ ನಾಗದೇವರಿಗೆ ವಿಶೇಷ ಪೊಜೆ, ನಂತರ ದೇವರ ದರ್ಶನ, ೧೨ ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಹಾಲಿನ ಅಭಿಷೇಕ ಪೂಜೆಯೊಂದಿಗೆ ಮಹಾಪೂಜೆ ಸಲ್ಲಿಕೆಯಾಗಲಿದೆ. ಬಳಿಕ ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಗೆ ತೆರೆ ಮಹೋತ್ಸವ ಆರಂಭವಾಗಲಿದೆ. ೮ ಗಂಟೆಗೆ ಕೊಟ್ಟಿ ಹಾಡುವುದು, ೯ ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡುವುದು, ನಂತರ ಕುಟ್ಟಿಚಾತ, ಕಾಲಭೈರವ ಗುಳಿಗ ನುಚ್ಚುಟ್ಟಿ ತೆರೆಗಳು ನಡೆಸಲಾಗುವುದು. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

ತಾ. ೬ ರಂದು ಬೆಳಿಗ್ಗೆ ೮.೩೦ಕ್ಕೆ ವಿಷ್ಣು ಮೂರ್ತಿ ತೆರೆ ಮೇಲೇರಿ ಬೀಳುವುದು. ೧೦ ರಿಂದ ೧೧ ಗಂಟೆಯ ಮಧ್ಯೆ ಶುದ್ಧ ಕಲಶ ಗುಳಿಗ ತೆರೆ ೧೨ ಗಂಟೆಗೆ ದೇವಿಗೆ ಮಹಾಪೂಜೆ ಸಲ್ಲಿಕೆಯಾಗಲಿದೆ. ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ, ೨ ಗಂಟೆಗೆ ಬಸಿರಿ ತೆರೆ (ಚಾಮುಂಡಿ ತೆರೆ) ಹೊರಡಲಿದೆ. ಸಂಜೆ ೪ ಗಂಟೆಗೆ ಹರಕೆ ಒಪ್ಪಿಸುವುದು ನಡೆಯಲಿದೆ.ಮಡಿಕೇರಿ: ಇಂದಿರಾನಗರದ ಕುಂದುರುಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ ೧೩೫ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಾರ್ಷಿಕೋತ್ಸವದ ಅಂಗವಾಗಿ ನಗರದ ಮುಖ್ಯ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು. ನಂತರ ಮನೆ ಮನೆಯಿಂದ ಪೂಜೆಯನ್ನು ದೇವಾಲಯಕ್ಕೆ ತಂದೊಪ್ಪಿಸಲಾಯಿತು.

ರಾತ್ರಿ ಹೂವಿನ ವರ ಬೇಡುವುದು, ಮಹಿಳೆಯರು ಮನೆ, ಮನೆಯಿಂದ ಆರತಿಯನ್ನು ದೇವಾಲಯಕ್ಕೆ ತಂದೊಪ್ಪಿಸಿದರು. ದೇವಿಗೆ ಮಹಾ ಮಂಗಳಾರತಿ ಮತ್ತು ಮಹಾಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು. ಬಳಿಕ ಶ್ರೀ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸಲಾಯಿತು. ಇದೇ ಸಂದರ್ಭ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಹುಲುಸೆ ಗ್ರಾಮದೇವತೆ ದೊಡ್ಡಮ್ಮ ಉತ್ಸವ

