ಗೋಣಿಕೊಪ್ಪಲು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬುಡಕಟ್ಟು ಕೃಷಿಕರ ಸಂಘ ಹಾಗೂ ಕಾಫಿ ತೋಟಗಳ ಕಾರ್ಮಿಕರ ಯೂನಿಯನ್ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ಕಾರ್ಮಿಕರ ದಿನಾಚರಣೆ ನಡೆಯಿತು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸP,À ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಮಿಕರು ದೇಶದ ಆಸ್ತಿಯೊಂದಿಗೆ ದೇಶದ ದೊಡ್ಡ ಶಕ್ತಿ ಎಂದು ಬಣ್ಣಿಸಿದರು. ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವಂತಾಗಲು ಶ್ರಮಿಸಬೇಕು. ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವಂತಹ ಕೆಲಸಕ್ಕೆ ಕೈ ಹಾಕಬಾರದು. ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕೆAದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷÀ ವೈ.ಬಿ. ಗಪ್ಪು ವಹಿಸಿದ್ದರು. ಐಟಿಡಿಪಿ ಅಧಿಕಾರಿ ಹೊನ್ನೆಗೌಡ, ಮೇಲ್ವೀಚಾರಕರಾದ ಕೆ. ನಂದಿನಿ, ಕಾರ್ಮಿಕ ಅಧಿಕಾರಿ ಟಿ. ಕಾವೇರಿ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅನಂತ ಶಂಕರ್, ವೀರಾಜಪೇಟೆ ತಾಲೂಕು ಕಾರ್ಮಿಕ ನಿರೀಕ್ಷಕ ನಿಖಿಲ್ ಚಂದ್ರ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಗರದಲ್ಲಿ ಕಾರ್ಮಿಕರು ಮೆರವಣಿಗೆ ನಡೆಸಿ ಗಮನ ಸೆಳೆದರು.ಕೂಡಿಗೆ: ಕೈಗಾರಿಕಾ ಕೇಂದ್ರದಲ್ಲಿರುವ ಎಸ್.ಎಲ್.ಎನ್. ಕಾಫಿ ಸಂಸ್ಕರಣಾ ಘಟಕದ ಕೇಂದ್ರದ ಆವರಣದಲ್ಲಿ ಕಾರ್ಮಿಕ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಮಿಕ ದಿನಾಚರಣೆ ಅಂಗವಾಗಿ ಬೆಳಿಗ್ಗಿನಿಂದ ಕಾರ್ಮಿಕರಿಗೆ ಮತ್ತು ಕಾರ್ಮಿಕ ಕುಟುಂಬದವರಿಗೆ ವಿವಿಧ ಆಟೋಟಗಳ ಸ್ಪರ್ಧೆ, ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ವಿತರಿಸಲಾಯಿತು. ಆಟೋಟಗಳಲ್ಲಿ ವಿಜೇತರಾದವರಿಗೆ ಎಸ್.ಎಲ್.ಎನ್. ಪ್ರಧಾನ ವ್ಯವಸ್ಥಾಪಕ ಎಂ. ಸಾತಪ್ಪನ್ ಬಹುಮಾನ ವಿತರಣೆ ನೆರವೇರಿಸಿದರು.
ಈ ಸಂದರ್ಭ ಕಾಫಿ ಘಟಕದ ಪ್ರಧಾನ ವ್ಯವಸ್ಥಾಪಕ ಎಂ. ವಿಶ್ವನಾಥನ್, ಹಿರಿಯ ವ್ಯವಸ್ಥಾಪಕ ಎಂ.ಕೆ. ಸೋಮಯ್ಯ. ಮೇಲ್ವಿಚಾರಕ ಸಹೇಬ್ ಸಿಂಗ್, ವೇಲು, ಉದ್ಯಮಿ ವೆಂಕಟಾಚಲA, ಸಂಸ್ಥೆಯ ಹಿರಿಯ ಅಧಿಕಾರಿ ವಿಜಯಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕೊಡ್ಲಿಪೇಟೆಯಲ್ಲಿ ಸಂಜೀವಿನಿ ಸಂಘಕೊಡ್ಲಿಪೇಟೆ: ಇಲ್ಲಿನ ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.
ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಎ. ನಾಗೇಶ್ ಮಾತನಾಡಿ, ಕಾರ್ಮಿಕ ದಿನಾಚರಣೆಯ ಮಹತ್ವವನ್ನು ತಿಳಿಸಿದರಲ್ಲದೆ, ಸರ್ಕಾರಗಳು ಕಾರ್ಮಿಕರ ಅಭಿವೃದ್ಧಿಗೆ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸಂಘದ ಕಾರ್ಯದರ್ಶಿ ವೇದಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪ ಕಾರ್ಯದರ್ಶಿ ಇಪ್ತಿಕಾರ್, ಹಿರಿಯರಾದ ಕೆ.ಬಿ. ಸುಬ್ರಹ್ಮಣ್ಯಾಚಾರ್, ಸಂಘದ ಉಪಾಧ್ಯಕ್ಷ ಕೆ.ಸಿ. ಶೇಖರ್, ಖಜಾಂಚಿ ಬಶೀರ್ ಅಹಮದ್, ಪದಾಧಿಕಾರಿಗಳಾದ ಮುನ್ನ, ಮಹದೇಶ್ವರ, ಗಣೇಶ್, ಹಮೀದ್, ಆಲವಿ, ನಾಗೇಶ್ ಆಚಾರ್, ನವೀನ್ ಆಚಾರ್ ಸೇರಿದಂತೆ ಇತರರು ಇದ್ದರು.
