ಕುಶಾಲನಗರ, ಮೇ ೨: ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕುಶಾಲನಗರ ಕೇರಳ ಸಮಾಜ ಖಂಡಿಸಿದೆ. ಕುಶಾಲನಗರ ಕೇರಳ ಸಮಾಜ ಕಟ್ಟಡ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ರವೀಂದ್ರನ್ ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಸಭೆ ಸೇರಿ ಹತ್ಯೆಗೆ ಒಳಗಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

ಇಂತಹ ಘಟನೆಯನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ. ಕೇಂದ್ರ ಸರ್ಕಾರ ಈ ಘಟನೆಯ ಹಿಂದೆ ಇರುವ ಭಯೋತ್ಪಾದಕರನ್ನು, ಸಂಘಟನೆಯನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಸಮಾಜದ ಉಪಾಧ್ಯಕ್ಷ ಕೆ. ಬಾಬು, ಕಾರ್ಯದರ್ಶಿ ಕೆ.ಜೆ. ರಾಬಿನ್, ಜಂಟಿ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ. ಆನಂದ್ ಮತ್ತು ನಿರ್ದೇಶಕರು ಇದ್ದರು.