ಮಡಿಕೇರಿ, ಮೇ ೬ : ಮೂರ್ನಾಡು ೩೩/೧೧ ಕೆ.ವಿ ವಿದ್ಯುತ್ ಉಪಕೇಂದ್ರದಿAದ ಹೊರಹೊಮ್ಮುವ ಎಫ್೪ ಮರಗೋಡು ಫೀಡರ್ನಲ್ಲಿ ತಾ. ೭ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಮಳೆಗಾಲ ಮುಂಜಾಗೃತಾ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಐಕೊಳ, ಕಟ್ಟೆಮಾಡು, ಮರಗೋಡು, ಹುಲಿತಾಳ, ಹೊಸ್ಕೇರಿ, ಅರೆಕಾಡು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.