ಕೂಡ್ಲೂರು ಕೈಗಾರಿಕಾ ಪ್ರದೇಶ ಕುಶಾಲನಗರ: ಶ್ರಮ ಸಂಸ್ಕೃತಿಯ ಸತ್ಯ ಶುದ್ಧ ಕಾಯಕ ಯೋಗಿಗಳು ದೇಶದ ಭದ್ರ ಬುನಾದಿಯಾಗಿದ್ದು, ಕಾರ್ಮಿಕರನ್ನು ಬಸವಾದಿ ಶರಣರು ಕಾಯಕ ಯೋಗಿಯೆಂದು ಗೌರವದಿಂದ ಕಂಡಿದ್ದರು.
ಈಗಲೂ ಕೂಡ ಕಾರ್ಮಿಕರನ್ನು ಮಾಲೀಕರು ಕಾಯಕ ಯೋಗಿಗಳೆಂದು ಗೌರವಿಸಬೇಕೆಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ ಹೇಳಿದರು.
ಕುಶಾಲನಗರ ತಾಲೂಕು ಕೂಡ್ಲೂರು ಕೈಗಾರಿಕಾ ಪ್ರದೇಶದ ಇಂಟಕ್ ವರ್ಕರ್ಸ್ ಯೂನಿಯನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತ್ಯಾಧುನಿಕ ಯಂತ್ರಗಳ ವ್ಯಾಪಕ ಬಳಕೆಯಿಂದಾಗಿ ಕರ್ಮದ ಜೀವನ ಶೈಲಿಯ ಕಾರ್ಮಿಕರ ಬದುಕು ಇತ್ತೀಚಿನ ದಿನಗಳಲ್ಲಿ ಬೀದಿಗೆ ಬೀಳುತ್ತಿದೆ. ಆದ್ದರಿಂದ ಸರ್ಕಾರ ಅಥವಾ ಜಿಲ್ಲಾಡಳಿತ ಕಾರ್ಮಿಕರ ಹಿತಕಾಯಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಇಂಟಕ್ ಯೂನಿಯನ್ ಕಾರ್ಯಕಾರಿ ಸಮಿತಿ ನಿರ್ದೇಶಕ ನವಗ್ರಾಮ ಮಂಜು ಮಾತನಾಡಿ, ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿನ ಕೆಲವು ಕಾಫಿ ಸಂಸ್ಕರಣಾ ಘಟಕಗಳಲ್ಲಿ ಹೊರರಾಜ್ಯದ ಕಾರ್ಮಿಕರನ್ನು ಕರೆತಂದು ಸ್ಥಳೀಯ ಕಾರ್ಮಿಕರಿಗೆ ಕೆಲಸ ತಪ್ಪಿಸಲಾಗುತ್ತಿದೆ. ಕೆಲವು ಘಟಕಗಳಲ್ಲಿ ಕಾರ್ಮಿಕರಿಗೆ ಅಗತ್ಯವಾಗಿ ನೀಡಲೇಬೇಕಾದ ಪಿ.ಎಫ್, ಇ.ಎಫ್, ರಜೆ ದಿನದ ಸಂಬಳ ಕಡಿತ ಸೇರಿದಂತೆ ಇನ್ನೂ ಮೊದಲಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಕಾರ್ಮಿಕರ ಘಟಕದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಕೂಡ್ಲೂರು ಕೈಗಾರಿಕಾ ಪ್ರದೇಶಗಳಿಗೆ ಶಿರಂಗಾಲ ಹಾಗೂ ಕುಶಾಲನಗರ ಭಾಗದ ಹಲವು ಗ್ರಾಮಗಳಿಂದ ಆಗಮಿಸುವ ಕಾರ್ಮಿಕರಿಗೆ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಹಾಗಾಗಿ ಕೂಡಿಗೆ ಅಥವಾ ಕುಶಾಲನಗರದಿಂದ ಆಟೋದಲ್ಲಿ ಬರಲು ೫೦ ರೂ ತಗುಲುತ್ತಿದೆ. ಆದ್ದರಿಂದ ಕಾರ್ಮಿಕರ ಹಿತದೃಷ್ಟಿಯಿಂದ ಬಸ್ಸುಗಳು ನಿಲ್ಲುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಮಹಿಳಾ ಕಾರ್ಮಿಕರ ಘಟಕದ ಕಾರ್ಯದರ್ಶಿ ಶಾಂತ ಅಶೋಕ್, ಖಜಾಂಚಿಯೂ ಆದ ಕೂಡುಮಂಗಳೂರು ಗ್ರಾಪಂ ಸದಸ್ಯೆ ಹೆಚ್.ಜೆ. ಗೌರಮ್ಮ, ಸಮಿತಿಯ ಪ್ರಮುಖರಾದ ಪದ್ಮಮ್ಮ, ಮಲ್ಲಿಗೆ, ರುಕ್ಮಿಣಿ, ಓಲಂ ಸುಜಾತ, ಇಂದ್ರಮ್ಮ, ಕಮಲಮ್ಮ, ಮಣಿಯಮ್ಮ, ಸುಮ, ಗುಲಾಬಿ ಮೊದಲಾದವರಿದ್ದರು.