ಕಣಿವೆ: ಇಲ್ಲಿನ ಹುಲುಸೆ ಗ್ರಾಮದ ಗ್ರಾಮದೇವತೆ ಬನದಲ್ಲಿನ ದೊಡ್ಡಮ್ಮ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಹುಲುಸೆ ಗ್ರಾಮದ ಬಸವೇಶ್ವರ ದೇವಾಲಯ ದಿಂದ ಕಾವೇರಿ ನದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಿ ದೇವಾಲಯದ ಮಾರ್ಗವಾಗಿ ಮೆರವಣಿಗೆಯಲ್ಲಿ ಹಣ್ಣುಕಾಯಿ ತುಂಬಿದ ಹಣ್ಣು ಹೆಡುಗೆಯೊಂದಿಗೆ ಚಂಡೆ ಹಾಗೂ ಮಂಗಳ ವಾದ್ಯಗಳೊಂದಿಗೆ ಬನದ ದೇವಾಲಯಕ್ಕೆ ತಂದು ಧಾರ್ಮಿಕ ಪೂಜೆಗಳೊಂದಿಗೆ ಪೂಜೆ ನೆರವೇರಿಸಲಾಯಿತು.

ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ದೇವಾಲಯದ ಮುಂಬದಿ ನಿರ್ಮಿಸಿದ್ದ ಕೊಂಡೋತ್ಸವದಲ್ಲಿ ಹರಕೆ ಹೊತ್ತ ಭಕ್ತಾದಿಗಳು ಮಕ್ಕಳಾದಿಯಾಗಿ ಎಲ್ಲರೂ ಕೂಡ ಬರಿಗಾಲಲ್ಲಿ ತುಳಿದು ಹರಕೆ ತೀರಿಸಿದರು.

ಗುಮ್ಮನಕೊಲ್ಲಿ ಬಸವೇಶ್ವರ ದೇವಾಲಯದ ಅರ್ಚಕರಾದ ಚಂದ್ರಶೇಖರ್ ಶಾಸ್ತಿçಪೂಜಾ ವಿದಿಗಳನ್ನು ನೆರವೇರಿಸಿದರು. ಉತ್ಸವದ ಅಂಗವಾಗಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಮದ್ದುಗುಂಡು ಉತ್ಸವ ಭಕ್ತರ ಗಮನಸೆಳೆಯಿತು.

ದೇವಾಲಯದ ಸಮಿತಿ ಅಧ್ಯಕ್ಷ ಹೆಚ್.ಎನ್. ಶಿವನಂಜಪ್ಪ, ಕಾರ್ಯದರ್ಶಿ ಶಂಕರಾಚಾರಿ, ಊರಿನ ಹಿರಿಯರಾದ ಶಿವರುದ್ರಪ್ಪ ಕೆಂಡ ಕೊಂಡೋತ್ಸವ ನಿರ್ವಹಿಸಿದರು. ಸದಸ್ಯರಾದ ಹೆಚ್.ಸಿ. ರವಿ, ಹೆಚ್.ಬಿ. ಸೋಮಶೇಖರ್, ಹೆಚ್.ಎಸ್. ಬಸಪ್ಪ, ಹೆಚ್.ಕೆ. ನಂಜುAಡ, ಹೆಚ್.ಬಿ. ಮಹದೇವಪ್ಪ, ಹೆಚ್.ಎ. ರವಿ, ದಿನೇಶ್, ಹೆಚ್.ಇ. ರಾಜು, ಹೆಚ್.ಎಸ್. ಮಲ್ಲಿಕಾರ್ಜುನ, ಹೆಚ್.ಬಿ. ಚಂದ್ರಪ್ಪ, ಹೆಚ್.ವಿ. ಸೋಮಚಾರಿ ಹಾಜರಿದ್ದರು.ಸೋಮವಾರಪೇಟೆ: ಪಟ್ಟಣದ ಚೌಡೇಶ್ವರಿ ಬ್ಲಾಕ್‌ನ ಶ್ರೀ ಚೌಡೇಶ್ವರಿ ದೇವಾಲಯದ ೨೪ನೇ ವರ್ಷದ ವಾರ್ಷಿಕ ಮಹಾ ಪೂಜೋತ್ಸವÀ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಿಗ್ಗೆ ೫ ರಿಂದ ೬ರವರೆಗೆ ಮಹಾಪೂಜೆ ನಂತರ ಅರ್ಚಕ ಪ್ರಭಾಕರ್ ಅವರ ನೇತೃತ್ವದಲ್ಲಿ ದೇವಿಗೆ ಅಭಿಷೇಕಗಳು ನಡೆದವು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಸುಹಾಸ್ ಗೌಡ, ಕಾರ್ಯದರ್ಶಿ ರಕ್ಷಿತ್, ಖಜಾಂಚಿ ವೀಕ್ಷಿತ್ ಗೌಡ ಮತ್ತು ಪದಾಧಿಕಾರಿಗಳು ಇದ್ದರು. ಸುಂಟಿಕೊಪ್ಪ: ಐಗೂರು ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಉತ್ಸವ ವಿಜೃಂಭಣೆಯಿAದ ನೆರವೇರಿತು. ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ ನಡೆಯಿತು.

