ಕೂಡಿಗೆ, ಮೇ. ೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಬೇಸಿಗೆ ಬೆಳೆಯಾಗಿ ಬೆಳೆಯಲಾಗಿದ್ದ ಮೆಕ್ಕೆಜೋಳ, ಮತ್ತು ಸಿಹಿ ಗೆಣಸು ಬೆಳೆಯನ್ನು ಕಾಡಾನೆಗಳು ತಿಂದು ತುಳಿದು ನಷ್ಟ ಪಡಿಸಿವೆ.

ಹುದುಗೂರು ಗ್ರಾಮದ ಕಾಳೇಗೌಡ, ಶಿವರಾಮು , ತಮ್ಮಯ್ಯ ಎಂಬುವರ ಜಮೀನಿಗೆ ದಾಳಿ ಮಾಡಿ ಬೆಳೆಯನ್ನು ನಷ್ಟ ಪಡಿಸಿವೆ. ಅಲ್ಲದೆ ಮನೆ ಮುಂಭಾಗದ ಕಬ್ಬಿಣದ ಗೇಟ್ ಅನ್ನು ಮುರಿದಿವೆ. ಸ್ಥಳಕ್ಕೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.