ಗೋಣಿಕೊಪ್ಪಲು, ಮೇ ೬ : ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩೦ನೇ ದಿನ ೮ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಕೈಬಿಲಿರ ಹಾಗೂ ಮೋಟನಾಳಿರ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಮೋಟನಾಳಿರ ತಂಡವು ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೬೮ ರನ್ ಗಳಿಸಿತು. ನಿಗದಿತ ರನ್ ಅನ್ನು ಬೇಧಿಸುವ ಪ್ರಯತ್ನ ಮಾಡಿದ ಕೈಬಿಲಿರ ತಂಡ ೨ ವಿಕೆಟ್ ಕಳೆದುಕೊಂಡು ೫೩ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.
ಎರಡನೇ ಪಂದ್ಯವು ಅರಮಣಮಾಡ (ಬೇಗೂರ್) ಹಾಗೂ ಕೋಡಿರ ತಂಡದ ನಡುವೆ ನಡೆಯಿತು. ಕೋಡಿರ ತಂಡ ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೬೪ ರನ್ ಗಳಿಸಿ, ಎದುರಾಳಿ ತಂಡಕ್ಕೆ ಸವಾಲು ನೀಡಿತು. ಉತ್ತಮ ಬ್ಯಾಟಿಂಗ್ ಆರಂಭಿಸಿದ ಅರಮಣಮಾಡ ತಂಡವು ೫ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೬೫ ರನ್ ಗಳಿಸುವ ಮೂಲಕ ಕೋಡಿರ ತಂಡವನ್ನು ಸೋಲಿಸಿ, ಗೆಲುವಿನ ನಗೆ ಬೀರಿತು.
ಮೂರನೇ ಪಂದ್ಯವು ಮುಕ್ಕಾಟಿರ (ಮಾದಾಪುರ) ತಂಡ ಹಾಗೂ ಮುದ್ದಿಯಡ ತಂಡದ ನಡುವೆ ನಡೆಯಿತು. ಮುದ್ದಿಯಡ ತಂಡ ನಿಗದಿತ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೬೨ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ಮುಕ್ಕಾಟಿರ ತಂಡವು ನಿಗದಿತ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೨೯ ಸಂಪಾದಿಸಿ ಸೋಲನ್ನು ಅನುಭವಿಸಿತು.
ನಾಲ್ಕನೇ ಪಂದ್ಯವು ಮಣವಟ್ಟಿರ ಹಾಗೂ ತಾತಪಂಡ ತಂಡದ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ತಾತಪಂಡ ತಂಡವು ನಿಗದಿತ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೭೫ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ನಿಗದಿತ ರನ್ ಬೇಧಿಸಿದ ಮಣವಟ್ಟಿರ ತಂಡವು ಇನ್ನೂ ೨ ಬಾಲ್ ಬಾಕಿ ಇರುವಂತೆಯೇ ೫ ವಿಕೆಟ್ ಕಳೆದುಕೊಂಡು ೭೬ ರನ್ ಗಳಿಸಿ ಗೆಲುವಿನ ನಗೆ ಬೀರಿತು
ಐದನೇ ಪಂದ್ಯವು ನಡಿಕೇರಿಯಂಡ ತಂಡ ಹಾಗೂ ಕೊಚ್ಚೆರ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ನಡಿಕೇರಿಯಂಡ ತಂಡವು ೧ ವಿಕೆಟ್ ಕಳೆದುಕೊಂಡು ೭೯ ರನ್ ಗಳಿಸಿ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ನೀಡಿತು. ಈ ರನ್ ಬೇಧಿಸುವ ಪ್ರಯತ್ನ ಮಾಡಿದ ಕೊಚ್ಚೆರ ತಂಡವು ೫ ವಿಕೆಟ್ ಕಳೆದುಕೊಂಡು ೫೧ ರನ್ ಸಂಪಾದಿಸಿ ಸೋಲನ್ನು ಅನುಭವಿಸಿತು.
ಆರನೇ ಪಂದ್ಯವು ನಾಪಂಡ ತಂಡ ಹಾಗೂ ಮುಕ್ಕಾಟಿರ (ಹರಿಹರ) ತಂಡದ ನಡುವೆ ನಡೆಯಿತು. ಬ್ಯಾಟಿಂಗ್ ಆಯ್ದುಕೊಂಡ ಮುಕ್ಕಾಟಿರ ತಂಡ ೧ ವಿಕೆಟ್ ಕಳೆದುಕೊಂಡು ಭರ್ಜರಿ ೧೨೭ ರನ್ ಸಂಪಾದಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ನಾಪಂಡ ತಂಡವು ಬ್ಯಾಟಿಂಗ್ ಆರಂಭಿಸಿ ನಿಗದಿತ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೪೯ ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.
ಏಳನೇ ಪಂದ್ಯವು ಮಲ್ಲಜಿರ ಹಾಗೂ ಕೋಳೆರ ತಂಡದ ನಡುವೆ ನಡೆಯಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಮಲ್ಲಜಿರ ತಂಡವು ೨ ವಿಕೆಟ್ ಕಳೆದುಕೊಂಡು ೬೭ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಕೋಳೆರ ತಂಡವು ೫.೪ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೬೮ ರನ್ ಸಂಪಾದಿಸಿ ಗೆಲುವಿನ ನಗೆ ಬೀರಿತು.
ಎಂಟನೇ ಪಂದ್ಯವು ಓಡಿಯಂಡ ತಂಡ ಹಾಗೂ ಜಮ್ಮಡ (ಕೈಕೇರಿ) ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಜಮ್ಮಡ ತಂಡವು ೫ ವಿಕೆಟ್ ಕಳೆದುಕೊಂಡು ೪೯ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಓಡಿಯಂಡ ತಂಡವು ಬ್ಯಾಟಿಂಗ್ ಆರಂಭಿಸಿ ೫.೧ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೫೦ ರನ್ ಗಳಿಸುವ ಮೂಲಕ ಜಮ್ಮಡ ತಂಡವನ್ನು ಸೋಲಿಸಿತು.