ಮಲಯರಕಲ್ ಮತ್ತು ಮುತ್ತಪ್ಪನ್ ವೆಳ್ಳಾಟಂ, ಗುಳಿಗಪ್ಪನ ದೇವಾಲಯದಿಂದ ಚಂಡೆ ಮೇಳದೊಂದಿಗೆ ದೈವ ನರ್ತನ ನಡೆಯಿತು, ತಿರುವಪ್ಪನ್ ವೆಳ್ಳಾಟಂ ಮತ್ತು ಕಲಶ ಆಗಮನದ ನಂತರ ರಾತ್ರಿ ೮.೩೦ ಗಂಟೆಗೆ ಅನ್ನದಾನದಲ್ಲಿ ನೂರಾರು ಭಕ್ತರು ಪಾಲ್ಗೊಂಡರು.

ಸೋಮವಾರ ಬೆಳಿಗ್ಗೆ ಗುಳಿಗನ ಕೋಲ, ಮುತ್ತಪ್ಪ ದೇವರ ಕೋಲ, ಕುಟ್ಟಿಚಾತನ್ ಕೋಲ, ಪೋದಿ ಕೋಲ, ಗುರು ಶ್ರೀ ತರ್ಪಣ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಮುತ್ತಪ್ಪ ದೇವರ ಉತ್ಸವದಲ್ಲಿ ತಮ್ಮ ಹರಕೆಗಳನ್ನು ದೈವಕ್ಕೆ ಅರ್ಪಿಸಿ ತಮ್ಮ ಬೇಡಿಕೆಗಳನ್ನು ದೈವಗಳಲ್ಲಿ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ಈ ಸಂದರ್ಭ ಸಮಿತಿ ಅಧ್ಯಕ್ಷರು ಸದಸ್ಯರು ಹಾಜರಿದ್ದರು.

ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ವಿಶೇಷ ಬಲಿಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆ ದೇವಿ-ದೈವದ ಸ್ಥಾನದಲ್ಲಿ ದೇವಿ-ದೈವಕ್ಕೆ ವಿಶೇಷ ಅಲಂಕಾರ ಮಾಡಿ ಪನಿವಾರ, ಸೀಯಾಳ, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿದರು. ಮಹಾಮಂಗಳಾರತಿಯಾಗಿ ತೀರ್ಥ-ಪ್ರಸಾದ ವಿನಿಯೋಗವಾಯಿತು. ಪ್ರಧಾನ ಅರ್ಚಕ ರಾಜೇಶ್ ಕೋಟ್ಯಾನ್ ಮುಖ್ಯ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಅರ್ಚಕರಾದ ವಿಮಲೇಶ್ಚಂದ್ರ, ಪ್ರಕಾಶ್ಚಂದ್ರ ಹಾಗೂ ಸಂತೋಷ್ ಪೂಜಾ ಕೈಂಕರ್ಯದಲ್ಲಿ ನೆರವಾದರು. ಶ್ರದ್ಧಾಭಕ್ತಿಯಿಂದ ಪಾಲ್ಗೊಂಡ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.ಕುಶಾಲನಗರ: ಕುಶಾಲನಗರದ ಸಾಯಿ ಬಡಾವಣೆ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಗಣಪತಿ, ಶ್ರೀ ದತ್ತಾತ್ರೇಯ, ಶ್ರೀ ನಾಗದೇವತಾ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮವು ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ನಡೆಯಿತು.

