ಮಡಿಕೇರಿ, ಮೇ ೬: ಇದೇ ಮೊದಲ ಬಾರಿಗೆ ಎಸ್.ಇ.ಎಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಬೇತ್ರಿ ಸಂಘವು ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯನ್ನು ೪೦ ವರ್ಷ ಮೇಲ್ಪಟ್ಪ ಪುರುಷರಿಗೆ ತಾ. ೨೪ ಮತ್ತು ೨೫ರಂದು ಬೇತ್ರಿಯಲ್ಲಿ ಆಯೋಜಿಸಿದೆ. ಕೊಡಗು ಜಿಲ್ಲೆಯ ಮುಸ್ಲಿಂ ಸಮುದಾಯದಲ್ಲಿ ೪೦ ವರ್ಷ ಮೇಲ್ಪಟ್ಟ ಅನುಭವಿ ವಾಲಿಬಾಲ್ ಆಟಗಾರರು ಇದ್ದು, ಅವರಿಗೆ ವೇದಿಕೆ ಒದಗಿಸಿಕೊಡುವ ನಿಟ್ಟಿನಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮೇ ೨೫ರಂದು ಹಿಂದೂ ಹಾಗೂ ಮುಸ್ಲಿಂ ಸಹೋದರ ಬಾಂಧವರ ನಡುವೆ ಸೌಹಾರ್ದ ಪಂದ್ಯ ಕೂಡ ನಡೆಯಲಿದ್ದು, ತಂಡವನ್ನು ನೋಂದಾಯಿಸಲು ೮೯೭೧೨೪೨೧೭೨ ರಶೀದ್ ಹಾಗೂ ೯೮೪೫೭೬೨೮೦೦ ಕಬೀರ್ ಇವರನ್ನು ಸಂಪರ್ಕಿಸಬಹುದಾಗಿದೆ.