ಸುಂಟಿಕೊಪ್ಪ,ಮೇ.೫: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ವಾರ್ಷಿಕೋತ್ಸವ ಅಂಗವಾಗಿ ತಾ ೧ ರಂದು ಧ್ವಜಾರೋಹಣವನ್ನು ಬಳ್ಳಾರಿ ಧರ್ಮಕ್ಷೇತ್ರದ ಹಟ್ಟಿ ಪವಿತ್ರ ದೇವಾಲಯದ ಧರ್ಮಗುರು ರೇ.ಫಾ.ವಿಜಯಕುಮಾರ್ , ಆರಾಧನೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ವಂ.ಗುರು ರೇ.ಫಾ.ವಿಜಯಕುಮಾರ್, ಆನಂದ್ ಪ್ರಸಾದ್, ಅನಿಲ್ ಹಾಗೂ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ನೇರವೇರಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ತಾ.೨ ರಂದು ಸಂಜೆ ಬೆಂಗಳೂರು ಹೋಲಿ ಘೋಸ್ಟ್ ದೇವಾಲಯದ ಧರ್ಮಗರುಗಳಾದ ಸಿಲುವೈ ಮುತ್ತು ಅವರು ವಿಶೇಷ ಪೂಜೆ ಪ್ರಭೋದನೆ ನೀಡಿದ್ದರು.
ತಾ. ೩ ರಂದು ಸಂಜೆ ಮೈಸೂರಿನ ಪುಷ್ಪಗಿರಿ ಬಾಲಯೇಸುವಿನ ದೇವಾಲಯದ ಧರ್ಮಗುರು ಮರಿಯ ಕ್ಷೇವಿಯರ್ ಹಾಗೂ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ಜೆರಾಲ್ಡ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ಆಡಂಬರ ದಿವ್ಯ ಬಲಿಪೂಜೆ ಪ್ರಭೋದನೆ ಮತ್ತು ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಸಂಸ್ಕಾರ ವಿತರಿಸಿದ್ದರು. ತಾ.೪ ರಂದು ಮಧ್ಯಾಹ್ನದ ವೇಳೆಯಲ್ಲಿ ಅಂಬು ಕಾಣಿಕೆಯ ಹರಕೆಯನ್ನು ಭಕ್ತಾದಿಗಳು ಸಲ್ಲಿಸಿದ್ದರು.
ಸಂಜೆ ೫.೩೦ ಕ್ಕೆ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ಹಾಗೂ ಕ್ರೆöÊಸ್ತ ಭಕ್ತಾದಿಗಳು ಕನ್ನಡ ವೃತ್ತದಲ್ಲಿ ಮೈಸೂರು ಧರ್ಮಕ್ಷೇತ್ರದ ವಿಶ್ರಾಂತ ಮಹಾ ಧರ್ಮಾಧ್ಯಕ್ಷರು ಹಾಗೂ ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಬರ್ನಾಡ್ ಮೋರಸ್ ಅವರನ್ನು ಕನ್ನಡ ವೃತ್ತದಲ್ಲಿ ಸ್ವಾಗತಿಸಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಕರೆದೊಯ್ಯಲಾಯಿತು. ಹಬ್ಬದ ಅಡಂಬರ ಗಾಯನ ದಿವ್ಯ ಬಲಿಪೂಜೆ ಹಾಗೂ ಮಕ್ಕಳಿಗೆ ಧೃಢೀಕರಣ ಸಂಸ್ಕಾರವನ್ನು ನೇರವೇರಿಸಿದರು. ಮಡಿಕೇರಿ ವಲಯದ ಗುರುಗಳಾದ ಫಾದರ್ ಜಾರ್ಜ್ ದೀಪಕ್, ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ವಲಯದ ಧರ್ಮಗುರು ಜೇಮ್ಸ್ ಡೋಮಿನಿಕ್ ಇತರ ಧರ್ಮ ಕೇಂದ್ರಗಳಿAದ ಆಗಮಿಸಿದ್ದ ಧರ್ಮಗುರುಗಳು ಒಗ್ಗೂಡಿ ಆಡಂಬರ ಬಲಿಪೂಜೆಯನ್ನು ನೇರವೇರಿಸಿದರು.
ಬೀಟಿಕಟ್ಟೆ ದೇವಾಲಯದ ಜಾನ್ ಡಿಕುನ್ಹ, ಕೂಡಿಗೆ ಚಾರ್ಲ್ಹ್ ನರೋನ್ಹ, ಪೌಲ್ ಹೇರ್ಸ್, ೭ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್), ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ರೇ. ಫಾ. ಮಾರ್ಟಿನ್, ಮಾದಾಪುರ ದೇವಾಲಯದ ರೇ.ಫಾ. ಸೂಸೈರಾಜ್, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ರೇ. ಫಾ. ಅವಿನಾಶ್, ರಾಯಲ್ ಕ್ರಾಸ್ತಾ, ಹ್ಯಾರಿಟೇರಿ, ಪುಷ್ಪಗಿರಿ ಬಾಲ ಯೇಸು ದೇವಾಲ ಯದ ಮರಿಯನ್ ಕ್ಷೇವಿಯರ್, ರೇ.ಫಾ.ಚಾಲ್ಸ್ ಹಾಗೂ ಸಂತ ಅಂತೋಣಿ ದೇವಾಲಯದ ಫಾಧರ್ ವಿಜಯಕುಮಾರ್ ಮತ್ತಿತರರು ಇದ್ದರು. (ಮೊದಲ ಪುಟದಿಂದ) ಸಂತ ಕ್ಲಾರ ಕನ್ಯಾಸ್ತಿç ಮಠದ ಕನ್ಯಾಸ್ತಿçÃಯರು, ಕುಶಾಲನಗರ, ಹೊಸಕೋಟೆ, ಸೋಮವಾರಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಕನ್ಯಾಸ್ತಿçಯರು ದೇವಾಲಯದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಪ್ರತಿಮೆಯನ್ನು ಇರಿಸಿ ಬ್ಯಾಂಡ್‌ಸೇಟ್ ನೊಂದಿಗೆ ಧರ್ಮಗುರುಗಳು, ಕ್ರೆöÊಸ್ತ ಸನ್ಯಾಸಿನಿಯರು ಸುಂಟಿಕೊಪ್ಪ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯ ಕ್ರೆöÊಸ್ತ ಬಾಂಧವರು ಪ್ರಾರ್ಥನೆ ಹಾಗೂ ಭಕ್ತಿ ಗಾಯನಗಳನ್ನು ಹಾಡುತ್ತ ಮೊಂಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ದೇವಾಲಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ಆರ್ಶೀವಚನದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊAಡಿತು. ಆಗಮಿಸಿದ ಭಕ್ತಾದಿಗಳಿಗೆ ಭೋಜನ ಏರ್ಪಡಿಸಲಾಗಿತ್ತು.