ಎರಡು ದಿನಗಳ ಕಾಲ ವಾಸ್ತು ಹೋಮ, ವಾಸ್ತು ಬಲಿ, ರಕ್ಷೋಘ್ನ ಹೋಮ, ಪ್ರಕಾರ ಬಲಿ, ಬಿಂಬಶುದ್ಧಿ, ಆದಿವಾಸೆ ಪೂಜೆ ಕಾರ್ಯಕ್ರಮಗಳು ನಡೆದವು.

ವಿಗ್ರಹ ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮಗಳಲ್ಲಿ, ಸಾಯಿಬಾಬಾ ವಿಗ್ರಹದ ಎರಡು ಬದಿಗಳಲ್ಲಿ ಗಣಪತಿ ಮತ್ತು ದತ್ತಾತ್ರೇಯರ ಅಮೃತ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ, ಅಮೃತಶಿಲಾ ಕಟಾಂಜನ, ಪಾದುಕೆ ಪ್ರತಿಷ್ಠಾಪನೆ, ಕೂರ್ಮ ಪ್ರತಿಷ್ಠಾಪನೆ, ಬಾಬಾ ಉತ್ಸವ ಮೂರ್ತಿಯ ಡೋಲಿ ಅನಾವರಣ ಕಾರ್ಯಗಳು ನಡೆದವು.

ಬಾಬಾ ದೇವಾಲಯದ ಹೊರ ಆವರಣದಲ್ಲಿ, ನಾಗ ಪ್ರತಿಷ್ಠೆ, ಬೇವಿನ ವೃಕ್ಷದ ಅಡಿಯಲ್ಲಿ ಮೂಲ ಬಾಬಾ ಪ್ರತಿಷ್ಠಾಪನೆ, ಹಾಗೂ ಮೂಲ ಶಿರಡಿ ಸಾಯಿಬಾಬಾ ಕ್ಷೇತ್ರದಲ್ಲಿ ಇರುವಂತೆ ವರ್ಷದ ೩೬೫ ದಿನಗಳು ನಿರಂತರವಾಗಿ ಇರುವ ಬೆಂಕಿಕೊAಡ ಪ್ರತಿಷ್ಠಾಪನಾ ಅನಾವರಣ ಕಾರ್ಯಕ್ರಮಗಳು ಶಾಸ್ತೊçÃಕ್ತವಾಗಿ ಜರುಗಿದವು.

ಮಧ್ಯಾಹ್ನ ಮಹಾಆರತಿ ನಂತರ ಪ್ರಸಾದ ವಿನಿಯೋಗ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಪೂಜಾ ಕಾರ್ಯಕ್ರಮಗಳು ಅರ್ಚಕ ಶ್ರೀನಿವಾಸ ಭಟ್ ಮತ್ತು ತಂಡದ ನೇತೃತ್ವದಲ್ಲಿ ನಡೆದವು.

ದೇವಾಲಯದ ಧರ್ಮದರ್ಶಿ ಧರೇಶ್ ಬಾಬು ಮತ್ತು ದಂಪತಿ, ಟ್ರಸ್ಟ್ ಸದಸ್ಯರಾದ, ಮುನಿಸ್ವಾಮಿ, ಓಬಳ ರೆಡ್ಡಿ, ಶ್ರೀನಿವಾಸ್, ಸಮಾಜ ಸೇವಕರಾದ ನಂಜುAಡಸ್ವಾಮಿ, ಹೆಚ್.ಕೆ. ನಟೇಶ್ ಗೌಡ, ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರು, ಸದಸ್ಯರಾದ ಡಿ.ಕೆ. ತಿಮ್ಮಪ್ಪ, ನಿರ್ಗಮಿತ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ದಂಪತಿ, ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದರು.ಐಗೂರು: ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣಮೂರ್ತಿ ಅಮ್ಮನವರ ೪೯ನೇ ವರ್ಷದ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನಡೆದು ಸಂಪನ್ನಗೊAಡಿತು.

ದೇವಾಲಯದಲ್ಲಿ ಶಾಸ್ತೊçÃಕ್ತವಾಗಿ ಗಣಪತಿ ಹೋಮ, ಶುದ್ಧಿಪುಣ್ಯ, ನೈವೇದ್ಯ ಪೂಜೆ, ವಸ್ತçದಾನ ಮತ್ತು ಕಲಶದ ಮೆರವಣಿಗೆಗಳು ನಡೆದು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಿದರು. ಸುಳ್ಯದ ಬೊಳಿಯ ಮಜಲಿನ ಜಯರಾಮ್ ತಂಡದವರ ಕೋಲ ಗಣಗಳಾದ, ಅಣ್ಣಪ್ಪ ಸ್ವಾಮಿ, ಆದಿಶಕ್ತಿ ಮಹಾತಾಯಿ, ಪಾಷಾಣಮೂರ್ತಿ, ಕಲ್ಕುಡ ದೈವ, ಪಂಜುರ್ಲಿ ದೈವ, ಕೊರ್ತಿ ದೈವ, ಧರ್ಮ ದೈವ ಮತ್ತು ಭದ್ರಕಾಳಿ ದೈವಗಳ ಆಶೀರ್ವಾದ ಪಡೆದ ಭಕ್ತರು ನಾಡಿನ ಮಳೆ, ಬೆಳೆ ಸುಬೀಕ್ಷೆಗಾಗಿ ಹರಕೆ ಸಲ್ಲಿಸಿದರು.

ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ತುಳುನಾಡು, ಮೈಸೂರು ಮತ್ತು ಬೆಂಗಳೂರಿನ ಭಕ್ತರು ಎಡೆಪ್ರಸಾದ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯ ದಿನ ದೈವನಡೆಯನ್ನು ಮುಚ್ಚುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.ಕಣಿವೆ: ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದ ಗ್ರಾಮದೇವತೆ ಹುಚ್ಚಮ್ಮ ಹಾಗೂ ಮಾರಮ್ಮ ದೇವರ ನೂತನ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ನೂತನ ದೇವಾಲಯದ ೪೮ನೇ ದಿನದ ಬಲಿಪೂಜೆ ಕಾರ್ಯಕ್ರಮವೂ ನಡೆಯಿತು. ನಂತರ ಶಾಲಾ ಮೈದಾನದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ದೇವಾಲಯ ಸಮಿತಿ ಅಧ್ಯಕ್ಷ ಕೆ. ವಿಶ್ವನಾಥ್, ಕಾರ್ಯದರ್ಶಿ ದಂಡಿನ ನವೀನ್, ಖಜಾಂಚಿ ಜಿ.ಜೆ. ಗಣಪತಿ, ಗೌರವಾಧ್ಯಕ್ಷ ಬಿ.ಜೆ. ರವಿಕುಮಾರ್, ಉಪಾಧ್ಯಕ್ಷ ಜಯರಾಜು ಸದಸ್ಯರಾದ ರವಿ, ಸ್ವಾಮಿಗೌಡ, ನಿಂಗರಾಜು, ಲೋಕೇಶ್, ಗಣೇಶ್, ಎಂ.ಆರ್. ಭರತ್, ಮಹೇಶ್, ಜಿ.ಟಿ. ಮಹೇಶ್, ಪ್ರಸನ್ನ, ಮಂಜು, ಹೆಚ್.ಜಿ. ಮಂಜುನಾಥ್ ಇದ್ದರು. ಕುಶಾಲನಗರದ ಕನ್ನಿಕಾ ಪರಮೇಶ್ವರಿ ದೇವಾಲಯದ ಅರ್ಚಕ ಗಿರೀಶ್ ಭಟ್, ಮುಳ್ಳುಸೋಗೆಯ ಶಿವಣ್ಣ ಪೂಜಾ ವಿಧಿ ನೆರವೇರಿಸಿದರು.ವಿಜೃಂಭಣೆಯಿAದ ಜರುಗಿದ ದೇವರ ಉತ್ಸವ

ಚೆಯ್ಯಂಡಾಣೆ: ಸ್ಥಳೀಯ ಚೇಲಾವರ ಗ್ರಾಮದ ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನದ ೧೫ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ೪ ದಿನಗಳು ವಿಜೃಂಭಣೆಯಿAದ ನಡೆಯಿತು. ಬಾಚಮಂಡ ತಕ್ಕರ ಮನೆಯಿಂದ ಭಂಡಾರ ಆಗಮಿಸುವುದರ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಿತು.

ರಾತ್ರಿ ಅಂದಿ ಬೊಳಕ್, ತೂಚಂಬಲಿ ಮತ್ತು ದೇವರು ಹೊರಗೆ ಬರುವುದು ಹಾಗೂ ಮಹಾಪೂಜೆ ನಡೆಯಿತು. ದೇವರ ನೃತ್ಯ, ವಿಶೇಷ ಪೂಜೆ, ಎತ್ತುಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮಹಾ ಪೂಜೆ ನಂತರ ಅನ್ನದಾನ, ದೇವರು ಹೊರಗೆ ಬರುವುದು ಮತ್ತು ನೆರಪು ನೃತ್ಯ, ಪೋನ್ನೊಲ ಸಾರ್ಥಾವು ದೇವಸ್ಥಾನಕ್ಕೆ ಮಲೆ ಮುರಿಯುವುದು, ಪೋನ್ನೊಲ ದೇವಸ್ಥಾನದಲ್ಲಿ ಪೂಜೆ, ಮಂಟಪದಲ್ಲಿ ವಸಂತ ಪೂಜೆ ರಾತ್ರಿ ಮಹಾಪೂಜೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು. ವಿಶೇಷ ಪೂಜೆ ಮಧ್ಯಾಹ್ನ ಮಹಾಪೂಜೆ, ವಾರ್ಷಿಕ ಮಹಾಸಭೆ, ದೇವರು ಅವಭೃತ ಸ್ನಾನಕ್ಕೆ ಹೊರಟು ನಂತರ ದೇವರ ನೃತ್ಯ, ಮಹಾಪೂಜೆ, ಅನ್ನದಾನ ನಡೆಯಿತು. ಭಂಡಾರ ಲೆಕ್ಕ, ಶುದ್ಧ ಕಲಶ ಸಮಾರಾಧನೆ ಪೂಜೆ, ಮಂತ್ರಾಕ್ಷತೆ, ದೇವತಕ್ಕರ ಮನೆಗೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಿತು.

ಪೂಜಾ ಕೈಂಕರ್ಯದ ನೇತೃತ್ವವನ್ನು ಅರ್ಚಕ ಅಖಿಲೇಶ್ ವಹಿಸಿರು, ದೇವರ ನೃತ್ಯದ ನೇತೃತ್ವವನ್ನು ಮಲೆತೀರಿಕೆ ದೇವಸ್ಥಾನದ ಅರ್ಚಕÀ ಪ್ರದೀಪ್ ವಹಿಸಿದ್ದರು. ವಿಶೇಷ ಚಂಡೆ ಮೇಳ ನೋಡುಗರ ಗಮನ ಸೆಳೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು ಈ ಸಂದರ್ಭ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ಗ್ರಾಮಸ್ಥರು, ಸಾರ್ವಜನಿಕ ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದರು.